ತೇಜ್‌ಪುರ: ಕೋವಿಡ್ ಪರಿಹಾರಕ್ಕಾಗಿ ಭಾರತೀಯ ವಾಯುಪಡೆಯು ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ವಾಯುಪಡೆಯ ಓನ್ ಸಿ -17 ವಿಮಾನ ತಡರಾತ್ರಿ 2 ಗಂಟೆಗೆ ಸಿಂಗಾಪುರದ ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂಡನ್ ವಾಯುನೆಲೆಗೆ ಪ್ರಯಾಣ ಬೆಳೆಸಿತು.
![COVID 19 RELIEF EFFORTS BY INDIAN AIR FORCE](https://etvbharatimages.akamaized.net/etvbharat/prod-images/as-tezpur-24april-02-vispix-iafcovidefforts-pranabkumardas-7203907_24042021165653_2404f_1619263613_402.jpg)
ಇಂದು ಬೆಳಗ್ಗೆ ಸಿಂಗಾಪುರ ತಲುಪಿರುವ ಯುದ್ಧವಿಮಾನ ಕ್ರಯೋಜೆನಿಕ್ ಆಮ್ಲಜನಕದ ಕಂಟೇನರ್ಗಳನ್ನು ತುಂಬಿಸಿಕೊಂಡ ನಂತರ, ಸಿಂಗಾಪುರದಿಂದ ನಿರ್ಗಮಿಸಲಿದೆ.
ಭಾರತೀಯ ವಾಯುಪಡೆಯ ಮತ್ತೊಂದು ಸಿ -17 ಯುದ್ಧ ವಿಮಾನ ಹಿಂಡನ್ ವಾಯುನೆಲೆಯಿಂದ ಪುಣೆಗೆ ಆಗಮಿಸಿತು. ಜೆಟ್ನಲ್ಲಿ 2 ಖಾಲಿ ಕ್ರಯೋಜೆನಿಕ್ ಆಮ್ಲಜನಕ ಕಂಟೇನರ್ ಟ್ರಕ್ಗಳೊಂದಿಗೆ ತುಂಬಿಸಲಾಯಿತು. ನಂತರ ಅವುಗಳನ್ನು ಜಮ್ನಗರ್ ವಾಯುನೆಲೆಗೆ ಹಾರಿಸಲಾಯಿತು. ಅದೇ ರೀತಿ, ಸಿ-17 ವಿಮಾನ ಎರಡು ಖಾಲಿ ಆಮ್ಲಜನಕ ಕಂಟೇನರ್ಗಳನ್ನು ಜೋಧಪುರದಿಂದ ಜಮ್ನಗರಕ್ಕೆ ಸಾಗಿಸಿತು.
![COVID 19 RELIEF EFFORTS BY INDIAN AIR FORCE](https://etvbharatimages.akamaized.net/etvbharat/prod-images/as-tezpur-24april-02-vispix-iafcovidefforts-pranabkumardas-7203907_24042021165653_2404f_1619263613_747.jpg)
ಒಂದು ಐಎಎಫ್ ಚಿನೂಕ್ ಹೆಲಿಕಾಪ್ಟರ್ ಮತ್ತು ಒಂದು ಆನ್-32 ಸಾರಿಗೆ ವಿಮಾನಗಳು ಕ್ರಮವಾಗಿ ಜಮ್ಮುವಿನಿಂದ ಲೇಹ್‌ಗೆ ಮತ್ತು ಜಮ್ಮುವಿನಿಂದ ಕಾರ್ಗಿಲ್‌ಗೆ ಕೋವಿಡ್ ಪರೀಕ್ಷಾ ಸಾಧನಗಳನ್ನು ಕೊಂಡೊಯ್ದಿವೆ. ಉಪಕರಣಗಳು ಜೈವಿಕ ಸುರಕ್ಷತಾ ಕ್ಯಾಬಿನೆಟ್‌ಗಳು, ಕೇಂದ್ರಾಪಗಾಮಿಗಳು ಮತ್ತು ಸ್ಟೆಬಲೈಸರ್‌ಗಳನ್ನು ಒಳಗೊಂಡಿವೆ. ಈ ಯಂತ್ರಗಳನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತಯಾರಿಸಿದೆ.
ಇದನ್ನೂ ಓದಿ: ದೆಹಲಿ ಆಸ್ಪತ್ರೆಯ 50 ಮಂದಿ ಸೋಂಕಿತರಿಗೆ ಬೇಕೇ ಬೇಕು ಆಕ್ಸಿಜನ್, ಆದ್ರೆ ಪೂರೈಕೆಯೇ ಇಲ್ಲ!