ETV Bharat / bharat

ಮುಂದುವರಿದ ಕೊರೊನಾ ಹೋರಾಟ.. ಇಂದಿನಿಂದ ದೇಶ್ಯಾದ್ಯಂತ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ - ಮಕ್ಕಳಿಗೆ ಕಾರ್ಬೆವಾಕ್ಸ್​ ಲಸಿಕೆ

ಕೇಂದ್ರ ಆರೋಗ್ಯ ಇಲಾಖೆ ಇಂದಿನಿಂದ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್​ ವ್ಯಾಕ್ಸಿನ್ ನೀಡಲು ಮುಂದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಭರದ ಸಿದ್ಧತೆ ಮಾಡಿಕೊಂಡಿದೆ.

COVID vaccination guidelines for children  Covid vaccination for Children  ಮಕ್ಕಳಿಗೆ ಕೋವಿಡ್ ಲಸಿಕೆ  ಮಕ್ಕಳಿಗೆ ವ್ಯಾಕ್ಸಿನ್ ಗೈಡ್​ಲೈನ್​​ ಮಕ್ಕಳಿಗೆ ಕಾರ್ಬೆವಾಕ್ಸ್​ ಲಸಿಕೆ  Covid vaccination news
12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್​ ವ್ಯಾಕ್ಸಿನ್
author img

By

Published : Mar 16, 2022, 7:28 AM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ವಿರುದ್ಧದ ಹೋರಾಟ ಮುಂದುವರೆದಿದೆ. ಇದರ ಭಾಗವಾಗಿ ಇಂದಿನಿಂದ ದೇಶ್ಯಾದ್ಯಂತ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್​ ಲಸಿಕೆ ನೀಡಲಾಗ್ತಿದೆ.

ಸರ್ಕಾರ ಮಕ್ಕಳಿಗೆ ಕಾರ್ಬೆವ್ಯಾಕ್ಸ್​ ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ. 12 ರಿಂದ 14 ವರ್ಷದ ಮಕ್ಕಳನ್ನ ಎರಡು ಗುಂಪುಗಳಲ್ಲಿ ವಿಂಗಡಣೆಗೆ ಸೂಚಿಸಲಾಗಿದೆ. ಅದೇ ರೀತಿ 12 ರಿಂದ 13 ವರ್ಷ ಹಾಗೂ 13ರಿಂದ 14 ವರ್ಷದೊಳಗಿನ ಮಕ್ಕಳನ್ನ ಎರಡು ಗುಂಪುಗಳಲ್ಲಿ ವಿಂಗಡಣೆ ಮಾಡುವಂತೆ ಕೇಂದ್ರ ಸರ್ಕಾರ ತಿಳಿಸಿದೆ.

ಓದಿ: 2025ರ ವೇಳೆ ಕರ್ನಾಟಕದಿಂದ 1.5 ಟ್ರಿಲಿಯನ್​ ಡಾಲರ್​​​ ಆರ್ಥಿಕತೆ ಕೊಡುಗೆ: ಸಿಎಂ ಬೊಮ್ಮಾಯಿ

12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ವ್ಯಾಕ್ಸಿನ್ ನೀಡಲು ಸೂಚನೆ ನೀಡಿರುವ ಕೇಂದ್ರ 15 ಮಾರ್ಚ್​​ 2010ರೊಳಗೆ ಜನಿಸಿರುವ ಮಕ್ಕಳು ವ್ಯಾಕ್ಸಿನ್​ ಪಡೆದುಕೊಳ್ಳಲು ಅರ್ಹರಲ್ಲ ಎಂದಿದೆ. ಲಸಿಕೆ ಪಡೆದುಕೊಳ್ಳಲು ಮಕ್ಕಳ ಪೋಷಕರು ಕೋವಿನ್​ ಪೋರ್ಟಲ್​​ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಮಕ್ಕಳಿಗೆ ಕಾರ್ಬೆವ್ಯಾಕ್ಸ್​ ಲಸಿಕೆ ಮಾತ್ರ ನೀಡಲು ಮಾರ್ಗಸೂಚಿಯಲ್ಲಿ ತಿಳಿಸಿದ್ದು, ಎರಡು ಡೋಸ್​ಗಳ ಮಧ್ಯೆ 28 ದಿನಗಳ ಅಂತರ ಇರುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದಲ್ಲಿ 4.7 ಕೋಟಿ ಮಕ್ಕಳು 12-14 ವರ್ಷದೊಳಗಿನ ಮಕ್ಕಳು ಇದ್ದು, ಆರಂಭದಲ್ಲಿ ಕೋವಿಡ್​ ಸೋಂಕಿನಿಂದ ಅಪಾಯದಲ್ಲಿರುವ ಮಕ್ಕಳಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.

ಓದಿ: ಮುಂದುವರಿದ ರಷ್ಯಾ ಆಕ್ರಮಣ.. ಉಕ್ರೇನ್​​ ಪರಿಸ್ಥಿತಿ ಶೋಚನೀಯ!

60 ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್ ಡೋಸ್​: ಇಂದಿನಿಂದಲೇ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಣೆ ಹೊರಡಿಸಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.