ಭೋಪಾಲ್ (ಮಧ್ಯಪ್ರದೇಶ) :ಭೋಪಾಲ್ನಲ್ಲಿ ಪಶುಸಂಗೋಪನಾ ಇಲಾಖೆಯ ವತಿಯಿಂದ ಉತ್ತಮ ತಳಿ ಹಸುಗಳಿಗೆ ಪ್ರಶಸ್ತಿ ನೀಡುವ ಸ್ಪರ್ಧೆ ಏರ್ಪಾಡು ಮಾಡಲಾಗಿದೆ. ಇದೇ ತಿಂಗಳ ಫೆ.1 ರಿಂದ 15 ರವರೆಗೆ ಸ್ಪರ್ಧೆಯು ರಾಜ್ಯದ ಪ್ರಮುಖ 15 ಜಿಲ್ಲೆಗಳಲ್ಲಿ ನಡೆಯಲಿದೆ. ಮಧ್ಯಪ್ರದೇಶದ ಪಶುಸಂಗೋಪನಾ ಸಚಿವರಾದ ಪ್ರೇಮಸಿಂಗ್ ಪಟೇಲ್ ಅವರು, ಈ ಸ್ಪರ್ಧೆ ಕಾರ್ಯಕ್ರಮವನ್ನು 'ಪಶುಪಾಲನ್ ವಿಕಾಸ್ ಯೋಜನೆ'ಯ ಅಡಿ ಜಾರಿಗೊಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಏನು ಎಂದರೆ ದೇಶ ಮತ್ತು ರಾಜ್ಯದ ಸ್ಥಳೀಯ ಗೋವು ತಳಿಗಳನ್ನು ಉತ್ತೇಜಿಸುವುದಾಗಿದೆ. ಅಲ್ಲದೇ ಸ್ಪರ್ಧೆಯಲ್ಲಿ ಯಾವ ಹಸು ಆರು ಲೀಟರ್ ಅಥವಾ ಅದಕ್ಕಿಂತ ಹೆಚ್ಚು ಹಾಲು ಕರೆಯುವುದೋ ಅದರ ಮಾಲೀಕನಿಗೆ 11,000 ರಿಂದ 51,000 ಸಾವಿರ ನಗದು ಬಹುಮಾನ ನೀಡಲು ನಿರ್ಧಾರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಹಾಲು ಕರೆಯುವ ಈ ಸ್ಪರ್ಧೆಯಲ್ಲಿ ಮಧ್ಯಪ್ರದೇಶದ 45 ಸ್ಥಳೀಯ ಹಸುಗಳು ಮತ್ತು 156 ಭಾರತೀಯ ಮುಂದುವರಿದ ತಳಿಯ ಹಸುಗಳಿಗೆ ಬಹುಮಾನ ನೀಡಲಾಗುವುದು ಎಂದು ಪ್ರೇಮಸಿಂಗ್ ಪಟೇಲ್ ಅವರು ಹೇಳಿದ್ದಾರೆ.
ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಹಸುಗಳಿಗೂ ಸಹಾ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 51,000 ಸಾವಿರ, ದ್ವಿತೀಯ 21,000 ಸಾವಿರ, ಹಾಗೂ ತೃತೀಯ 11 ಸಾವಿರ ರೂ ನೀಡಲಾಗುವುದು. ಇನ್ನೂ ರಾಜ್ಯ ಮಟ್ಟದಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಿಗೆ ಕ್ರಮವಾಗಿ 2 ಲಕ್ಷ ರೂ., 1 ಲಕ್ಷ ರೂ ಹಾಗೂ 50,000 ರೂ. ಮೂರು ಬಹುಮಾನಗಳನ್ನು ಹೊರತುಪಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಉಳಿದ ರಾಸುಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ. ಮಧ್ಯಪ್ರದೇಶದ ಮೂಲ ಗೋವಿನ ಮತ್ತು ಭಾರತೀಯ ಮುಂದುವರೆದ ತಳಿಗಳ ಹಾಲು ಕರೆಯುವ ಸ್ಪರ್ಧೆಯು ಪ್ರತ್ಯೇಕವಾಗಿ ಜಿಲ್ಲೆಗಳಲ್ಲಿ ಸತತ 15 ದಿನಗಳ ಕಾಲ ನಡೆಯಲಿದೆ.
ರಾಜ್ಯದ ಸ್ಥಳೀಯ ತಳಿ ಸ್ಪರ್ಧೆ ಎಲ್ಲಲ್ಲಿ? : ಈ ಕಾರ್ಯಕ್ರಮದ ಉದ್ದೇಶದಂತೆ ಸ್ಥಳೀಯ ಗೋ ತಳಿಗಳನ್ನು ಉತ್ತೇಜಿಸುವುದಾಗಿದೆ. ಅಗರ್-ಮಾಲ್ವಾ, ಶಾಜಾಪುರ, ರಾಜ್‌ಗಢ, ಉಜ್ಜಯಿನಿ, ಇಂದೋರ್, ಖಾಂಡ್ವಾ, ಖರ್ಗೋನ್, ಬುರ್ಹಾನ್‌ಪುರ್, ಬರ್ವಾನಿ, ಧಾರ್, ದಾಮೋಹ್, ಪನ್ನಾ, ಟಿಕಮ್‌ಗಢ, ಛತ್ತರ್‌ಪುರ ಮತ್ತು ನಿವಾರಿ ಸೇರಿದಂತೆ ಪ್ರತ್ಯೇಕವಾಗಿ 15 ಜಿಲ್ಲೆಗಳಲ್ಲಿ ನಡೆಯಸಲು ಸಿದ್ದತೆ ಮಾಡಲಾಗಿದೆ.
ಮಾಲ್ವಿ ತಳಿಯ ಸ್ಪರ್ಧೆ ಎಲ್ಲಲ್ಲಿ? :ಮಾಳ್ವಿ ಗೋ ತಳಿಯ ಮೂಲ ಮಧ್ಯಭಾರತದ ಮಾಳ್ವ ಪ್ರಾಂತ್ಯಕ್ಕೆ ಸೇರಿದ್ದು. ಆದರಿಂದ ಈ ತಳಿಯ ಸ್ಪರ್ಧೆ ಅಗರ್-ಮಾಲ್ವಾ, ಶಾಜಾಪುರ, ರಾಜ್‌ಗಢ, ಉಜ್ಜಯಿನಿ, ಮತ್ತು ಇಂದೋರ್ ಮತ್ತು ನಿಮಾರಿ ತಳಿ ಸ್ಪರ್ಧೆಯು ಖಾಂಡ್ವಾ, ಖರ್ಗೋನ್ ಬುರ್ಹಾನ್‌ಪುರ, ಬರ್ವಾನಿ ಮತ್ತು ಧಾರ್ ಜಿಲ್ಲೆಗಳಲ್ಲಿ ನಡೆಯಲಿದೆ. ಇನ್ನೂ ಉಳಿದಂತೆ ಕೆಂಕಾಥಾ ತಳಿ ಸ್ಪರ್ಧೆಯು ದಾಮೋಹ್, ಪನ್ನಾ, ಟಿಕಮ್‌ಗಢ್, ಛತ್ತರ್‌ಪುರ ಮತ್ತು ನಿವಾರಿ ಸೇರಿದಂತೆ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ನಡೆಯಲಿದೆ.
ಇದನ್ನೂ ಓದಿ :ಹಸು ಸಗಣಿಯಿಂದ ಕಟ್ಟಿದ ಮನೆಗಳು ಪರಮಾಣು ವಿಕಿರಣವನ್ನೂ ತಡೆಯಬಲ್ಲದು: ಗುಜರಾತ್ ಜಡ್ಜ್