ETV Bharat / bharat

ಮದುವೆಯಾಗಿ ಮಕ್ಕಳಿದ್ದರೂ ಒಂಟಿ ವಾಸ: ಮಹಿಳೆಯರ ಒಳ ಉಡುಪು ಧರಿಸಿ ಬ್ಯಾಂಕ್ ಮ್ಯಾನೇಜರ್​​ ಆತ್ಮಹತ್ಯೆ

ಪಂಜಾಬ್‌ನ ಲುಧಿಯಾನ ನಗರದಲ್ಲಿ ಮಹಿಳೆಯರ ಒಳ ಉಡುಪು ಧರಿಸಿ ಬ್ಯಾಂಕ್ ಮ್ಯಾನೇಜರ್​​ವೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿದ್ದ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಲುಧಿಯಾನದಲ್ಲಿ ಒಬ್ಬರೇ ವಾಸವಿದ್ದರು.

Crime: Bank manager in Punjab commits suicide, found wearing womens undergarments
ಮಹಿಳೆಯರ ಒಳ ಉಡುಪು ಧರಿಸಿ ಬ್ಯಾಂಕ್ ಮ್ಯಾನೇಜರ್​​ ಆತ್ಮಹತ್ಯೆ
author img

By

Published : Jun 9, 2023, 9:23 PM IST

ಚಂಡೀಗಢ (ಪಂಜಾಬ್‌): ಬ್ಯಾಂಕ್ ಮ್ಯಾನೇಜರ್​​ವೊಬ್ಬರ ಮೃತದೇಹವು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಂಜಾಬ್‌ನ ಲುಧಿಯಾನ ನಗರದಲ್ಲಿ ಶುಕ್ರವಾರ ನಡೆದಿದೆ. ಮೃತ ವ್ಯಕ್ತಿ ಮಹಿಳೆಯರ ಒಳ ಉಡುಪು ಧರಿಸಿರುವುದು ಪತ್ತೆಯಾಗಿದೆ. ಅಲ್ಲದೇ, ಆತನ ಕೋಣೆಯಲ್ಲಿ ಮಹಿಳೆಯರ ಉಡುಪುಗಳು ಸಹ ಪೊಲೀಸರಿಗೆ ಸಿಕ್ಕಿವೆ.

ಇದನ್ನೂ ಓದಿ: ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪು ಕದ್ದೊಯ್ದ ವಿಕೃತಕಾಮಿಗಳು.. ಎಂಥ ಕರ್ಮ ಮಾರ್ರೆ!

ವಿನೋದ್ ಕುಮಾರ್ ಎಂಬವರೇ ಸಾವಿಗೆ ಶರಣಾದ ಮ್ಯಾನೇಜರ್. ಸಾರ್ವಜನಿಕ ವಲಯದ ಬ್ಯಾಂಕ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೂಲತಃ ಫಿರೋಜ್‌ಪುರ ನಿವಾಸಿಯಾದ ಇವರು ಲುಧಿಯಾನದ ಅಮರಪುರ ಬಡಾವಣೆಯ ಮೊದಲ ಮಹಡಿಯ ಮನೆಯಲ್ಲಿ ಬಾಡಿಗೆ ಮಾಡಿಕೊಂಡು ಒಬ್ಬರೇ ವಾಸವಾಗಿದ್ದರು. ಈಗಾಗಲೇ ಮದುವೆ ಕೂಡ ಆಗಿದ್ದು, ಪತ್ನಿ ಮತ್ತು ಮೂವರು ಮಕ್ಕಳು ಫಿರೋಜ್‌ಪುರದಲ್ಲೇ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.

ರಾತ್ರಿ ಮನೆಗೆ ಮರಳಿದ್ದ ವ್ಯಕ್ತಿ ಬೆಳಗ್ಗೆ ಶವವಾಗಿ ಪತ್ತೆ: ಇತ್ತೀಚೆಗೆ ವಿನೋದ್​ ಕುಮಾರ್ ತನ್ನ ಕುಟುಂಬವನ್ನು ಭೇಟಿ ಮಾಡಲು ಫಿರೋಜ್‌ಪುರಕ್ಕೆ ಹೋಗಿದ್ದರು. ಗುರುವಾರ ರಾತ್ರಿ ಲೂಧಿಯಾನದ ಮನೆಗೆ ಮರಳಿದ್ದರು. ಶುಕ್ರವಾರ ಬೆಳಗ್ಗೆ ಮನೆಯ ಕೆಲಸದವರು ಮನೆಯ ಬಾಗಿಲು ತಟ್ಟಿದ್ದಾರೆ. ಆದರೆ, ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮನೆಯ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಮನೆಯ ಮಾಲೀಕರು ಬಂದಾಗಲೂ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: Belagavi Crime: ಕುಡಿತದಿಂದ ಕೌಟುಂಬಿಕ ಕಲಹ.. ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

ನಂತರ ಪೊಲೀಸರು ಸ್ಥಳ್ಕಕಾಗಮಿಸಿ ಬಾಗಿಲು ಮುರಿದು ಮನೆಯೊಳಗೆ ಹೋಗಿದ್ದಾರೆ. ಆಗ ಸೀಲಿಂಗ್‌ಗೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಜೊತೆಗೆ, ಮೃತ ವಿನೋದ್​ ಕುಮಾರ್ ಮಹಿಳೆಯರ ಉಡುಪು ಧರಿಸಿರುವುದು ಕೂಡ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡು ಬಗ್ಗೆ ಅನುಮಾನ ಇದೆ. ಇದರೊಂದಿಗೆ ಅಪರೂಪದ ಪ್ರಕರಣವೂ ಆಗಿದೆ ಎಂದು ಪೊಲೀಸ್​ ಅಧಿಕಾರಿ ತನಿಖಾಧಿಕಾರಿ ಆತ್ಮರಾಮ್ ತಿಳಿಸಿದ್ದಾರೆ.

ಮುಂದುವರೆದು, ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಮೊಬೈಲ್ ಫೋನ್ ​ಅನ್ನು ಸೈಬರ್ ಸೆಲ್‌ಗೆ ನೀಡಲಾಗಿದೆ. ಉಮೇಶ್​ ಕುಮಾರ್​ ಕಳೆದ ಎರಡು ವರ್ಷಗಳಿಂದ ಲುಧಿಯಾನದಲ್ಲಿ ಒಬ್ಬರೇ ವಾಸವಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಉಳ್ಳಾಲದಲ್ಲಿ ಒಳ ಉಡುಪು ಕಳುವಿನ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳ್ಳಾಲ ಬೈಲಿನ ಗೇರು ಕೃಷಿ ಸಂಶೋಧನಾ ಕೇಂದ್ರದ ಬಳಿಯ ಮನೆಯಂಗಳದಲ್ಲಿ ಹಾಕಿದ್ದ ಒಳ ಉಡುಪು ಕದ್ದು ವಿಕೃತಕಾಮಿಗಳು ಪರಾರಿಯಾದ ಘಟನೆ ಬೆಳಕಿಗೆ ಬಂದಿತ್ತು. ಅಲ್ಲದೇ, ಮನೆ ಬಾಗಿಲ ಲಾಕರ್​ಗೆ ಕಿಡಿಗೇಡಿಗಳು ಕಾಂಡೋಮ್ ಸಿಕ್ಕಿಸಿ ವಿಕೃತಿ ಮೆರೆದಿದ್ದರು.

ಇದನ್ನೂ ಓದಿ: ಚಾಮರಾಜನಗರದಲ್ಲಿ ಮದ್ಯದೊಂದಿಗೆ ‌ವಿಷ ಸೇವಿಸಿ ಪ್ರಾಣ ಸ್ನೇಹಿತರ ಆತ್ಮಹತ್ಯೆ ಯತ್ನ; ಓರ್ವ ಸಾವು, ಮತ್ತೋರ್ವ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.