ETV Bharat / bharat

3.68 ಲಕ್ಷ ಕೋವಿಡ್​ ಕೇಸ್​, 3,417 ಸಾವು: ಒಂದೇ ದಿನ 3 ಲಕ್ಷ ಸೋಂಕಿತರು ಗುಣಮುಖ - ಕೊರೊನಾ ಲಸಿಕೆ

ದೇಶದಲ್ಲಿ ಹೊಸದಾಗಿ ಪತ್ತೆಯಾದ 3,68,147 ಕೋವಿಡ್​ ಕೇಸ್​ಗಳೊಂದಿಗೆ ಭಾರತದ ಸೋಂಕಿತರ ಸಂಖ್ಯೆ 2 ಕೋಟಿ ಗಡಿಯತ್ತ ಸಾಗಿದೆ.

Total number of corona cases, deaths, Vaccination in India
ದೇಶದಲ್ಲಿ ಹೊಸದಾಗಿ 3.68 ಲಕ್ಷ ಕೋವಿಡ್​ ಕೇಸ್​, 3,417 ವರದಿ
author img

By

Published : May 3, 2021, 9:52 AM IST

ನವದೆಹಲಿ: ವ್ಯಾಕ್ಸಿನೇಷನ್​ ನಡುವೆಯೂ ಕೋವಿಡ್​ ಅಲೆಯಲ್ಲಿ ತತ್ತರಿಸಿರುವ ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 3,68,147 ಸೋಂಕಿತರು ಪತ್ತೆಯಾಗಿದ್ದಾರೆ. 3,417 ಜನರು ಅಸುನೀಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

2 ಕೋಟಿ ಗಡಿಯತ್ತ ಸೋಂಕಿತರ ಸಂಖ್ಯೆ:

ದೇಶದಲ್ಲೀಗ ಕೊರೊನಾ ಪ್ರಕರಣಗಳ ಸಂಖ್ಯೆ 2 ಕೋಟಿ (1,99,25,604) ಗಡಿಯತ್ತ ಸಾಗಿದ್ದು, ಈವರೆಗೆ ಎರಡು ಲಕ್ಷಕ್ಕೂ ಅಧಿಕ ಮಂದಿ (2,18,959) ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 34,13,642ಕ್ಕೆ ಏರಿಕೆಯಾಗಿದೆ.

ಒಂದೇ ದಿನ 3 ಲಕ್ಷ ಸೋಂಕಿತರು ಗುಣಮುಖ:

ಒಟ್ಟು 1,99,25,604 ಸೋಂಕಿತರ ಪೈಕಿ ಇಲ್ಲಿಯವರೆಗೆ 1,62,93, 003 ಜನರು ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಭಾನುವಾರ ಒಂದೇ ದಿನ 3,00,732 ಮಂದಿ ವೈರಸ್​ನಿಂದ ಚೇತರಿಸಿಕೊಂಡಿದ್ದಾರೆ.

15.71 ಕೋಟಿ ಮಂದಿಗೆ ಲಸಿಕೆ:

ಜನವರಿ 16 ರಿಂದ ದೇಶದಲ್ಲಿ ಲಸಿಕಾ ಅಭಿಯಾನ ಆರಂಭವಾಗಿದ್ದು, ಈವರೆಗೆ ಒಟ್ಟು 15,71,98,207 ಮಂದಿ ವ್ಯಾಕ್ಸಿನ್​ ಪಡೆದಿದ್ದಾರೆ. ಲಸಿಕೆ ಅಭಾವದ ನಡುವೆಯೂ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್​ ವ್ಯಾಕ್ಸಿನೇಷನ್​ ಡ್ರೈವ್​ ಪ್ರಾರಂಭಿಸಲಾಗಿದೆ. ಅನೇಕ ರಾಜ್ಯಗಳಲ್ಲಿ ಲಸಿಕೆ ಕೊರತೆಯಿಂದಾಗಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಆರಂಭವಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.