ETV Bharat / state

ಈವೆಂಟ್​ ಮ್ಯಾನೇಜ್‌ಮೆಂಟ್‌ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಬೆಂಗಳೂರಲ್ಲಿ ದಂಪತಿ ಬಂಧನ - PROSTITUTION CASE

ಈವೆಂಟ್​ ಮ್ಯಾನೇಜ್‌ಮೆಂಟ್‌ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿ ದಂಪತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

prostitution case
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : Oct 12, 2024, 10:27 AM IST

ಬೆಂಗಳೂರು: ಈವೆಂಟ್​ ಮ್ಯಾನೇಜ್‌ಮೆಂಟ್‌ ಉದ್ಯಮದ ಹೆಸರಿನಲ್ಲಿ ಹೈಟೆಕ್​ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನ್ನು ಸಿಸಿಬಿ‌ಯ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ. ಪಟ್ಟೆಗಾರಪಾಳ್ಯದ ನಿವಾಸಿಗಳಾಗಿರುವ ಪ್ರಕಾಶ್ ಹಾಗೂ ಪಾರಿಜಾತ ಬಂಧಿತ ದಂಪತಿ.

ರಾಕೇಶ್ ಹಾಗೂ ಪೂಜಾ ಎಂಬ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದ ಆರೋಪಿಗಳು, ಬಡ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಉದ್ಯೋಗದ ಭರವಸೆ ನೀಡುತ್ತಿದ್ದರು. ಬಳಿಕ ಅವರನ್ನು ಈವೆಂಟ್​ ಮ್ಯಾನೇಜ್‌ಮೆಂಟ್‌ ಕೆಲಸದ ಸೋಗಿನಲ್ಲಿ ವಾರಕ್ಕೊಮ್ಮೆ ತಮಿಳುನಾಡು, ಪಾಂಡಿಚೇರಿ ರೆಸಾರ್ಟ್​ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಕರೆದೊಯ್ದು ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳುತ್ತಿದ್ದರು. ಅನ್ಯ ರಾಜ್ಯದ ಶ್ರೀಮಂತ ಉದ್ಯಮಿಗಳು, ರೆಸಾರ್ಟ್​ಗಳಿಗೆ ಭೇಟಿ ನೀಡುತ್ತಿದ್ದವರಿಂದ 25 ಸಾವಿರದಿಂದ 50 ಸಾವಿರದವರೆಗೂ ಹಣ ಪಡೆದು ದಂಧೆ ನಡೆಸುತ್ತಿದ್ದ ಆರೋಪಿಗಳು, ಮದ್ಯವನ್ನೂ ಸಹ ಪೂರೈಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸರಿಯಾಗಿ ಬಟ್ಟೆ ಧರಿಸದಿದ್ದರೆ ಆ್ಯಸಿಡ್ ಎರಚುವ ಸಂದೇಶ ಕಳುಹಿಸಿದ ವ್ಯಕ್ತಿ ಕೆಲಸದಿಂದ ವಜಾ

ಬೆಂಗಳೂರಿನಿಂದ ಅಕ್ರಮವಾಗಿ ಯುವತಿಯರನ್ನು ಕರೆದೊಯ್ಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿತರ ವಶದಲ್ಲಿದ್ದ ನಾಲ್ವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಯುವಕನ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಫೈರಿಂಗ್: ಇಬ್ಬರು ಹಂತಕರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.