ನವದೆಹಲಿ: ದೇಶದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ನಿನ್ನೆ 38,667 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಕಳೆದ 24 ಗಂಟೆಗಳ ಅವಧಿಯಲ್ಲಿ 478 ಮಂದಿ ಮಾರಕ ಸೋಂಕಿನಿಂದಾಗಿ ಪ್ರಾಣ ತೆತ್ತಿದ್ದಾರೆ.
ಭಾರತದಲ್ಲೀಗ ಒಟ್ಟು ಕೊರೊನಾ ಕೇಸ್ಗಳ ಸಂಖ್ಯೆ 3,21,56,493ಕ್ಕೆ ಹಾಗೂ ಮೃತರ ಸಂಖ್ಯೆ 4,30,732ಕ್ಕೆ ಹೆಚ್ಚಳವಾಗಿದೆ. 3.21 ಕೋಟಿ ಸೋಂಕಿತರ ಪೈಕಿ 3,13,38,088 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಗುಣಮುಖರ ಪ್ರಮಾಣ ಶೇ.97.45ಕ್ಕೆ ಏರಿಕೆಯಾಗಿದೆ. ಉಳಿದಂತೆ 3,87,673 ಪ್ರಕರಣಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
53.61 ಕೋಟಿ ಡೋಸ್ ವ್ಯಾಕ್ಸಿನೇಷನ್
ಜನವರಿಯಿಂದ ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೆ ಒಟ್ಟು 53,61,89,903 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ಶುಕ್ರವಾರ ಒಂದೇ ದಿನ 63,80,937 ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ.
ದೆಹಲಿಯಲ್ಲಿ 'ಶೂನ್ಯ' ಸಾವು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಕೊರೊನಾದಿಂದ ಒಂದೂ ಸಾವು ದಾಖಲಾಗಿಲ್ಲ. ಕೋವಿಡ್ ಎರಡನೇ ಅಲೆ ಆರಂಭದ ಬಳಿಕ ಒಟ್ಟು 9 ಬಾರಿ ಶೂನ್ಯ ಸಾವು ದಾಖಲಾಗಿದೆ. 24 ಗಂಟೆಗಳಲ್ಲಿ ಕೇವಲ 50 ಕೇಸ್ಗಳು ವರದಿಯಾಗಿರುವುದಾಗಿ ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ.