ನವದೆಹಲಿ: ಭಾರತದಲ್ಲಿ ಕೋವಿಡ್ ಏರಿಳಿಕೆ ಮುಂದುವರಿದಿದೆ. ನಿನ್ನೆ 20 ಸಾವಿರ ಮೇಲಿದ್ದ ಕೋವಿಡ್ ಕೇಸ್ಗಳು ಇಂದು 19 ಸಾವಿರಕ್ಕೆ ಬಂದಿದೆ. ಕಳೆದ 24 ಗಂಟೆಗಳಲ್ಲಿ 19,336 ಹೊಸ ಕೇಸ್ಗಳು ದಾಖಲಾಗಿದ್ದು, 45 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸದ್ಯಕ್ಕೆ ದೇಶದಲ್ಲಿ 1,43,676 ಸಕ್ರಿಯ ಪ್ರಕರಣಗಳಿವೆ. ದೇಶಾದ್ಯಂತ ಈವರೆಗೆ ಒಟ್ಟು 4,33,49,778 ಮಂದಿ ಚೇತರಿಸಿಕೊಂಡಿದ್ದಾರೆ. ಸಾವಿನ ಪ್ರಮಾಣ ಶೇ.1.20 ರಷ್ಟಿದ್ದರೆ, ಚೇತರಿಕೆ ದರ ಶೇ. 98.48 ರಷ್ಟಿದೆ. ನಿತ್ಯದ ಪಾಸಿಟಿವಿಟಿ ದರ ಶೇ.4.96 ಇದ್ದರೆ, ವಾರದ ಪಾಸಿಟಿವಿಟಿ ದರ 4.88 ಪ್ರತಿಶತವಿದೆ.
-
#AmritMahotsav#Unite2FightCorona#LargestVaccineDrive
— Ministry of Health (@MoHFW_INDIA) July 31, 2022 " class="align-text-top noRightClick twitterSection" data="
𝗖𝗢𝗩𝗜𝗗 𝗙𝗟𝗔𝗦𝗛https://t.co/fVu11F9pSE pic.twitter.com/MtcEXoSesB
">#AmritMahotsav#Unite2FightCorona#LargestVaccineDrive
— Ministry of Health (@MoHFW_INDIA) July 31, 2022
𝗖𝗢𝗩𝗜𝗗 𝗙𝗟𝗔𝗦𝗛https://t.co/fVu11F9pSE pic.twitter.com/MtcEXoSesB#AmritMahotsav#Unite2FightCorona#LargestVaccineDrive
— Ministry of Health (@MoHFW_INDIA) July 31, 2022
𝗖𝗢𝗩𝗜𝗗 𝗙𝗟𝗔𝗦𝗛https://t.co/fVu11F9pSE pic.twitter.com/MtcEXoSesB
ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಈವರೆಗೆ 204.25 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಶನಿವಾರ 31,36, 029 ಡೋಸ್ ಲಸಿಕೆ ನೀಡಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಾರ, ಜುಲೈ 28 ರ ವರೆಗೆ ಒಟ್ಟು 87,52,06,798 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ 3,96,424 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಇದನ್ನೂ ಓದಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಂದು ಕೊನೆ ದಿನ: ಗಡುವು ತಪ್ಪಿದರೆ ಏನಾಗುತ್ತೆ?