ETV Bharat / bharat

ದೆಹಲಿಯಲ್ಲಿ ಖಾಸಗಿ ಕಂಪನಿಯ​ ಹಿರಿಯ ಮ್ಯಾನೇಜರ್​ಗೆ ಗುಂಡಿಕ್ಕಿ ಹತ್ಯೆ - ಅಮೆಜಾನ್​ ಹಿರಿಯ ಮ್ಯಾನೇಜರ್ ಕೊಲೆ

ದೆಹಲಿಯಲ್ಲಿ ಖಾಸಗಿ​ ಕಂಪನಿಯ ಹಿರಿಯ ಮ್ಯಾನೇಜರ್​ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದಾರೆ.

Amazon manager shot dead in Delhi
ದೆಹಲಿಯಲ್ಲಿ ಅಮೆಜಾನ್​ ಹಿರಿಯ ಮ್ಯಾನೇಜರ್​ಗೆ ಗುಂಡಿಕ್ಕಿ ಹತ್ಯೆ
author img

By ETV Bharat Karnataka Team

Published : Aug 30, 2023, 3:49 PM IST

Updated : Aug 30, 2023, 6:12 PM IST

ನವದೆಹಲಿ: ಖಾಸಗಿ ಆನ್​ಲೈನ್​ ಶಾಪಿಂಗ್​ ವೆಬ್​ಸೈಟ್​ವೊಂದರ​ ಕಂಪನಿಯಲ್ಲಿ ಹಿರಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಹರ್​ಪ್ರೀತ್​ ಗಿಲ್​ (36) ಕೊಲೆಯಾದ ವ್ಯಕ್ತಿಯಾಗಿದ್ದು, ಇವರ ಸಂಬಂಧಿ ಗೋವಿಂದ್​ ಸಿಂಗ್​ ಎಂಬುವವರು ಕೂಡ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಲ್ಲಿನ ಭಜನಪುರ ಪ್ರದೇಶದ ಸುಭಾಷ್ ವಿಹಾರ ಪ್ರದೇಶದಲ್ಲಿ ಕಳೆದ ರಾತ್ರಿ 11.20ರ ಸುಮಾರಿಗೆ ಐವರು ದುಷ್ಕರ್ಮಿಗಳ ತಂಡ ಇಬ್ಬರ ಮೇಲೂ ಗುಂಡಿನ ದಾಳಿ ನಡೆಸಿದೆ. ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್​ ಆಗಿದ್ದ ಗಿಲ್​ ಅವರಿಗೆ ತಲೆಗೆ ಗುಂಡು ಹಾರಿಸಲಾಗಿದೆ. ತಲೆಯ ಬಲಭಾಗದ ಕಿವಿಯ ಹಿಂದೆ ಹೊಕ್ಕ ಗುಂಡು ಇನ್ನೊಂದು ಬದಿಯಿಂದ ಹೊರಗಡೆ ಬಂದಿದೆ ಎಂದು ದೆಹಲಿಯ ಈಶಾನ್ಯ ವಿಭಾಗದ ಉಪ ಪೊಲೀಸ್​ ಆಯುಕ್ತ ಜೋಯ್​ ಟೆಕ್ರಿ ತಿಳಿಸಿದ್ದಾರೆ.

ಗುಂಡೇಟಿನ ನಂತರ ಗಿಲ್​ ಅವರನ್ನು ಜಗ್​ ಪ್ರವೇಶ್ ಚಂದ್ರ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗಾಯಾಳು ಸಿಂಗ್​ ಅವರನ್ನು ಲೋಕ್​ ನಾಯಕ್​ ಜೈಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಿಲ್​ ಹಾಗೂ ಸಿಂಗ್​ ಇಬ್ಬರು ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್​ ಹಾಗೂ ಬೈಕ್​ ಮೇಲೆ ಬಂದ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ಮಾಡಿದೆ. ಈ ಕೃತ್ಯಕ್ಕೆ ಈವರೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ಹಾಗೂ ದಾಳಿಕೋರರ ಪತ್ತೆಗೆ ಆರು ಪೊಲೀಸ್​ ತಂಡಗಳನ್ನು ರಚಿಸಲಾಗಿದೆ. ಅಲ್ಲದೇ, ಆರೋಪಿಗಳ ಗುರುತು ಪತ್ತೆ ಹಚ್ಚಲು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.

ಪೊಲೀಸ್​ ಪ್ರಾಥಮಿಕ ತನಿಖೆ ಪ್ರಕಾರ, ಈ ಘಟನೆಗೂ ಮುನ್ನ ಎರಡು ಕಡೆಗಳಲ್ಲಿ ವಾಗ್ವಾದ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಗಾಯಾಳು ಸಿಂಗ್​ ಹೇಳಿಕೆ ಪ್ರಕಾರ, ದಾಳಿಕೋರರೆಲ್ಲರೂ 18-19 ವರ್ಷದೊಳಗಿನ ಯುವಕರಾಗಿದ್ದಾರೆ. ಸದ್ಯಕ್ಕೆ ಸ್ಥಳೀಯ ಕ್ರಿಮಿನಲ್​ ಮಾಯಾ ಎಂಬಾತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ಹರ್​ಪ್ರೀತ್​ ಗಿಲ್ ಪೋಷಕರು ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ. ರಾತ್ರಿ 10.30ರ ಸುಮಾರಿಗೆ ಹರ್​​ಪ್ರೀತ್​ ಊಟಕ್ಕೆ ಹೊರಗಡೆ ಹೋಗುವುದಾಗಿ ತನ್ನ ತಾಯಿಗೆ ಹೇಳಿ ತೆರಳಿದ್ದ. ಆತನ ಜೊತೆಗೆ ಸಹೋದರ ಸಂಬಂಧಿ ಕೂಡ ಇದ್ದ. ಅಲ್ಲದೇ, ನಮ್ಮ ಮಗನಿಗೆ ಯಾರೂ ಶ್ರತುಗಳು ಇರಲಿಲ್ಲ. ಆತನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ತಂದೆ ಕಾರ್ನೈಲ್​ ಸಿಂಗ್​ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ಐವರು ಸೆರೆ

Last Updated : Aug 30, 2023, 6:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.