ETV Bharat / bharat

ದೇಶಾದ್ಯಂತ ಸಾವಿರಕ್ಕೂ ಹೆಚ್ಚು ವೈದ್ಯರಿಗೆ ಕೋವಿಡ್‌ ಸೋಂಕು - ಕೊರೊನಾ ಮೂರನೇ ಅಲೆ

ದೇಶದಲ್ಲಿ ಮಹಾಮಾರಿ ಕೊರೊನಾ ಮೂರನೇ ಅಲೆ ಜೋರಾಗಿದ್ದು, ಪ್ರಮುಖವಾಗಿ ವೈದ್ಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ.

doctors doctors Covid
doctors doctors Covid
author img

By

Published : Jan 6, 2022, 7:22 PM IST

ಹೈದರಾಬಾದ್​​: ಮಹಾಮಾರಿ ಕೊರೊನಾ ವೈರಸ್​ನ ಮೂರನೇ ಅಲೆ ದೇಶದಲ್ಲಿ ಅಬ್ಬರಿಸುತ್ತಿದ್ದು, ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಹೊಸ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ವೈದ್ಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಬಾಧಿಸುತ್ತಿರುವುದು ಕಳವಳ ಉಂಟುಮಾಡಿದೆ.

ವೈದ್ಯರು, ದಾದಿಯರು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಈಗಾಗಲೇ ಸಾವಿರಕ್ಕೂ ಅಧಿಕ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗೆ ಸೋಂಕು ತಗುಲಿದೆ.

ಇದನ್ನೂ ಓದಿ: ರಾಜಸ್ಥಾನ ಸಿಎಂ ಗೆಹ್ಲೋಟ್​ಗೂ ವಕ್ಕರಿಸಿದ ಕೊರೊನಾ ಸೋಂಕು

ರಾಜ್ಯವಾರು ಮಾಹಿತಿ:

ಮಹಾರಾಷ್ಟ್ರ: ಅತಿ ಹೆಚ್ಚು ಕೊರೊನಾ ಕಾಣಿಸಿಕೊಳ್ಳುತ್ತಿರುವ ಮಹಾರಾಷ್ಟ್ರದಲ್ಲಿ ಕಳೆದ ಮೂರು ದಿನದಲ್ಲಿ 290 ವೈದ್ಯರು ಕೋವಿಡ್​ ಸೋಂಕಿಗೊಳಗಾಗಿದ್ದಾರೆ.

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಾದಿಯರು ಸೇರಿದಂತೆ 120 ವೈದ್ಯರು ಸೋಂಕಿಗೊಳಗಾಗಿದ್ದು, ಏಮ್ಸ್​​ನಲ್ಲಿ 50 ವೈದ್ಯರು ಹಾಗೂ ಸಫ್ದರ್​ಗಂಜ್​​ ಆಸ್ಪತ್ರೆಯಲ್ಲಿ 26 ವೈದ್ಯರಲ್ಲಿ ಸೋಂಕು ದೃಢಗೊಂಡಿದೆ. ಉಳಿದಂತೆ ರಾಮ್​ ಮನೋಹರ್​ ಲೋಹಿಯಾದಲ್ಲಿ 38 ವೈದ್ಯರು, 45 ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿದ್ದಾರೆ.

ಪಂಜಾಬ್​: ಕಳೆದೆರಡು ದಿನಗಳಲ್ಲಿ 196 ವೈದ್ಯರು ಸೇರಿದಂತೆ ಅನೇಕ ಎಂಬಿಬಿಎಸ್​ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದೆ.

ಜಾರ್ಖಂಡ್​: ಜಾರ್ಖಂಡ್​​ನಲ್ಲಿ ಇಲ್ಲಿಯವರೆಗೆ ಸುಮಾರು 180 ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್​ ಸೋಂಕು ದೃಢಪಟ್ಟಿದೆ.

ಬಿಹಾರ: ಬಿಹಾರದ ಪಾಟ್ನಾದಲ್ಲಿ ಇದುವರೆಗೆ 200 ವೈದ್ಯರು, ಎಂಬಿಬಿಎಸ್​​ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಪಶ್ಚಿಮ ಬಂಗಾಳದಲ್ಲೂ ವೈದ್ಯರು ಹಾಗೂ ದಾದಿಯರು ಸೇರಿ 70ಕ್ಕೂ ಅಧಿಕ ಸಿಬ್ಬಂದಿಗೆ ಸೋಂಕು ದೃಢಗೊಂಡಿದ್ದು, ಉತ್ತರ ಪ್ರದೇಶದಲ್ಲಿ 25 ವೈದ್ಯಕೀಯ ಸಿಬ್ಬಂದಿ ಸೋಂಕಿಗೊಳಗಾಗಿದ್ದಾರೆ.

ಕರ್ನಾಟಕದಲ್ಲೂ ಅನೇಕ ವೈದ್ಯರಿಗೆ ಕೊರೊನಾ ಸೋಂಕು ದೃಢಗೊಂಡಿದ್ದು, ಪ್ರಮುಖವಾಗಿ ಹುಬ್ಬಳ್ಳಿಯ ಎಸ್​​ಡಿಎಂ ಕಾಲೇಜ್​ನ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಎಂಬಿಬಿಎಸ್​​ ವಿದ್ಯಾರ್ಥಿಗಳು ಸೋಂಕಿಗೊಳಗಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.