ಕೊಚ್ಚಿ (ಕೇರಳ): ಲಕ್ಷದ್ವೀಪಕ್ಕೆ ಆಮ್ಲಜನಕ ಸಿಲಿಂಡರ್ಗಳನ್ನು ಸಾಗಿಸಲು ಕೇರಳದ ಕೊಚ್ಚಿಯ ದಕ್ಷಿಣ ನೌಕಾಪಡೆ ಎರಡು ನೌಕಾ ಹಡಗುಗಳನ್ನು ನಿಯೋಜಿಸಿದ್ದು, ಇವು 'ಆಕ್ಸಿಜನ್ ಎಕ್ಸ್‌ಪ್ರೆಸ್' ಹಡಗುಗಳೆಂದು ಹೇಳಿದೆ.
ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಟಿಎಲ್ ಆಡಳಿತವನ್ನು ಬೆಂಬಲಿಸಲು ಆಕ್ಸಿಜನ್ ಸಿಲಿಂಡರ್ ಸಾಗಿಸಲು ಹಾಗೂ ಖಾಲಿ ಸಿಲಿಂಡರ್ಗಳನ್ನು ಅಲ್ಲಿಂದ ಪಡೆಯಲು ಹಡಗುಗಳನ್ನು ನಿಯೋಜಿಸಿರುವುದಾಗಿ ಸದರ್ನ್ ನೇವಲ್ ಕಮಾಂಡ್ (ಎಸ್‌ಎನ್‌ಸಿ) ತಿಳಿಸಿದೆ.
ಹೆಚ್ಚಿನ ಓದಿಗೆ: ಕೋವಿಡ್ ವಿರುದ್ಧ ಹೋರಾಡಲು 'ಆಕ್ಸಿಜನ್ ಎಕ್ಸ್‌ಪ್ರೆಸ್' ಹಳಿಗೆ..
ದ್ವೀಪದಲ್ಲಿ ವೈದ್ಯಕೀಯ ನೆರವು ಹೆಚ್ಚಿಸಲು ವೈದ್ಯಕೀಯ ತಂಡವನ್ನು ಕಳುಹಿಸಿಕೊಡಲಾಗಿದ್ದು, ಪಿಪಿಇ, ಆರ್‌ಎಡಿಟಿ ಕಿಟ್‌ಗಳು, ಮಾಸ್ಕ್ಗಳು, ಕೈಗವಸುಗಳು, ನೆಬ್ಯುಲೈಸರ್‌ಗಳು ಸೇರಿದಂತೆ ಇತರ ವೈದ್ಯಕೀಯ ವಸ್ತುಗಳನ್ನು ಸರಬರಾಜುಗಳನ್ನು ಸಹ ನೌಕಾಪಡೆಯ ಮೂಲಕ ಒದಗಿಸಲಾಗಿದೆ.
ಈಗಾಗಲೇ ಕೋವಿಡ್ ಉಲ್ಬಣದಿಂದಾಗಿ ಹೆಚ್ಚು ಬೇಡಿಕೆಯಿರುವ ಆಮ್ಲಜನಕದ ಸಿಲಿಂಡರ್ಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸಲೆಂದು ಭಾರತೀಯ ರೈಲ್ವೆಯು 'ಆಕ್ಸಿಜನ್ ಎಕ್ಸ್‌ಪ್ರೆಸ್' ವಿಶೇಷ ರೈಲು ಸೇವೆ ಆರಂಭಿಸಿದೆ.