ಅಲ್ವಾರ್ (ರಾಜಸ್ಥಾನ): ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಮಗಳು ಸಾರಾ ತಮ್ಮ ಸ್ನೇಹಿತೆಯರೊಂದಿಗೆ ರಾಜಸ್ಥಾನದ ಸರಿಸ್ಕಾ ಹುಲಿ ಮೀಸಲು ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಸರಿಸ್ಕಾ ಆಡಳಿತ ಮಂಡಳಿ ಇವರನ್ನು ಸ್ವಾಗತಿಸಿತು. ನಂತರ ಅವರು ಕಾಡಿನಲ್ಲಿ ಗೆಳತಿಯರೊಂದಿಗೆ ಸಫಾರಿ ಆನಂದಿಸಿದರು. ಈ ವೇಳೆ ಹುಲಿ ಕಂಡು ಎಲ್ಲರೂ ರೋಮಾಂಚನಗೊಂಡರು. ಇವರೊಂದಿಗೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಸುನಿಲ್ ಮೆಹ್ತಾ ಮತ್ತು ಅನ್ನಿ ಮೆಹ್ತಾ ಸಹ ಭಾಗಿಯಾಗಿದ್ದರು.
ಅಂಜಲಿ ಮತ್ತು ಇತರ ಸದಸ್ಯರು ಜಿಪ್ಸಿಯಲ್ಲಿ ಸರಿಸ್ಕಾ ಜಂಗಲ್ ಪ್ರವಾಸ ಕೈಗೊಂಡರು. ಅವರು ಸದರ್ ಶ್ರೇಣಿಯ ಮುಂದೆ ಟೈಗ್ರೆಸ್ ಎಸ್ಟಿ -9 ಅನ್ನು ನೋಡಿದರು. ಅದೇ ಸಮಯದಲ್ಲಿ, ಕಲಾಕುವಾನ್ ಅರಣ್ಯ ಪ್ರದೇಶದಲ್ಲಿ ಹುಲಿ ಎಸ್ಟಿ -21 ಸಹ ಕಾಣಿಸಿಕೊಂಡಿತು. ಕಾಳಿಘಾಟ್ ಮೂಲಕ ಭಾಗಾನಿಯ ಅರಣ್ಯವನ್ನು ತಲುಪಿದಾಗ, ಅವರು ಹುಲಿ ಎಸ್ಟಿ -3 ಅನ್ನು ನೋಡಿದರು.
ಇದನ್ನೂ ಓದಿ: ಅಸ್ಸೋಂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ನೌಕರರೊಂದಿಗೆ ರಾಹುಲ್ ಸಂವಾದ ಇಂದು
ಅಂಜಲಿ, ಸಾರಾ ಮತ್ತು ಇತರ ಸದಸ್ಯರು ಒಂದರ ನಂತರ ಒಂದು ಹುಲಿಯನ್ನು ನೋಡಿ ಸಂತಸಗೊಂಡರು. ಅಂಜಲಿ ತೆಂಡೂಲ್ಕರ್ ಅವರಿಗೆ ಸರಿಸ್ಕಾ ಅರಣ್ಯದ ಬಗ್ಗೆ ಡಿಎಫ್‌ಒ ಸುದರ್ಶನ್ ಶರ್ಮಾ ಮಾಹಿತಿ ನೀಡಿದರು.