ನವದೆಹಲಿ: ಕೋವಿಡ್-19ನಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ 18 ವರ್ಷದೊಳಗಿನ ಮಕ್ಕಳ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ವಿಮೆ ನೀಡಲು ನಿರ್ಧರಿಸಿದೆ. ಪ್ರಧಾನಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳ ನಿಧಿಯಿಂದ ಪ್ರೀಮಿಯಂ ಪಾವತಿಸಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಕೋವಿಡ್-19ನಿಂದ ಬಾಧಿತರಾದ ಮಕ್ಕಳಿಗೆ ಸಹಾಯವಾಗಲು ತೆಗೆದುಕೊಂಡ ಕ್ರಮಗಳ ಭಾಗವಾಗಿ, 18 ವರ್ಷದೊಳಗಿನ ಮಕ್ಕಳಿಗೆ ಆಯುಷ್ಮಾನ್ ಭಾರತ್ ಅಡಿಯಲ್ಲಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ವಿಮೆ ನೀಡಲಾಗುವುದು ಮತ್ತು ಅದರ ಪ್ರೀಮಿಯಂ ಅನ್ನು ಪಿಎಂ ಕೇರ್ಸ್ ಪಾವತಿಸಲಿದೆ ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ.
-
कोविड से प्रभावित बच्चों के देखभाल हेतु उठाए कदमों के तहत 18 साल तक के बच्चों को आयुष्मान भारत के तहत 5 लाख रुपये का मुफ्त स्वास्थ्य बीमा दिया जाएगा और इसके प्रीमियम का भुगतान पीएम केयर्स द्वारा किया जाएगा। #MonsoonSession https://t.co/Gxpj7sFlYV pic.twitter.com/kfa7fTWigq
— Office of Mr. Anurag Thakur (@Anurag_Office) August 4, 2021 " class="align-text-top noRightClick twitterSection" data="
">कोविड से प्रभावित बच्चों के देखभाल हेतु उठाए कदमों के तहत 18 साल तक के बच्चों को आयुष्मान भारत के तहत 5 लाख रुपये का मुफ्त स्वास्थ्य बीमा दिया जाएगा और इसके प्रीमियम का भुगतान पीएम केयर्स द्वारा किया जाएगा। #MonsoonSession https://t.co/Gxpj7sFlYV pic.twitter.com/kfa7fTWigq
— Office of Mr. Anurag Thakur (@Anurag_Office) August 4, 2021कोविड से प्रभावित बच्चों के देखभाल हेतु उठाए कदमों के तहत 18 साल तक के बच्चों को आयुष्मान भारत के तहत 5 लाख रुपये का मुफ्त स्वास्थ्य बीमा दिया जाएगा और इसके प्रीमियम का भुगतान पीएम केयर्स द्वारा किया जाएगा। #MonsoonSession https://t.co/Gxpj7sFlYV pic.twitter.com/kfa7fTWigq
— Office of Mr. Anurag Thakur (@Anurag_Office) August 4, 2021
ಅಲ್ಲದೆ, 18 ವರ್ಷದೊಳಗಿನ ಅನಾಥ ಮಕ್ಕಳಿಗೆ ಮಾಸಿಕ ಸ್ಟೈಫಂಡ್ ನೀಡಲಾಗುವುದು. 23 ವರ್ಷ ತುಂಬಿದ ಬಳಿಕ ಅವರಿಗೆ 10 ಲಕ್ಷ ರೂ. ನೆರವು ನೀಡಲಾಗುವುದು ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕೋವಿಡ್ನಿಂದ ಮಕ್ಕಳನ್ನು ದತ್ತು ಪಡೆದ ಪೋಷಕರು ಹಾಗೂ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಬೆಂಬಲಿಸುವ ಉದ್ಧೇಶವನ್ನು ಕೇಂದ್ರ ಸರ್ಕಾರದ ಯೋಜನೆಯು ಆರೋಗ್ಯ ವಿಮೆ ಮೂಲಕ ಅನಾಥರ ಯೋಗಕ್ಷೇಮ, ಶಿಕ್ಷಣದ ಮೂಲಕ ಅವರನ್ನು ಸಬಲೀಕರಣಗೊಳಿಸುದಲ್ಲದೆ, ಆರ್ಥಿಕ ನೆರವು ನೀಡಲಿದೆ.
ಇದನ್ನೂ ಓದಿ: ಪರಿಶೀಲನೆಗೆ ಬಂದು ಸ್ವತಃ ಪ್ರವಾಹದಲ್ಲಿ ಸಿಲುಕಿದ ಗೃಹ ಸಚಿವರು... ಏರ್ಲಿಫ್ಟ್ ಮೂಲಕ ರಕ್ಷಣೆ!