ನವದೆಹಲಿ : ದೇಶದಲ್ಲಿ ಕೋವಿಡ್ 19 ಹಾವಳಿ ಮುಂದುವರೆದಿದೆ. ಕಳೆದೊಂದು ದಿನದಲ್ಲಿ 1,890 ಹೊಸ ಕೋವಿಡ್ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 9,433 ಕ್ಕೆ ಏರಿಕೆಯಾಗಿದೆ. ಇದು ಕಳೆದ 149 ದಿನಗಳಲ್ಲಿ ದಾಖಲಾದ ಅತಿ ಹೆಚ್ಚು ಸೋಂಕಿತರ ಸಂಖ್ಯೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ ವರ್ಷದ ಅಕ್ಟೋಬರ್ 28 ರಂದು ಒಂದೇ ದಿನದಲ್ಲಿ ದೇಶದಲ್ಲಿ 2,208 ಪ್ರಕರಣಗಳು ದಾಖಲಾಗಿದ್ದವು. ಅದಾದ ಬಳಿಕ ನಿನ್ನೆ ಭಾರಿ ಪ್ರಮಾಣದಲ್ಲಿ ಸೋಂಕಿತರು ಕಂಡುಬಂದಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5,30,831 ತಲುಪಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ತಲಾ ಎರೆಡೆರಡು ಸಾವುಗಳು ವರದಿಯಾಗಿವೆ. ಕೇರಳದಲ್ಲಿ ಮೂವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ : ರಕೂನ್ ತಳಿಯ ನಾಯಿಗಳಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆ!: ಅಧ್ಯಯನ
ಸದ್ಯಕ್ಕೆ ದೈನಂದಿನ ಪಾಸಿಟಿವಿಟಿ ದರ 1.56 ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ 1.29. ದೇಶದಲ್ಲಿ ಇದುವರೆಗೆ 4.47 ಕೋಟಿ (4,47,04,147) ಮಂದಿಗೆ ಸೋಂಕು ತಗುಲಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ 98.79 ಪ್ರತಿಶತದಷ್ಟು ದಾಖಲಾಗಿದೆ. ಸಾವಿನ ಪ್ರಮಾಣ ಶೇ 1.19 ರಷ್ಟಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,41,63,883ಕ್ಕೆ ತಲುಪಿದೆ. ಕೇಂದ್ರ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ರಾಷ್ಟ್ರವ್ಯಾಪಿ ಕೋವಿಡ್ ಲಸಿಕಾ ಅಭಿಯಾನದಡಿಯಲ್ಲಿ ಇದುವರೆಗೆ 220.65 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ : ಕೋವಿಡ್ನಲ್ಲಿ ತುರ್ತು ಪೆರೋಲ್ ಪಡೆದಿದ್ದ ಕೈದಿಗಳಿಗೆ ಶರಣಾಗುವಂತೆ ಆದೇಶ
ಕೈದಿಗಳು ಶರಣಾಗುವಂತೆ ಸುಪ್ರೀಂ ಆದೇಶ: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಉನ್ನತಾಧಿಕಾರ ಸಮಿತಿಯಿಂದ ತುರ್ತು ಪೆರೋಲ್ ಪಡೆದಿದ್ದ ಎಲ್ಲಾ ಕೈದಿಗಳು ಮುಂದಿನ 15 ದಿನಗಳಲ್ಲಿ ಶರಣಾಗುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿದೆ. ಕೋವಿಡ್ ಸಾಂಕ್ರಾಮಿಕದ ಮೊದಲ ಮತ್ತು ಎರಡನೇ ಅಲೆಗಳ ಸಮಯದಲ್ಲಿ, ಜೈಲುಗಳಲ್ಲಿ ಕೈದಿಗಳ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಕೋರ್ಟ್ ಈ ಹಿಂದೆ ಪೆರೋಲ್ ಆದೇಶ ನೀಡಿತ್ತು.
ಇದನ್ನೂ ಓದಿ : ಲಸಿಕೆಯಿಂದ ಕೋವಿಡ್ ಸೋಂಕು ಅಪಾಯ ಕಡಿಮೆ
ಲಸಿಕೆಯಿಂದ ಸೋಂಕು ಅಪಾಯ ಕಡಿಮೆ : ಹಾಗೆಯೇ ಕೋವಿಡ್ ಲಸಿಕೆ ಪಡೆದ ಬಳಿಕ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಸಂಶೋಧನೆ ತಿಳಿಸಿದೆ. ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಸಂಶೋಧಕರು ಅಧ್ಯಯನ ನಡೆಸಿದ್ದು, ಪೈಜರ್, ಬಯೋಟೆಕ್ ಕೋವಿಡ್ ಲಸಿಕೆ ಪಡೆದವರಲ್ಲಿ ಪ್ರತಿರಕ್ಷಣಾ ಕೋಶ ಹೆಚ್ಚಾಗಿದೆ ಎಂದು ಹೇಳಿದೆ.
ಇದನ್ನೂ ಓದಿ : ಕೋವಿಡ್ ಪರಿಸ್ಥಿತಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ