ನವದೆಹಲಿ : ಕೋವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಖರಗ್‌ಪುರ ಐಐಟಿಯಲ್ಲಿ ನಡೆಯವ 'ಗೇಟ್ ಪರೀಕ್ಷೆ'ಯನ್ನು ಮುಂದೂಡಬೇಕು ಎಂದು ಒತ್ತಾಯಿಸಿ 23 ಸಾವಿರ ಅಭ್ಯರ್ಥಿಗಳು ಅರ್ಜಿ ಗುಜರಾಯಿಸಿದ್ದಾರೆ.
ಕೊರೊನಾ ರೂಪಾಂತರಿಗಳಾದ ಒಮಿಕ್ರಾನ್, ಡೆಲ್ಟಾದಿಂದಾಗಿ ಮೂರನೇ ಅಲೆ ಹಲವಾರು ರಾಜ್ಯಗಳು, ನಗರಗಳಲ್ಲಿ ತೀವ್ರವಾಗಿ ಹರಡಿದೆ. ಐಐಟಿ ಕಾನ್ಪುರದಿಂದ ನಡೆದ ಅಧ್ಯಯನದಲ್ಲಿ ಫೆಬ್ರವರಿ ಆರಂಭದಲ್ಲಿ ಕೊರೊನಾ 3ನೇ ಅಲೆ ಮತ್ತಷ್ಟು ವ್ಯಾಪಿಸಲಿದೆ ಎಂದು ತಿಳಿಸಲಾಗಿದೆ. ಗೇಟ್ ಪರೀಕ್ಷೆಯೂ ಫೆಬ್ರವರಿಯಲ್ಲಿ ನಿಗದಿಯಾಗಿದ್ದು, ಮುಂದೂಡಬೇಕು ಎಂದು ಅಭ್ಯರ್ಥಿಗಳು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಒಂದು ವೇಳೆ ಪರೀಕ್ಷಾ ದಿನಾಂಕವನ್ನು ಮುಂದೂಡಿಕೆ ಮಾಡದಿದ್ದರೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸೋಂಕು ತಗಲುವ ಸಾಧ್ಯತೆ ಇದೆ. ಅದು ಇನ್ನಷ್ಟು ಹರಡಿ ಅವರ ಮತ್ತು ಕುಟುಂಬಸ್ಥರ ಜೀವಕ್ಕೆ ಅಪಾಯ ಉಂಟು ಮಾಡುವ ಭೀತಿ ಇದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
23 ಸಾವಿರ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗೆ ಖರಗ್‌ಪುರ ಐಐಟಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೇಟ್ ಪರೀಕ್ಷೆಯನ್ನು ಫೆಬ್ರವರಿ 4 ರಿಂದ 13ರವರೆಗೆ ನಿಗದಿ ಮಾಡಲಾಗಿದೆ. ಮಾರ್ಚ್ 17ರಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿತ್ತು.
ಇದನ್ನೂ ಓದಿ: ಬಿಹಾರದಲ್ಲಿ 4 ಕಾಲು, 4 ಕೈಗಳಿರುವ ವಿಚಿತ್ರ ಮಗು ಜನನ: ಕುಟುಂಬಸ್ಥರು ಕಂಗಾಲು- ವಿಡಿಯೋ