ETV Bharat / bharat

ಮಕ್ಕಳಿಗೂ ಲಸಿಕೆ.. ಇಂದಿನಿಂದ ಕೋವಿನ್​ ನೋಂದಣಿ ಆರಂಭ.. ಜ3 ರಿಂದ ವ್ಯಾಕ್ಸಿನೇಷನ್​ ಶುರು

ಎಲ್ಲ ಅರ್ಹ ನಾಗರಿಕರು COVID ಲಸಿಕೆಯನ್ನು ಖಚಿತಪಡಿಸಿಕೊಳ್ಳಲು ಸಿದ್ಧರಾಗೋಣ. 15-18 ವರ್ಷ ವಯಸ್ಸಿನ ಮಕ್ಕಳಿಗೆ #CoWIN ನಲ್ಲಿ ನೋಂದಣಿ ಜನವರಿ 1, 2022 ರಿಂದ ಪ್ರಾರಂಭವಾಗುತ್ತವೆ. #LargestVaccineDrive Unite2FightCorona ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.

covid-19-vaccination-cowin-registrations-for-15-18-age-group-begins-from-today

author img

By

Published : Jan 1, 2022, 10:30 AM IST

ನವದೆಹಲಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವಂತೆ ಕೋವಿಡ್-19ರ ವಿರುದ್ಧ ಸೆಣಸಾಡಲು 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕುವ ನೋಂದಣಿ ಇಂದಿನಿಂದ ಕೋ-ವಿನ್ ಪೋರ್ಟಲ್‌ನಲ್ಲಿ ಪ್ರಾರಂಭವಾಗಲಿದೆ.

ಎಲ್ಲ ಅರ್ಹ ನಾಗರಿಕರು COVID ಲಸಿಕೆಯನ್ನು ಖಚಿತಪಡಿಸಿಕೊಳ್ಳಲು ಸಿದ್ಧರಾಗೋಣ. 15-18 ವರ್ಷ ವಯಸ್ಸಿನ ಮಕ್ಕಳಿಗೆ #CoWIN ನಲ್ಲಿ ನೋಂದಣಿ ಜನವರಿ 1, 2022 ರಿಂದ ಪ್ರಾರಂಭವಾಗುತ್ತದೆ. #LargestVaccineDrive Unite2FightCorona ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.

ಡಿಸೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ 15-18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು. ಪ್ರಧಾನಿ ಅವರ ಈ ಘೋಷಣೆ ಹಿನ್ನೆಲೆಯಲ್ಲಿ ಸೋಮವಾರದಿಂದ ಮಕ್ಕಳಿಗೆ ಲಸಿಕೆ ಹಾಕುವ ಕೆಲಸ ಪ್ರಾರಂಭವಾಗಲಿದೆ. ಅಷ್ಟೇ ಅಲ್ಲ ಜನವರಿ 10 ರಿಂದ ಮೂರನೇ ಡೋಸ್​ ಲಸಿಕೆ ನೀಡುವ ಕೆಲಸವೂ ಆರಂಭವಾಗಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

15-18 ವರ್ಷ ವಯಸ್ಸಿನವರಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಮೂರನೇ ಡೋಸ್​​ ಆಗಿ 'ಕೋವಾಕ್ಸಿನ್' ಅನ್ನು ಮಾತ್ರ ನೀಡಲಾಗುವುದು ಮತ್ತು 'ಕೋವಾಕ್ಸಿನ್' ನ ಹೆಚ್ಚುವರಿ ಪ್ರಮಾಣವನ್ನು ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗುವುದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:'ಬಂಧನದಿಂದ ಹೊರಬನ್ನಿ'.. ವರ್ಷದ ಕೊನೆಯ ದಿನ ಸ್ಫೂರ್ತಿದಾಯಕ ಪೋಸ್ಟ್​ ಹಂಚಿಕೊಂಡ ನಟಿ ಸಮಂತಾ

ಜನವರಿ ಮೂರರಿಂದ ಮಕ್ಕಳಿಗೆ ವ್ಯಾಕ್ಸಿನೇಷನ್​ ಶುರು

ಕೇಂದ್ರ ಸರ್ಕಾರವು 'ಕೋವಾಕ್ಸಿನ್' ನ ಪೂರೈಕೆ ವೇಳಾಪಟ್ಟಿಯನ್ನು ಮುಂದಿನ ಕೆಲವು ದಿನಗಳಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳೊಂದಿಗೆ ಹಂಚಿಕೊಳ್ಳಲಿದೆ. ಸಂಭಾವ್ಯ ಫಲಾನುಭವಿಗಳು ಜನವರಿ 1, 2022 ರಿಂದ Co-WIN ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಜನವರಿ 3 ರಿಂದ ವ್ಯಾಕ್ಸಿನೇಷನ್ ಪ್ರಾರಂಭವಾದಾಗ ವಾಕ್-ಇನ್ ನೋಂದಣಿ ಸಹ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.