ETV Bharat / bharat

ಮುಂಬೈನಿಂದ ವಿಶಾಖಪಟ್ಟಣಂಗೆ ಹೊರಟ ಮೊದಲ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು - 'ಆಕ್ಸಿಜನ್ ಎಕ್ಸ್‌ಪ್ರೆಸ್' ವಿಶೇಷ ರೈಲು

ದೇಶದ ವಿವಿಧ ಭಾಗಗಳಿಗೆ ಆಮ್ಲಜನಕ ಪೂರೈಸಲಿರುವ ಮೊದಲ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು ಮುಂಬೈನಿಂದ ವಿಶಾಖಪಟ್ಟಣಂನ ಉಕ್ಕಿನ ಘಟಕದೆಡೆಗೆ ತೆರಳುತ್ತಿದೆ.

'Oxygen Express
ಆಕ್ಸಿಜನ್ ಎಕ್ಸ್‌ಪ್ರೆಸ್
author img

By

Published : Apr 20, 2021, 11:12 AM IST

ಮುಂಬೈ (ಮಹಾರಾಷ್ಟ್ರ): ಕೋವಿಡ್​ ಪರಿಸ್ಥಿತಿ ಬಿಗಡಾಯಿಸಿರುವ ಈ ವೇಳೆಯಲ್ಲಿ ದೇಶದ ವಿವಿಧ ಭಾಗಗಳಿಗೆ ಆಮ್ಲಜನಕದ ಸಿಲಿಂಡರ್​ಗಳನ್ನು ತಲುಪಿಸಲೆಂದು ಭಾರತೀಯ ರೈಲ್ವೆ ಆರಂಭಿಸಿರುವ 'ಆಕ್ಸಿಜನ್ ಎಕ್ಸ್‌ಪ್ರೆಸ್' ವಿಶೇಷ ರೈಲು ಇಂದು ಮೊದಲನೆಯದಾಗಿ ಮುಂಬೈನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಹೊರಟಿದೆ.

ಮುಂಬೈನ ಕಲಂಬೋಲಿ ರೈಲ್ವೆ ನಿಲ್ದಾಣದಿಂದ ಏಳು ಖಾಲಿ ಟ್ಯಾಂಕರ್‌ಗಳೊಂದಿಗೆ 'ರೋ-ರೋ' (ರೋಲ್-ಆನ್, ರೋಲ್-ಆಫ್) ಸೇವೆಯ ಈ ರೈಲು ಹೊರಟಿದೆ. ಜಲ್ಗಾಂವ್, ನಾಗ್ಪುರ, ರಾಯ್‌ಪುರ ಜಂಕ್ಷನ್​ಗಳಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ದ್ರವರೂಪದ ಆಮ್ಲಜನಕ) ತುಂಬಿಸಿಕೊಂಡು ವಿಶಾಖಪಟ್ಟಣಂನ ಉಕ್ಕಿನ ಘಟಕಕ್ಕೆ ಇಂದು ರಾತ್ರಿ 8 ಗಂಟೆಯೊಳಗಾಗಿ ತಲುಪಲಿದೆ.

ಇದನ್ನೂ ಓದಿ: ಕೋವಿಡ್​ ವಿರುದ್ಧ ಹೋರಾಡಲು 'ಆಕ್ಸಿಜನ್​​ ಎಕ್ಸ್​ಪ್ರೆಸ್' ಹಳಿಗೆ..

ಅನೇಕ ರಾಜ್ಯಗಳಲ್ಲಿ ಕೋವಿಡ್​ ರೋಗಿಗಳು ಆಮ್ಲಜನಕದ ಕೊರತೆಯಿಂದ ಮೃತಪಡುತ್ತಿದ್ದಾರೆ. ಕೊರೊನಾ ತಂದಿಟ್ಟಿರುವ ಈ ಪರಿಸ್ಥಿತಿಯಲ್ಲಿ ದೇಶ ವೈದ್ಯಕೀಯ ವಲಯದಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಿದೆ. ಹೀಗಾಗಿ ಆಮ್ಲಜನಕದ ಸಿಲಿಂಡರ್​ಗಳನ್ನು ವಿವಿಧ ರಾಜ್ಯಗಳಿಗೆ ಪೂರೈಸಲು ಕೇಂದ್ರ ರೈಲ್ವೆ ಇಲಾಖೆ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲುಗಳ ವ್ಯವಸ್ಥೆ ಮಾಡಿದೆ.

ರೈಲುಗಳು ಸುಗಮವಾಗಿ, ತ್ವರಿತ ಗತಿಯಲ್ಲಿ ಸಾಗಿಸಲು ಗ್ರೀನ್​ ಕಾರಿಡಾರ್​ ರಚಿಸಲಾಗುವುದು ಎಂದು ಭಾನುವಾರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.