ETV Bharat / bharat

ದೇಹದ ಆಮ್ಲಜನಕ ಮಟ್ಟ ಕಡಿಮೆ ಮಾಡಲ್ವಂತೆ ಈ ಮರ... ಗಿಡದ ಕೆಳಗೇ ಜನರು ಕಳೆಯುತ್ತಿದ್ದಾರೆ ಸಮಯ!

ಕೋವಿಡ್​ ಸೋಂಕಿಗೊಳಗಾಗಿರುವ ಅನೇಕರು ಈ ಮರದ ಕೆಳಗೆ ಯೋಗ ಮಾಡಿ ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

author img

By

Published : May 22, 2021, 3:50 PM IST

Updated : May 22, 2021, 4:14 PM IST

agra
agra

ಆಗ್ರಾ: ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಹೆಚ್ಚಾಗಿದ್ದರಿಂದ ಅನೇಕರು ಆಕ್ಸಿಜನ್​ ಸಮಸ್ಯೆಗೊಳಗಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇಲ್ಲೊಂದು ಗ್ರಾಮದ ಜನರು ತಮ್ಮ ದೇಹದಲ್ಲಿನ ಆಕ್ಸಿಜನ್ ಮಟ್ಟ ಕಡಿಮೆ ಆಗಬಾರದು ಎಂಬ ಉದ್ದೇಶದಿಂದ ಅರಳಿ ಮರದ ಮೊರೆ ಹೋಗಿದ್ದಾರೆ.

ಪೀಪಲ್ ಮರ ಅಥವಾ ಅರಳಿ ಮರ ಎಂದು ಕರೆಯಿಸಿಕೊಳ್ಳುವ ಗಿಡ ಆಮ್ಲಜನಕದ ಮೂಲವಾಗಿದ್ದು, ಗ್ರಾಮದ ಅನೇಕರು ಅದರ ಕಳೆಗೆ ಸಮಯ ಕಳೆಯುತ್ತಿದ್ದಾರೆ.

agra
ಮರದ ಮೇಲೆ ಕುಳಿತುಕೊಳ್ಳಲು ಜಾಗ ನಿರ್ಮಾಣ

ಉತ್ತರ ಪ್ರದೇಶದ ಆಗ್ರಾದ ಬ್ಲಾಕ್​ ಬಾರೌಲಿ ಅಹಿರ್​ ಗ್ರಾಮ ಪಂಚಾಯ್ತಿ ನೌಬರಿಯಲ್ಲಿ ಈ ನೋಟ ಕಂಡು ಬಂದಿದೆ. ಈ ಮರ ದೇಹದಲ್ಲಿನ ಆಮ್ಲಜನಕ ಮಟ್ಟ ಕಡಿಮೆ ಮಾಡುವುದಿಲ್ಲ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಅನೇಕರು ಬೆಳಗ್ಗೆ ಮತ್ತು ಸಂಜೆ ಇಲ್ಲಿಗೆ ಆಗಮಿಸುತ್ತಿದ್ದು, ಅನೇಕರು ಈ ಗಿಡದ ಕೆಳಗೆ ಯೋಗ ಸಹ ಮಾಡಲು ಶುರು ಮಾಡಿದ್ದಾರೆ.

ಗಿಡದ ಕೆಳಗೇ ಜನರು ಕಳೆಯುತ್ತಿದ್ದಾರೆ ಸಮಯ!

ನೌಬರಿ ಗ್ರಾಮದ ಅನೇಕರು ಕೋವಿಡ್ ಸೋಂಕಿಗೊಳಗಾಗಿದ್ದಾರೆ. ಆದರೆ, ಈ ಮರದ ಕಳೆಗೆ ಯೋಗ ಮಾಡುವುದು ಶುರು ಮಾಡಿದಾಗಿನಿಂದಲೂ ಅವರು ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಆರೋಗ್ಯ ಇಲಾಖೆ ತಂಡ ಗ್ರಾಮಕ್ಕೆ ಬಂದು ತಕ್ಷಣ ಚಿಕಿತ್ಸೆ ನೀಡುತ್ತದೆ. ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಪರಿಸ್ಥಿತಿ ಗಂಭೀರವಾದಾಗ ಮಾತ್ರ ರೋಗಿಗಳನ್ನ ನಗರಕ್ಕೆ ಕಳುಹಿಸುತ್ತಾರೆ.

Last Updated : May 22, 2021, 4:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.