ETV Bharat / bharat

‘ಅಟ್ಲಿಸ್ಟ್​​ ಫ್ರೆಂಡ್ಸ್​​ ಆಗಿರೋಣ’.. ಒಪ್ಪದ ಯುವತಿಯನ್ನು ಕೊಂದೇಬಿಟ್ಟ, ಶವವನ್ನು ಮತ್ತೆ ಮತ್ತೆ ಕೊಚ್ಚಿದ ಭಗ್ನಪ್ರೇಮಿ!

ಆತನಿಗೆ ಈಗ 19 ವರ್ಷ. ಈ ಚಿಕ್ಕ ವಯಸ್ಸಿನಲ್ಲಿ ಆ ಯುವಕ ಒಬ್ಬಳನ್ನು ತುಂಬಾ ಇಷ್ಟಪಟ್ಟಿದ್ದ. ಬೇರೆ ಯುವಕನಂತೆ ಫೋನ್​ ಮಾಡಿ ಯುವತಿಯೊಂದಿಗೆ ಪರಿಚಯ ಬೆಳೆಸಿಕೊಂಡ. ಬಳಿಕ ತನ್ನ ಪ್ರೀತಿ ವ್ಯಕ್ತಪಡಿಸಿದ್ದನು. ಆದ್ರೆ ಆಕೆ ನಿರಾಕರಿಸಿದಳು. ಆಯ್ತು ಪ್ರೀತಿ ಬೇಡ ಅಟ್ಲಿಸ್ಟ್​​ ಫ್ರೆಂಡ್ಸ್​​ ಆಗಿರೋಣ ಎಂದು ಯುವಕ ಬೇಡಿಕೊಂಡಿದ್ದಾನೆ. ಆದ್ರೆ ಯುವತಿ ಇದನ್ನೂ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಆಡಿದ ನಾಟಕ ಬೆಳಕಿಗೆ ಬಂದಿದ್ದು ಹೀಗೆ...

Uttara Pradesh crime news  bareilly crime news  Crazy lover killed her  killed the girl in bareilly  Bareilly love issue  ಉತ್ತರಪ್ರದೇಶದಲ್ಲಿ ಯುವತಿಯ ಕೊಲೆ ಮಾಡಿದ ಭಗ್ನಪ್ರೇಮಿ  ಬರೇಲಿ ಅಪರಾಧ ಸುದ್ದಿ  ಬರೇಲಿ ಯುವತಿಯ ಕೊಲೆ  ಉತ್ತರಪ್ರದೇಶ ಅಪರಾಧ ಸುದ್ದಿ
ಒಪ್ಪದ ಯುವತಿಯನ್ನು ಸಾಯಿಸಿದವನು ಮತ್ತೆ ಕೊಚ್ಚಿ-ಕೊಚ್ಚಿ ಕೊಂದ ಭಗ್ನಪ್ರೇಮಿ
author img

By

Published : Apr 9, 2022, 12:39 PM IST

ಬರೇಲಿ(ಉತ್ತರ ಪ್ರದೇಶ): ಭಗ್ನ ಪ್ರೇಮಿಯೊಬ್ಬ ಪೊಲೀಸ್​ ಕಟ್ರೋಲ್​ ರೂಂಗೆ ಕರೆ ಮಾಡಿ ‘ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಆಕೆ ಒಪ್ಪಲಿಲ್ಲವೆಂದ್ರೆ ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಕರೆ ಮಾಡಿದ್ದಾನೆ. ಮರು ದಿನ ಭಗ್ನ ಪ್ರೇಮಿ ಯುವತಿಯೊಬ್ಬಳನ್ನು ಕೊಲೆ ಮಾಡಿ ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಈ ಪ್ರಕರಣವನ್ನು ಬೆನ್ನತ್ತಿ ಹೋದಾಗ ಅಚ್ಚರಿ ಮೇಲೊಂದು ಅಚ್ಚರಿ ಸಂಗತಿಗಳು ಹೊರ ಬಿದ್ದಿವೆ.

ಏನಿದು ಘಟನೆ: ಬರೇಲಿಯ ಭಮೋರಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪಿಯು ವಿದ್ಯಾರ್ಥಿನಿ ಶಿವಾನಿ ಶವ ಬುಧವಾರ ಬೆಳಗ್ಗೆ ಪೊಲೀಸರಿಗೆ ನೀರಿನ ಹೊಂಡದಲ್ಲಿ ಪತ್ತೆಯಾಗಿದೆ. ಹರಿತವಾದ ಆಯುಧದಿಂದ ಇರಿದು ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶವವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ ಬರೇಲಿ ಪೊಲೀಸರಿಗೆ ಶಾಕ್​ ಮೇಲೆ ಶಾಕ್​ ಆಗಿದೆ.

ತನಿಖೆ ಆರಂಭ : ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮೊದಲಿಗೆ ಶಿವಾನಿ ಫೋನ್​ ಕರೆಗಳನ್ನು ಪರಿಶೀಲಿಸಿದ್ದಾರೆ. ಶಿವಾನಿ ಕೊನೆಯಾದಾಗಿ ಅಜಯ್​ ಎಂಬ ಯುವಕನೊಂದಿಗೆ ಮಾತನಾಡಿದ್ದಾಳೆ. ಕೂಡಲೇ ಪೊಲೀಸರು ಅಜಯ್​ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದರು. ಈ ವೇಳೆ ಅಜಯ್​ ಆ ಫೋನ್​ ನಂದು. ಆದ್ರೆ ನನ್ನ ಫೋನ್​ ಏಪ್ರಿಲ್​ 4ರಂದು ಕಳ್ಳತನವಾಗಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾನೆ. ಈ ಮೂಲಕ ಶಿವಾನಿ ಜೊತೆ ಮಾತನಾಡಿದ್ದು ಅಜಯ್​ ಅಲ್ಲ ಎಂಬುದು ಪೊಲೀಸರಿಗೆ ತಿಳಿಯಿತು. ಹಾಗಾದ್ರೆ ಶಿವಾನಿ ಜೊತೆ ಮಾತನಾಡಿದ್ದು ಯಾರು ಎಂಬುದನ್ನು ತಿಳಿಯಲು ಪೊಲೀಸರು ಮತ್ತೆ ತನಿಖೆ ಆರಂಭಿಸಿದರು.

ಯಾರ್​ ಅವನು?: ತನಿಖೆ ಸಂದರ್ಭದಲ್ಲಿ ಅಜಯ್ ಕದ್ದ ನಂಬರ್‌ನ ಕರೆ ವಿವರಗಳನ್ನು ಪೊಲೀಸರು ಪಡೆದಾಗ ಮತ್ತೊಂದು ಕಥೆ ಮುನ್ನೆಲೆಗೆ ಬಂತು. ಪೊಲೀಸರು ಆ ಕರೆ ಬಗ್ಗೆ ಅಜಯ್‌ನನ್ನು ಕೇಳಿದಾಗ ಆ ಕರೆ ಮಾಡಿದ್ದು ನಾನಲ್ಲ, ಗ್ರಾಮದ ನಿವಾಸಿ ವಿಕಾಸ್ (19 ವರ್ಷ) ಎಂಬಾತನು ಎಂದು ಹೇಳಿದ್ದಾನೆ. ನಂತರ ಪೊಲೀಸರು ವಿಕಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಂಟರ್ ವಿದ್ಯಾರ್ಥಿಯ ಕೊಲೆಯ ಸಂಪೂರ್ಣ ಕಥೆ ಬಯಲು ಮಾಡಿದ್ದಾನೆ. ಇಷ್ಟೇ ಅಲ್ಲ, ಮತ್ತೊಂದು ಬೆದರಿಕೆಯ ಕರೆ ಮಾಡಿದ್ದು ಈತನೇ ಎಂಬುದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಆರೋಪಿ ಹೇಳಿದ್ದೇನು?: ವಿಕಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಲು ಬಯಸಿರುವುದಾಗಿ ತಿಳಿಸಿದ್ದಾನೆ. ಮೊದಲಿಗೆ ನಾನು ಅಜಯ್​ನ ಮೊಬೈಲ್ ಕದ್ದಿದ್ದೇನೆ. ಬಳಿಕ ಶಿವಾನಿ ಜೊತೆ ಸ್ನೇಹ ಬೆಳೆಸಲು ಮುಂದಾದೆ. ಬಳಿಕ ಆಕೆಗೆ ರಾಹುಲ್ ಎಂದು ಫೋನ್​ನಲ್ಲಿ ಮಾತನಾಡುತ್ತಿದ್ದೆ ಎಂದು ಹೇಳಿದ್ದಾನೆ.

ಮೊದಲ ಭೇಟಿ: ಮಂಗಳವಾರ ತಡರಾತ್ರಿ ಆಕೆಯನ್ನು ಭೇಟಿಯಾಗಲು ನಿರ್ಜನ ಸ್ಥಳವೊಂದಕ್ಕೆ ಬರುವಂತೆ ಹೇಳಿದ್ದೆ. ಆಕೆ ಅಲ್ಲಿಗೆ ಬಂದಾಗ ನನ್ನ ನೋಡಿ ರಾಹುಲ್​ ಎಲ್ಲಿ ಎಂದು ಕೇಳಿದ್ದಳು. ಕೆಲವೇ ಸಮಯದಲ್ಲಿ ರಾಹುಲ್ ಬರುತ್ತಾನೆ ಎಂದು ಹೇಳಿದೆ. ಎಷ್ಟು ಹೊತ್ತಾದರೂ ರಾಹುಲ್ ಬಾರದೆ ಹಿನ್ನೆಲೆ ಶಿವಾನಿ ಮನೆಗೆ ಹೋಗಲು ಇಚ್ಛಿಸಿದಳು. ಈ ವೇಳೆ ನಾನು ಆಕೆಯ ಕೈ ಹಿಡಿದು ನನ್ನ ಪ್ರೀತಿ ವಿಷಯವನ್ನು ಪ್ರಸ್ತಾಪಿಸಿದೆ. ಆದ್ರೆ ಆಕೆ ನಿರಾಕರಿಸಿದಳು ಎಂದು ವಿಕಾಸ್​ ಪೊಲೀಸರ ಮುಂದೆ ಹೇಳಿದ್ದಾನೆ.

ಅಟ್ಲಿಸ್ಟ್​​ ಫ್ರೆಂಡ್ಸ್​​ ಆಗಿರೋಣಾ: ತನ್ನ ಪ್ರೀತಿ ನಿರಾಕರಿಸಿದ ಬಳಿಕ ವಿಕಾಸ್​ ಆಕೆಗೆ ಇಬ್ಬರು ಫ್ರೆಂಡ್ಸ್​ ಆಗಿರೋಣ ಎಂದಿದ್ದಾನೆ. ಆದ್ರೆ ಯುವತಿ ಇದಕ್ಕೂ ನಿರಾಕರಿಸಿದಲ್ಲದೇ ನಮ್ಮ ಕುಟುಂಬಸ್ಥರಿಗೆ ಹೇಳುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಇದರಿಂದ ಸಿಟ್ಟಿಗೆದ್ದ ವಿಕಾಸ್​ ದುಪ್ಪಟ್ಟಾದಿಂದ ಆಕೆಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಶಿವಾನಿ ಮೃತದೇಹವನ್ನು ಅಲ್ಲೆ ಸಮೀಪದ ನೀರಿನ ಹೊಂಡದಲ್ಲಿ ಬಿಸಾಕಿ ಹೋಗಿದ್ದಾನೆ.

ಸತ್ತವಳನ್ನು ಮತ್ತೆ ಮತ್ತೆ ಸಾಯಿಸಿದ ಕ್ರೂರಿ: ವಿಕಾಸ್​ ಕೊಲೆ ಮಾಡಿದ ಬಳಿಕ ಮನೆಗೆ ತೆರಳಿದ್ದಾನೆ. ಮನೆಯಲ್ಲಿ ಶಿವಾನಿ ಬದುಕಿದ್ದರೆ ನನ್ನ ಬಣ್ಣ ಬಯಲಾಗುತ್ತದೆ ಎಂಬುದು ಅರಿವಾಗಿದೆ. ಕೂಡಲೇ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಘಟನಾಸ್ಥಳಕ್ಕೆ ತೆರಳಿದ್ದಾನೆ. ಆಮೇಲೆ ವಿದ್ಯಾರ್ಥಿನಿ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಕೊಲೆ ಮಾಡಿರುವುದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಅಂತಾ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರವಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಂಟ್ರೋಲ್​ ರೂಂಗೆ ಕರೆ : ಆರೋಪಿ ವಿಕಾಸ್ ಏಪ್ರಿಲ್​ 4ರಂದು ಕದ್ದಿದ್ದ ಅಜಯ್ ಫೋನ್​ನಿಂದ ಬರೇಲಿಯ ಅಯೋನ್ಲಾ ಪೊಲೀಸ್ ಠಾಣೆಯ ನಿವಾಸಿ ಹುಡುಗಿಗೆ ಕರೆ ಮಾಡಿ ಸ್ನೇಹಿತರಾಗಿರಲು ಕೇಳಿದ್ದನು, ಆದರೆ ಅವಳು ನಿರಾಕರಿಸಿದ್ದಾಳೆ. ಬಳಿಕ ಆರೋಪಿ ವಿಕಾಸ್​ ಇತರ ಅನೇಕ ಹುಡುಗಿಯರಿಗೂ ಕರೆ ಮಾಡಿದ್ದನು. ಈ ವೇಳೆ ಪೊಲೀಸ್​ ಕಂಟ್ರೋಲ್​ ರೂಂಗೆ ಕರೆ ಮಾಡಿ ಯುವತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಈ ಬಗ್ಗೆ ಆರೋಪಿ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲು: ಈ ಘಟನೆ ಕುರಿತು ಭಮೋರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.