ETV Bharat / bharat

ಜಿಯೋ ಸಹಯೋಗದಲ್ಲಿ ಆಗ್ಮೆಂಟೆಡ್-ರಿಯಾಲಿಟಿ ಆಧಾರಿತ 'ಯಾತ್ರಾ' ಗೇಮ್ ಪರಿಚಯಿಸಿದ ಕ್ರಿಕಿ - Cricky

ಜಿಯೋ ರಿಯಾಲಿಟಿ ಮೊಬೈಲ್ ಗೇಮಿಂಗ್ ಸಂಸ್ಥೆಯು ಕ್ರಿಕಿ ಸಹಯೋಗದೊಂದಿಗೆ ವಿಶಿಷ್ಟ 'ಯಾತ್ರಾ' ಎಂಬ ಹೊಸ ಆಗ್ಮೆಂಟೆಡ್ ರಿಯಾಲಿಟಿ ಗೇಮ್​ ಸಿದ್ದಪಡಿಸಿದೆ.

dcsd
'ಯಾತ್ರಾ' ಗೇಮ್ ಪರಿಚಯಿಸಿದ ಕ್ರಿಕಿ
author img

By

Published : Dec 3, 2020, 11:02 AM IST

ಬೆಂಗಳೂರು: ರಿಯಾಲಿಟಿ ಮೊಬೈಲ್ ಗೇಮಿಂಗ್ ಸಂಸ್ಥೆ ಕ್ರಿಕಿ, 'ಯಾತ್ರಾ' ಎಂಬ ಹೊಸ ಆಗ್ಮೆಂಟೆಡ್ ರಿಯಾಲಿಟಿ ಗೇಮ್ ಅ​ನ್ನು ಜಿಯೋ ಸಹಯೋಗದೊಡನೆ ಭಾರತದಲ್ಲಿ ಪರಿಚಯಿಸಿದೆ.

ಸೀರೀಸ್ ಎ ಫಂಡಿಂಗ್ ಸುತ್ತನ್ನೂ ಮುನ್ನಡೆಸಿದ ಜಿಯೋ, ಕ್ರಿಕಿ ಪಡೆದ ಒಟ್ಟು ಹೂಡಿಕೆಯನ್ನು 22 ಮಿಲಿಯನ್ ಡಾಲರ್​ಗಳಿಗೆ ಕೊಂಡೊಯ್ದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕ್ರಿಕಿ ಸಂಸ್ಥಾಪಕರಾದ ಜಾಹ್ನವಿ ಮತ್ತು ಕೇತಕಿ ಶ್ರೀರಾಮ್, "ತಲ್ಲೀನಗೊಳಿಸುವ ರೀತಿಯಲ್ಲಿ ಸ್ಫೂರ್ತಿ ಮತ್ತು ವಾಸ್ತವವನ್ನು ಒಂದುಗೂಡಿಸುವುದು ಕ್ರಿಕಿಯೊಂದಿಗಿನ ನಮ್ಮ ದೃಷ್ಟಿಕೋನವಾಗಿದೆ. ಆಗ್ಮೆಂಟೆಡ್ ರಿಯಾಲಿಟಿಯೊಂದಿಗೆ, ನಿಮ್ಮ ಮೊಬೈಲ್ ಫೋನ್‌ನ ಕಿಟಕಿಯ ಮೂಲಕ ಫ್ಯಾಂಟಸಿ ಪ್ರಪಂಚಗಳನ್ನು ನೇರವಾಗಿ ನಿಮ್ಮ ಮನೆಗೆ ತರಲು ನಮಗೆ ಸಾಧ್ಯವಾಗುತ್ತದೆ" ಎಂದಿದ್ದಾರೆ.

ಕೇವಲ ತಮ್ಮ ಮೊಬೈಲ್ ಫೋನ್ ಕ್ಯಾಮೆರಾದೊಂದಿಗೆ, ಆಟಗಾರರು ಯಾತ್ರಾದ ಆ್ಯಕ್ಷನ್-ಸಾಹಸಗಾಥೆಯನ್ನು ಪ್ರವೇಶಿಸಬಹುದು ಹಾಗೂ ಮಾನ್‌ಸ್ಟರ್‌ಗಳ ಸೈನ್ಯವನ್ನು ಸೋಲಿಸುವ ಅನ್ವೇಷಣೆಗೆ ಸೇರಬಹುದು. ಬಿಲ್ಲು ಮತ್ತು ಬಾಣ, ಚಕ್ರ, ಮಿಂಚು ಮತ್ತು ಫೈರ್ ಬೋಲ್ಟ್‌ಗಳಂತಹ ಶಸ್ತ್ರಾಸ್ತ್ರಗಳನ್ನು ಬಳಸಿ, ಆಟಗಾರರು ವಿವಿಧ ಹಂತದ ಯುದ್ಧ ಮತ್ತು ಪಜಲ್ ಗೇಮ್‌ಗಳ ಮೂಲಕ ಹೋರಾಡಬಹುದು. ಬಳಕೆದಾರರು ತಮ್ಮ ಆಟವನ್ನು ಪೂರ್ಣಗೊಳಿಸಿದ ನಂತರ, ವೈಯಕ್ತಿಕಗೊಳಿಸಿದ ವಿಡಿಯೋವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಇತರ ಬಳಕೆದಾರರು ಪೋಸ್ಟ್ ಮಾಡಿದ ಆಟದ ವಿಡಿಯೋಗಳನ್ನು ನೋಡಲು ವಿಡಿಯೋ ಫೀಡ್‌ಗಳು ಮತ್ತು ಡಿಜಿಟಲ್ ತರಬೇತಿ ಮೈದಾನ ಕೂಡ ಲಭ್ಯವಿದ್ದು, ಮತ್ತೆ ಆಡುವ ಮೊದಲು ಆಟಗಾರರು ಅಲ್ಲಿ ತಮ್ಮ ಬಿಲ್ಲು - ಬಾಣದ ಕೌಶಲ್ಯವನ್ನು ಅಭ್ಯಾಸ ಮಾಡಬಹುದು.

ಜಿಯೋ ಬಳಕೆದಾರರಿಗೆ ಈ ವಿಶೇಷ ಸೌಲಭ್ಯಗಳು ದೊರಕುತ್ತಿವೆ: 3ಡಿ ಅವತಾರ್ ವೈಶಿಷ್ಟ್ಯಗಳು ಹೀಗಿವೆ- ಹೆಚ್ಚುವರಿ ಶಸ್ತ್ರಾಸ್ತ್ರಗಳು ಮತ್ತು ಪವರ್‌ಗಳನ್ನು ಅನ್‌ಲಾಕ್ ಮಾಡಲು ಗೇಮ್‌ಪ್ಲೇ ಟೋಕನ್‌ಗಳು - ಗೇಮ್ ಲೆವೆಲ್‌ಗಳು.

ಈ ಸಂದರ್ಭದಲ್ಲಿ ಮಾತನಾಡಿದ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, "ಆಗ್ಮೆಂಟೆಡ್ ರಿಯಾಲಿಟಿಯನ್ನು ಅಂಗೀಕರಿಸಲು ಕ್ರಿಕಿ ಒಂದು ಇಡೀ ಪೀಳಿಗೆಯ ಭಾರತೀಯರನ್ನು ಪ್ರೇರೇಪಿಸಲಿದೆ. ಪ್ರಪಂಚದೆಲ್ಲೆಡೆಯ ಅತ್ಯುತ್ತಮ ಅನುಭವಗಳನ್ನು ಭಾರತಕ್ಕೆ ತರುವುದು ನಮ್ಮ ದೃಷ್ಟಿಕೋನವಾಗಿದೆ. ಯಾತ್ರಾದ ಪರಿಚಯವು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಆಗ್ಮೆಂಟೆಡ್ ರಿಯಾಲಿಟಿ ಗೇಮಿಂಗ್ ಬಳಕೆದಾರರನ್ನು ತನ್ನದೇ ಆದ ಜಗತ್ತಿನೊಳಕ್ಕೆ ಕರೆದೊಯ್ಯುತ್ತದೆ ಮತ್ತು ಯಾತ್ರಾ ಮೂಲಕ ಆಗ್ಮೆಂಟೆಡ್ ರಿಯಾಲಿಟಿಯನ್ನು (AR) ಅನುಭವಿಸಲು ನಾವು ಜಿಯೋ ಮತ್ತು ಬೇರೆಲ್ಲ ಸೇವೆಗಳ ಪ್ರತಿಯೊಬ್ಬ ಬಳಕೆದಾರರನ್ನೂ ಆಹ್ವಾನಿಸುತ್ತೇವೆ ಎಂದರು. ಕ್ರಿಕಿ ಈಗ ಐಒಎಸ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌‌ಗಳಲ್ಲಿ ಉಚಿತವಾಗಿ ಲಭ್ಯವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.