ETV Bharat / bharat

ವರನ ಮುಂದೆ ವಧುವಿಗೆ ಸಿಂಧೂರ ಇಡಿಸಿದ ಹುಚ್ಚು ಪ್ರೇಮಿ.. ಗ್ರಾಮಸ್ಥರಿಂದ ಥಳಿತ - ಬಿರಾನ್ ಪೊಲೀಸ್ ಠಾಣೆ

ಗಾಜಿಪುರದಲ್ಲಿ ಹುಚ್ಚು ಪ್ರೇಮಿಯೊಬ್ಬ ವಿವಾಹದ ವೇಳೆ ವಧುವಿನ ಹಣೆಗೆ ಸಿಂಧೂರ ಇಡಿಸಿದ್ದಾನೆ. ಇದರಿಂದ ವರ ಅವಳನ್ನು ವಿವಾಹವಾಗುವುದನ್ನು ನಿರಾಕರಿಸಿದ್ದಾನೆ. ತದನಂತರ ಗ್ರಾಮಸ್ಥರು ಅವನನ್ನು ಥಳಿಸಿದ್ದಾರೆ.

ವರನ ಮುಂದೆ ವಧುವಿಗೆ ಸಿಂಧೂರವಿಡಿಸಿದ ಹುಚ್ಚು ಪ್ರೇಮಿ

author img

By

Published : May 18, 2023, 9:32 PM IST

ಎಸ್ಪಿ ಓಂವೀರ್ ಸಿಂಗ್

ಘಾಜಿಪುರ (ಉತ್ತರ ಪ್ರದೇಶ): ಇಲ್ಲಿನ ವಿವಾಹ ಸಂಭ್ರಮದ ವಿಧಿವಿಧಾನಗಳ ನಡುವೆಯೇ ಹುಚ್ಚು ಪ್ರೇಮಿಯೊಬ್ಬ ವಧುವಿನ ಹಣೆಗೆ ಸಿಂಧೂರ ಹಚ್ಚಿದ ವಿಲಕ್ಷಣ ಘಟನೆ ವರನನ್ನು ಮೂಕವಿಸ್ಮಿತರನ್ನಾಗಿಸಿದೆ. ಕಳೆದ ಏಳು ವರ್ಷಗಳಿಂದ ಬಾಲಕಿಗೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಈ ವೇಳೆ, ಮದುವೆಯನ್ನು ರದ್ದುಗೊಳಿಸಲಾಗಿದೆ.

ಬಿರಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ವರನ ಮೆರವಣಿಗೆ ಅದ್ಧೂರಿಯಾಗಿ ಗ್ರಾಮಕ್ಕೆ ಆಗಮಿಸಿತು. ನಂತರ ಅವರಿಗೆ ಅನ್ನಸಂತರ್ಪಣೆ ಮಾಡಿ ವಿವಾಹ ಕಾರ್ಯಕ್ರಮಗಳು ಆರಂಭವಾದವು. ದಂಪತಿಗಳಿಗೆ ಮಾಲೆ ಹಾಕುವ ಕಾರ್ಯಕ್ರಮಕ್ಕೆ ವಧು - ವರರನ್ನು ವೇದಿಕೆಗೆ ಕರೆ ತರಲಾಯಿತು.

ಇದನ್ನೂ ಓದಿ: ಬೆಂಗಳೂರು: ಸಂಬಂಧ ಒಲ್ಲೆ ಎಂದವಳಿಗೆ ಚಾಕು ಇರಿತ.. ಆರೋಪಿ ಬಂಧನ

ಆರೋಪಿ ಯುವಕ ಕೈಯಲ್ಲಿ ಸಿಂಧೂರದೊಂದಿಗೆ ವೇದಿಕೆಗೆ ಆಗಮಿಸಿದಾಗ ದಂಪತಿಗಳಿಬ್ಬರು ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡಿದ್ದರು. ಸಂಬಂಧಿಕರು ಮತ್ತು ಅತಿಥಿಗಳು ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೊದಲೇ ಹುಚ್ಚು ಪ್ರೇಮಿ ವಧುವಿನ ಹಣೆಯ ಮೇಲೆ ಸಿಂಧೂರವನ್ನು ಇಡಿಸಿದ್ದ.

ಮದುವೆ ನಿರಾಕರಿಸಿ ಮನೆಗೆ ಹಿಂದಿರುಗಿದ ವರ: ಈ ಘಟನೆ ಸ್ಥಳದಲ್ಲಿ ಗದ್ದಲಕ್ಕೆ ಕಾರಣವಾಯಿತು ಮತ್ತು ಇದರಿಂದ ಬೇಸರಗೊಂಡ ವರ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಅದರ ನಂತರ ವರನು ತನ್ನ ಸಂಬಂಧಿಕರು ಮತ್ತು ಅತಿಥಿಗಳೊಂದಿಗೆ ಮನೆಗೆ ಹಿಂದಿರುಗಿದ್ದಾನೆ.

ಇದನ್ನೂ ಓದಿ: ಐದು ವರ್ಷಗಳ ಪ್ರೀತಿ, ಮದುವೆ ನಿರಾಕರಿಸಿದ ಯುವತಿ.. 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದ ಪಾಗಲ್​ ಪ್ರೇಮಿ

ಮದುವೆಗೆ ಆಗಮಿಸಿದ್ದ ಅತಿಥಿಗಳು ಯುವಕನನ್ನು ಹಿಡಿದು ಥಳಿಸಿದ್ದಾರೆ ಎಂದು ಎಸ್ಪಿ ಓಂವೀರ್ ಸಿಂಗ್ ಹೇಳಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದೊಂದು ಏಕಪಕ್ಷೀಯ ಪ್ರೇಮ ಪ್ರಕರಣ ಎಂದು ಸಿಂಗ್ ಹೇಳಿದ್ದಾರೆ. ಪ್ರೇಮಿಯು ಹುಡುಗಿಯನ್ನು ಮದುವೆಯಾಗಲು ಬಯಸಿದ್ದನು. ಆದರೆ ಅವಳಿಗೆ ಅವನ ಬಗ್ಗೆ ಅದೇ ಭಾವನೆ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೇರೊಬ್ಬನ ಜೊತೆ ರೀಲ್ಸ್ ಮಾಡಿದಳೆಂದು ಪ್ರಿಯತಮೆಯನ್ನೇ ಕೊಂದ ಪ್ರೇಮಿ: ಆರೋಪಿ ಬಂಧನ

"ತನಿಖೆಯ ಸಮಯದಲ್ಲಿ ಹುಡುಗಿಯ ಮದುವೆಯನ್ನು ಕಳೆದ ವರ್ಷ ನಿಶ್ಚಯಿಸಿರುವುದು ಕಂಡು ಬಂದಿದೆ. ಆದರೆ, ಆರೋಪಿಯು ಆಕೆಯ ಮದುವೆಯನ್ನು ಮುರಿದು ಹುಡುಗಿಗೆ ಬೆದರಿಕೆ ಹಾಕಿದ್ದಾನೆ. ಆ ಸಮಯದಲ್ಲಿ ಯುವಕನ ವಿರುದ್ಧವೂ ಪ್ರಕರಣ ದಾಖಲಾಗಿತ್ತು" ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಸಂಬಂಧಿಕರು ಆರೋಪಿಗಳ ವಿರುದ್ಧ ಮತ್ತೊಮ್ಮೆ ದೂರು ದಾಖಲಿಸಿದ್ದಾರೆ. ಆರೋಪಿಯು ಕಳೆದ ಏಳು ವರ್ಷಗಳಿಂದ ಬಾಲಕಿಗೆ ಕಿರುಕುಳ ನೀಡುತ್ತಿದ್ದು, ಹಲವು ವಿಡಿಯೋಗಳನ್ನು ಕೂಡ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮೋಜು ಮಸ್ತಿ, ಮಾದಕ ಅಮಲಿಗಾಗಿ ಕಳ್ಳತನಕ್ಕಿಳಿದ ಖತರ್ನಾಕ್ ಪ್ರೇಮಿಗಳು ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.