ಲೂಧಿಯಾನ್(ಪಂಜಾಬ್): ದೇಶದ ಕೆಲವೊಂದು ರಾಜ್ಯಗಳಲ್ಲಿ ಕೊರೊನಾ ವೈರಸ್ ಹಾವಳಿ ಮಿತಿ ಮೀರಿದ್ದು, ಪ್ರತಿದಿನ ಅನೇಕರು ಸಾವನ್ನಪ್ಪುತ್ತಿದ್ದಾರೆ. ಪಂಜಾಬ್ನ ಲೂಧಿಯಾನ್ದಲ್ಲೂ ಅಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಪಂಜಾಬ್ನಲ್ಲಿ ಕೋವಿಡ್ನಿಂದ ಅತಿ ಹೆಚ್ಚು ಸಂಕಷ್ಟಕ್ಕೊಳಗಾಗಿರುವ ಆರು ಜಿಲ್ಲೆಗಳ ಪೈಕಿ ಲೂಧಿಯಾನ್ ಕೂಡ ಒಂದಾಗಿದ್ದು, ಕಳೆದ 24 ಗಂಟೆಗಳಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಪ್ರತಿ ಗಂಟೆಗೂ ಕೋವಿಡ್ನಿಂದ ಓರ್ವ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಕೊರೊನಾ ಮುಂದೆ ಸತ್ತು ಹೋದ ಮಾನವೀಯತೆ.. ಈ ರೀತಿ ನಡೀತು ಮೃತ ಮಹಿಳೆ ಅಂತ್ಯಕ್ರಿಯೆ
ಪಂಜಾಬ್ನಲ್ಲಿಂದು 6,812 ಸೋಂಕಿತ ಪ್ರಕರಣ ದಾಖಲಾಗಿದ್ದು, 138 ಜನರು ಸಾವನ್ನಪ್ಪಿದ್ದಾರೆ. ಪ್ರಮುಖವಾಗಿ ಮೊಹಾಲಿ, ಜಲಂಧರ್, ಲೂಧಿಯಾನ್ದಲ್ಲಿ ಹೆಚ್ಚಿನ ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಇನ್ನು ಮೃತ ದೇಹಗಳ ಅಂತ್ಯಕ್ರಿಯೆ ನಡೆಸಲು ಶವಗಾರಗಳ ಮುಂದೆ ಕ್ಯೂ ನಿಲ್ಲುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿದು ಬಂದಿದೆ.