ETV Bharat / bharat

ಭಾರತದಿಂದ ಕುವೈತ್‌ಗೆ 192 ಮೆಟ್ರಿಕ್ ಟನ್ ಹಸುವಿನ ಸಗಣಿ ರಫ್ತು - ಹಸುವಿನ ಸಗಣಿ ರಫ್ತು

ಮೊದಲ ಬಾರಿಗೆ, ಭಾರತ 192 ಮೆಟ್ರಿಕ್ ಟನ್ ಹಸುವಿನ ಸಗಣಿಯನ್ನು ಕುವೈತ್‌ಗೆ ರಫ್ತು ಮಾಡುತ್ತಿದೆ.

India set to export cow dung to Kuwait
ಭಾರತದಿಂದ ಕುವೈತ್‌ಗೆ ಹಸುವಿನ ಸಗಣಿ ರಫ್ತು
author img

By

Published : Jun 12, 2022, 8:51 AM IST

ಜೈಪುರ(ರಾಜಸ್ಥಾನ): ಕುವೈತ್‌ನಿಂದ 192 ಮೆಟ್ರಿಕ್ ಟನ್ ಹಸುವಿನ ಸಗಣಿ ಬೇಡಿಕೆ ಪಡೆದಿರುವುದಾಗಿ ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಅತುಲ್ ಗುಪ್ತಾ ಈಟಿವಿ ಭಾರತಕ್ಕೆ ತಿಳಿಸಿದರು.

ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಇಲ್ಲಿನ ಟೊಂಕ್ ರಸ್ತೆಯಲ್ಲಿರುವ ಶ್ರೀಪಿಂಜ್ರಾಪೋಲ್ ಗೌಶಾಲಾದ ಸನ್‌ರೈಸ್ ಆರ್ಗ್ಯಾನಿಕ್ ಪಾರ್ಕ್‌ನಲ್ಲಿ ನೈಸರ್ಗಿಕ ಗೊಬ್ಬರವಾದ ಹಸುವಿನ ಸಗಣಿಯ ಪ್ಯಾಕೇಜಿಂಗ್ ಮಾಡಲಾಗಿದೆ. ಮೊದಲ ಸರಕು ಜೂನ್‌ 15ರಂದು ಕನಕಪುರ ರೈಲು ನಿಲ್ದಾಣದಿಂದ ಹೊರಡಲಿದ್ದು, ಅಲ್ಲಿಂದ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿ ನಂತರ ಕುವೈತ್‌ಗೆ ರವಾನೆಯಾಗಲಿದೆ.

ಪ್ರಾಣಿ ಉತ್ಪನ್ನಗಳ ರಫ್ತು ಭಾರತೀಯ ಕೃಷಿ ಕ್ಷೇತ್ರಕ್ಕೆ ಪ್ರಮುಖ ಕೊಡುಗೆಯಾಗಿದೆ. ಪ್ರಾಣಿ ಉತ್ಪನ್ನಗಳ ರಫ್ತುಗಳಲ್ಲಿ ಮಾಂಸ, ಕೋಳಿ ಉತ್ಪನ್ನಗಳು, ಪ್ರಾಣಿಗಳ ಚರ್ಮ, ಹಾಲು ಮತ್ತು ಹಾಲಿನ ಉತ್ಪನ್ನಗಳು ಮತ್ತು ಜೇನುತುಪ್ಪ ಸೇರಿವೆ. 2020-21ರಲ್ಲಿ ಭಾರತದಲ್ಲಿ ಪ್ರಾಣಿ ಉತ್ಪನ್ನಗಳ ರಫ್ತು 27,155.56 ಕೋಟಿ ರೂ. ಇತ್ತೀಚೆಗೆ, ಸಾವಯವ ಗೊಬ್ಬರಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿರುವ ಕಾರಣ ಹಸುವಿನ ಸಗಣಿಯನ್ನೂ ರಫ್ತು ಮಾಡಲಾಗುತ್ತಿದೆ.

"ಭಾರತದಲ್ಲಿ ಸುಮಾರು 300 ಮಿಲಿಯನ್ ಜಾನುವಾರುಗಳಿವೆ. ಪ್ರತಿದಿನ ಸುಮಾರು 30 ಲಕ್ಷ ಟನ್ ದನದ ಸಗಣಿ ಉತ್ಪಾದನೆಯಾಗುತ್ತದೆ. ಹಸುವಿನ ಸಗಣಿ ಗೊಬ್ಬರವಾಗಿ ತುಂಬಾ ಉಪಯುಕ್ತ. ಇದು ಬೆಳವಣಿಗೆಯ ಉತ್ತೇಜಕವಾಗಿದೆ. ವಿದೇಶಿಗರು ದನದ ಸಗಣಿಯ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಇದರ ಪರಿಣಾಮ ಅನೇಕ ದೇಶಗಳು ಗೋಮಯದಿಂದ ತಯಾರಿಸಿದ ಸಾವಯವ ಗೊಬ್ಬರವನ್ನು ಹೇರಳವಾಗಿ ಬಳಸಲಾರಂಭಿಸಿದವು.

ಅವರ ಬಳಿ ಸಾಕಷ್ಟು ಗೋವಿನ ಸಗಣಿ ಲಭ್ಯವಿಲ್ಲ. ಹಾಗಾಗಿ ಭಾರತದಿಂದ ಸಗಣಿಯಿಂದ ತಯಾರಿಸಿದ ಸಾವಯವ ಗೊಬ್ಬರವನ್ನು (ವರ್ಮಿ ಕಾಂಪೋಸ್ಟ್) ಆಮದು ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ವಿಶೇಷವಾಗಿ ಅಮೆರಿಕ, ನೇಪಾಳ, ಕೀನ್ಯಾ, ಫಿಲಿಪೈನ್ಸ್, ನೇಪಾಳದಂತಹ ದೇಶಗಳು ಪ್ರತಿ ವರ್ಷ ಲಕ್ಷಾಂತರ ಟನ್ ಸಾವಯವ ಗೊಬ್ಬರವನ್ನು ಆರ್ಡರ್ ಮಾಡಲು ಪ್ರಾರಂಭಿಸಿವೆ" ಎಂದು ಡಾ.ಅತುಲ್ ಗುಪ್ತಾ ಹೇಳಿದರು.

ಇದನ್ನೂ ಓದಿ: ಮನೆಯಿಂದ ಕಾಣೆಯಾಗಿದ್ದ 2 ವರ್ಷದ ಮಗು 24 ಗಂಟೆ ಬಳಿಕ ರಬ್ಬರ್ ತೋಟದಲ್ಲಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.