ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 5,874 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ನಿನ್ನೆ ವರದಿಯಾದ ಎಣಿಕೆಗಿಂತ ಸುಮಾರು 1297 ಪ್ರಕರಣಗಳು ಕಡಿಮೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ದೈನಂದಿನ ಬುಲೆಟಿನ್ ತಿಳಿಸಿದೆ. ಕಳೆದ ಕೆಲವು ದಿನಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಸಕ್ರಿಯ ಪ್ರಕರಣಗಳು ಶೇ 0.11 ರಷ್ಟಿದೆ. ಶುಕ್ರವಾರ ಸುಮಾರು 7,533 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಅಧಿಕೃತ ದಾಖಲೆಗಳ ಪ್ರಕಾರ, ದೇಶವು ಶನಿವಾರ 7,171 ಪ್ರಕರಣಗಳನ್ನು ದಾಖಲಿಸಿದೆ. ದೈನಂದಿನ ಪಾಸಿಟಿವಿಟಿ ದರ ಶೇ 3.31 ರಷ್ಟಿದ್ದರೆ, ವಾರದ ದರ ಶೇ 4.25 ರಷ್ಟಿದೆ.
ಇದುವರೆಗೆ ಒಟ್ಟು 92.66 ಕೋಟಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1,77,281 ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 3,167 ಡೋಸ್ ಲಸಿಕೆಗಳನ್ನು ನೀಡಲಾಗಿದ್ದು, ಚೇತರಿಕೆಯ ಪ್ರಮಾಣವು 98.71% ರಷ್ಟಿದೆ.
ಕಳೆದ 24 ಗಂಟೆಗಳಲ್ಲಿ 8,148 ಚೇತರಿಕೆಗಳು ವರದಿಯಾಗಿವೆ. ಒಟ್ಟು ಚೇತರಿಕೆಯ ಸಂಖ್ಯೆಯನ್ನು 4,43,64,841 ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವಾಲಯದ ವರದಿಗಳು ತಿಳಿಸಿವೆ. ಕೇಂದ್ರ ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯದ ಪ್ರಕಾರ, 95.21 ಕೋಟಿ ಎರಡನೇ ಡೋಸ್‌ಗಳು ಮತ್ತು 22.87 ಕೋಟಿ ಮುನ್ನೆಚ್ಚರಿಕೆ ಡೋಸ್‌ಗಳನ್ನು ಒಳಗೊಂಡಿರುವ ಒಟ್ಟು 220.66 ಕೋಟಿ ಲಸಿಕೆ ಡೋಸ್‌ಗಳನ್ನು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ನಿರ್ವಹಿಸಲಾಗಿದೆ.
ಕೊರೊನಾ ಹಾವಳಿಗೆ ಬಲಿಯಾದವರ ಸಂಖ್ಯೆ: ದೆಹಲಿ ಮತ್ತು ರಾಜಸ್ಥಾನದಿಂದ ತಲಾ ಮೂರು ಸಾವುಗಳು ವರದಿಯಾಗಿದ್ದರೆ, ಛತ್ತೀಸ್‌ಗಢ ಮತ್ತು ಪಂಜಾಬ್‌ನಿಂದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪುದುಚೇರಿ, ತಮಿಳುನಾಡು, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು (ಏಪ್ರಿಲ್ 14-2023) ವರದಿಯಾಗಿತ್ತು.
ನವದೆಹಲಿಯಲ್ಲಿ ಕೊರೊನಾ ಹೆಚ್ಚಳ: ರಾಜಧಾನಿಯಲ್ಲಿ ಹೊಸ ಕೊರೊನಾ ಪ್ರಕರಣಗಳು ತ್ವರಿತವಾಗಿ ಹೆಚ್ಚುತ್ತಿದ್ದು, ಗುರುವಾರದಂದು ಕಳೆದ 24 ಗಂಟೆಗಳಲ್ಲಿ 1527 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿತ್ತು. ಈ ಅಂಕಿ ಅಂಶವು ಬುಧವಾರ ಕಂಡುಬಂದ 1149 ಹೊಸ ಪ್ರಕರಣಗಳಿಗಿಂತ 378 ಹೆಚ್ಚಾಗಿತ್ತು. ಆದರೆ, ಸೋಂಕಿಗೆ ಒಳಗಾದ ಕೆಲವೇ ರೋಗಿಗಳಲ್ಲಿ ಕೊರೊನಾದ ಗಂಭೀರ ಲಕ್ಷಣಗಳು ಕಂಡುಬಂದಿತ್ತು.
ಕಳೆದ 24 ಗಂಟೆಗಳಲ್ಲಿ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಸರ್ಕಾರದ ವರದಿಯ ಪ್ರಕಾರ, ಇಬ್ಬರು ರೋಗಿಗಳಲ್ಲಿ ಒಬ್ಬರ ಸಾವಿಗೆ ಪ್ರಾಥಮಿಕ ಕಾರಣ ಕೊರೊನಾ ಆದರೆ, ಇನ್ನೊಬ್ಬರ ಸಾವಿಗೆ ಕಾರಣ ಇತರ ಕಾಯಿಲೆಗಳು ಎಂದು ಹೇಳಿದ್ದರು. ಸೋಂಕಿನ ಪ್ರಮಾಣವು ಶೇ 23.8 ರಿಂದ 27.77 ಕ್ಕೆ ಏರಿತ್ತು. ಕಳೆದ 24 ಗಂಟೆಗಳಲ್ಲಿ 909 ಕೊರೊನಾ ಸೋಂಕಿತರು ಗುಣಮುಖರಾಗಿದ್ದರು. 5,499 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಹೊಸ ರೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಸಕ್ರಿಯ ರೋಗಿಗಳ ಸಂಖ್ಯೆಯೂ 3962 ಕ್ಕೆ ಏರಿತ್ತು.
ಇದನ್ನೂ ಓದಿ : ದೇಶದಲ್ಲಿ ಮುಂದುವರಿದ ಕೊರೊನಾ ಹಾವಳಿ.. ಕರ್ನಾಟಕದಲ್ಲಿ ಒಬ್ಬ ಸಾವು!