ಸ್ವರ್ಗ ಮತ್ತು ನರಕ ಎಂಬ ವಿಭಿನ್ನ ಕಾನ್ಸೆಪ್ಟ್ ಮೂಲಕ ಅದ್ಧೂರಿಯಾಗಿ ಶುಭಾರಂಭ ಮಾಡಿದ್ದ 'ಬಿಗ್ ಬಾಸ್ ಸೀಸನ್ 11' ಎರಡನೇ ವಾರಾಂತ್ಯ ಬಂದು ತಲುಪಿದೆ. ವೀಕೆಂಡ್ ಕಾರ್ಯಕ್ರಮಕ್ಕೂ ಮುನ್ನ ಮನೆಯಲ್ಲೊಂದು ಮಹತ್ವದ ಬದಲಾವಣೆ ನಡೆದಿದೆ. ಅದುವೇ ಸ್ವರ್ಗ ಮತ್ತು ನರಕ ಎಂಬ ವಿಭಿನ್ನ ವಾತಾವರಣವೀಗ ಒಂದಾಗಿದೆ. ಹೌದು, ಕಳೆದ ರಾತ್ರಿ ಪ್ರಸಾರ ಕಂಡಿರುವ ಸಂಚಿಕೆಯಲ್ಲಿ ಹೆಲ್ ಮತ್ತು ಹೆವೆನ್ ಕಾನ್ಸೆಪ್ಟ್ ಅನ್ನು ಒಂದುಗೂಡಿಸಲಾಗಿದೆ.
ಒಂದಾಯ್ತು ಸ್ವರ್ಗ ನರಕ: ಕಳೆದ ಸಂಚಿಕೆಯಲ್ಲಿ, ಎಮರ್ಜೆನ್ಸಿ ಜೋರಾಗಿ ಹೊಡೆದುಕೊಂಡಿದ್ದು, ಮನೆಯಲ್ಲಿದ್ದ ಸ್ಪರ್ಧಿಗಳು ಭಯಭೀತರಾಗಿದ್ದರು. ಕ್ರೇನ್ ಸಹಾಯದಿಂದ ಮನೆಯೊಳಗೆ ಪ್ರವೇಶ ಪಡೆದ ಬಿಗ್ ಬಾಸ್ ಸಿಬ್ಬಂದಿ ನರಕನಿವಾಸವನ್ನು ಗೆಡವಿದ್ದಾರೆ. ಮೊದಲಿಗೆ ಸಖತ್ ರಫ್ ಆಗಿ ವರ್ತಿಸಿದ ಸಿಬ್ಬಂದಿ, ನರಕ ನಿವಾಸದಲ್ಲಿದ್ದ ವಸ್ತುಗಳನ್ನು ತಂದು ಒಂದೆಡೆ ಎಸೆದಿದ್ದಾರೆ. ಕಬ್ಬಿಣದ ತಡೆಗೋಡೆಗಳನ್ನು ಸಹ ಕಿತ್ತೆಸೆದಿದ್ದಾರೆ. ನಂತರ ಬೃಹತ್ ತಡೆಗೋಡೆಯನ್ನು ಕ್ರೇನ್ ಸಹಾಯದಿಂದಲೇ ಹೊರಕ್ಕೆ ಕೊಂಡೊಯ್ದಿದ್ದಾರೆ. ಮೊದಲು ಮನೆಯ ಸದಸ್ಯರ ಜೊತೆ ಜೊತೆಗೆ ಹೊರಗಿನ ಪ್ರೇಕ್ಷಕರೂ ಸಹ ಗೊಂದಲಕ್ಕೊಳಗಾಗಿದ್ದರು. ನಂತರ, ಬಿಗ್ ಬಾಸ್ ಇನ್ಮುಂದೆ ಮನೆಮಂದಿಯೆಲ್ಲಾ ಒಟ್ಟಾಗಿ ದಿನದೂಡಲಿದ್ದೀರಿ ಎಂದು ತಿಳಿಸಿದಾಗ ಇಡೀ ಮನೆ ಸಂತಸಗೊಂಡಿದೆ.
ಬಿಗ್ ಬಾಸ್ ಕ್ಯಾಪ್ಟನ್: ಮುಂದಿನ ಕ್ಯಾಪ್ಟನ್ಗಾಗಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಶಿಶಿರ್ ಶಾಸ್ತ್ರಿ, ಗೌತಮಿ ಜಾದವ್, ಚೈತ್ರಾ ಕುಂದಾಪುರ ಅವರನ್ನು ಮನೆಮಂದಿ ಈ ಆಟಕ್ಕೆ ಆಯ್ಕೆ ಮಾಡಿದ್ದರು. ಆಟದಲ್ಲಿ ಮುನ್ನಡೆ ಸಾಧಿಸಿದ ಶಿಶಿರ್ ಅವರು ಗೌತಮಿ ಅವರನ್ನು ಆಟದಿಂದ ಹೊರಕ್ಕೆ ಕಳುಹಿಸಿದರು. ಅಂತಿಮವಾಗಿ, ಶಿಶಿರ್ ಶಾಸ್ತ್ರಿ ವರ್ಸಸ್ ಚೈತ್ರಾ ಕುಂದಾಪುರ ಆಟ ನಡೆಯಿತು. ಫೈನಲಿ, ಶಿಶಿರ್ ಶಾಸ್ತ್ರಿ ಟಾಸ್ಕ್ನಲ್ಲಿ ಗೆದ್ದು, ಮನೆಯ ಕ್ಯಾಪ್ಷನ್ ಅಗಿ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ 2ನೇ ಎಲಿಮಿನೇಶನ್! ಕಿಚ್ಚನ ಪಂಚಾಯ್ತಿಯಲ್ಲಿ ಯಾರ ವಿಷ್ಯ ಚರ್ಚೆ ಆಗ್ಲೇಬೇಕು?
ಹಂಸ ಕ್ಯಾಪ್ಟನ್ ಆಗಿದ್ದ ಸಂದರ್ಭ ಹಲವು ಅಡೆತಡೆ, ಸಮಸ್ಯೆಗಳನ್ನು ಎದುರಿಸಿದ್ದಾರೆ. ಕಳೆದ ಕಿಚ್ಚನ ಪಂಚಾಯಿತಿಯಲ್ಲೂ ಇದೇ ಚರ್ಚೆ ನಡೆದಿತ್ತು. ಕ್ಯಾಪ್ಟನ್ ಆದ ಬಳಿಕ ಸೂಕ್ತ ಕರ್ತವ್ಯಗಳನ್ನು ನಿಭಾಯಿಸಿಲ್ಲ ಎಂಬ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಬುದ್ಧಿವಾದ ಹೇಳಿದ್ದರು. ಅದಾಗ್ಯೂ, ಈ ವಾರವಿಡೀ ಮತ್ತದೇ ಸಮಸ್ಯೆಗಳು ಎದುರಾಗಿವೆ. ನಾಯಕತ್ವ ನಿಭಾಯಿಸುವಲ್ಲಿ ಹಂಸ ಕೊಂಚ ಎಡವಿದ್ದಾರೆ ಎಂಬಂತೆ ತೋರುತ್ತಿದೆ. ಹಂಸ ಅವರೇ ನನ್ನ ಬದಲು ಬೇರೆಯವರಿಗೆ ಜವಾಬ್ದಾರಿ ವಹಿಸಿ, ತಪ್ಪಿನ ಶಿಕ್ಷೆಗಳನ್ನು ನನಗೇ ಕೊಡಿ ಎಂದು ತಿಳಿಸಿದ್ದಾರೆ. ಹೀಗೆ ಒಂದು ವಾರದ ಕ್ಯಾಪ್ಟನ್ಸಿಯನ್ನು ಮನೆಮಂದಿ ಗಮನಿಸಿದ್ದು, ಈಗಿನ ಕ್ಯಾಪ್ಟನ್ ಶಿಶಿರ್ ಅವರು ಹೇಗೆ ತಮ್ಮ ಕರ್ತವ್ಯ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಸ್ಪರ್ಧಿಗಳ ಜೊತೆಗೆ ನೋಡುಗರಲ್ಲಿದೆ.
ಇದನ್ನೂ ಓದಿ: ದರ್ಶನ್ ಫ್ಯಾನ್ಸ್ಗೆ ಗುಡ್ ನ್ಯೂಸ್: ರೀ ರಿಲೀಸ್ ಆಗಲಿದೆ ಸೂಪರ್ ಹಿಟ್ 'ನವಗ್ರಹ' ಸಿನಿಮಾ
ಇನ್ನೂ ಕಳೆದ ದಿನ ''ಕಿಚ್ಚನ ಪಂಚಾಯ್ತಿಯಲ್ಲಿ ಯಾರ ವಿಷ್ಯ ಚರ್ಚೆ ಆಗ್ಲೇಬೇಕು ಕಮೆಂಟ್ ಮಾಡಿ!'' ಎಂಬ ಕ್ಯಾಪ್ಷನ್‌ನೊಂದಿಗೆ ಕಲರ್ಸ್ ಕನ್ನಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿತ್ತು. ಸಹಜವಾಗಿ, ವೀಕೆಂಡ್ ಶೋ ಕಿಚ್ಚನ ಕ್ಲಾಸ್ಗೆ ಹೆಸರುವಾಸಿ. ನಯವಾಗೇ ತಪ್ಪುಗಳನ್ನು ತಿದ್ದಿ ತೀಡುವ ಕೆಲಸಗಳು ನಡೆಯುತ್ತವೆ. ಈ ವಾರವೂ ಹಲವು ಸರಿತಪ್ಪುಗಳು ನಡೆದಿದ್ದು, ಬಿಗ್ ಬಾಸ್ ಹಂಚಿಕೊಂಡಿರುವ ಈ ಪೋಸ್ಟ್ಗೆ, ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.