ನವದೆಹಲಿ: ಮೇ. 1ರಿಂದ ದೇಶದಲ್ಲಿ 18 ರಿಂದ 44 ವರ್ಷ ವಯಸ್ಸಿನವರಿಗೆ ಕೊರೊನಾ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಇಂದಿನಿಂದಲೇ ಹೆಸರು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಇದಕ್ಕೆ ಚಾಲನೆ ಸಿಗುತ್ತಿದ್ದಂತೆ 18 ವರ್ಷ ಮೇಲ್ಪಟ್ಟ ಅನೇಕರು ಕೋವಿನ್ ಹಾಗೂ ಆರೋಗ್ಯ ಸೇತು ಆ್ಯಪ್ಗಳ ಮೂಲಕ ತಮ್ಮ ಹೆಸರು ನೋಂದಣಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತಮ್ಮ ಹೆಸರು ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ದೂರಿದ್ದಾರೆ.
ವ್ಯಾಕ್ಸಿನ್ ಪಡೆದುಕೊಳ್ಳಲು ಹೆಸರು ನೋಂದಣಿ ಮಾಡಲು ಮುಂದಾಗುತ್ತಿದ್ದಂತೆ ಕೆಲವರು ಸರ್ವರ್ ಡೌನ್ ಸಮಸ್ಯೆ ಎದುರಿಸಿದ್ದು, ಮತ್ತೆ ಕೆಲವರು ಒಟಿಪಿ ಪಡೆದುಕೊಂಡಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ನಿಮಿಷಕ್ಕೆ ಪ್ರತಿ 27 ಲಕ್ಷ ಜನರು ತಮ್ಮ ಹೆಸರು ನೋಂದಣಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಸರ್ವರ್ ಡೌನ್ ಹಾಗೂ ಇತರೆ ಸಣ್ಣ ಪ್ರಮಾಣದ ತೊಂದರೆ ಕಾಣಿಸಿಕೊಂಡಿದೆ ಎಂದು ಹೇಳಿದೆ. ಆದರೆ ಇದೀಗ ಎಲ್ಲವೂ ಸರಿಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.
-
Cowin Portal is working. There was a minor glitch at 4 PM that was fixed. 18 plus can register. pic.twitter.com/c94fpoURcT
— Aarogya Setu (@SetuAarogya) April 28, 2021 " class="align-text-top noRightClick twitterSection" data="
">Cowin Portal is working. There was a minor glitch at 4 PM that was fixed. 18 plus can register. pic.twitter.com/c94fpoURcT
— Aarogya Setu (@SetuAarogya) April 28, 2021Cowin Portal is working. There was a minor glitch at 4 PM that was fixed. 18 plus can register. pic.twitter.com/c94fpoURcT
— Aarogya Setu (@SetuAarogya) April 28, 2021
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಸೇತು ಟ್ವೀಟ್ ಮಾಡಿದ್ದು, ಪೋರ್ಟಲ್ ಇದೀಗ ಕೆಲಸ ಮಾಡ್ತಿದ್ದು, ಯಾವುದೇ ಸಮಸ್ಯೆ ಇಲ್ಲದೇ ನಿಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.