ETV Bharat / bharat

ಕೊರೊನಾ ವಿರುದ್ಧದ ಹೋರಾಟಕ್ಕೆ ಹಾಂಗ್​ಕಾಂಗ್​ ಬೆಂಬಲ.. 300 ಆಕ್ಸಿಜನ್​ ಸಾಂದ್ರಕ ರವಾನೆ - ವೈದ್ಯಕೀಯ ಉಪಕರಣ

ಯುಎಸ್​, ಐರ್ಲ್ಯಾಂಡ್​, ಜಪಾನ್​ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿದೆ..

Hong Kong
ಹಾಂಗ್​ಕಾಂಗ್
author img

By

Published : Apr 30, 2021, 1:18 PM IST

ನವದೆಹಲಿ : ಕೊರೊನಾ ಎರಡನೇ ಅಲೆಯಿಂದ ಕಂಗೆಟ್ಟಿರುವ ಭಾರತದ ಸಹಾಯಕ್ಕೆ ಹಾಂಗ್ ಕಾಂಗ್‌ ಮುಂದಾಗಿದೆ. ಸುಮಾರು 300 ಆಮ್ಲಜನಕ ಸಾಂದ್ರಕಗಳ ಜೊತೆಗೆ ಇತರ ವೈದ್ಯಕೀಯ ಉಪಕರಣಗಳ ಸರಕನ್ನು ಕಳುಹಿಸಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವಿಟರ್​ ಮೂಲಕ ಮಾಹಿತಿ ನೀಡಿದ್ದು, "ಹಾಂಗ್‌ಕಾಂಗ್​ನಿಂದ ದೆಹಲಿಗೆ ಇಂಡಿಗೊ ಏರ್‌ಲೈನ್ಸ್ ವಿಮಾನದ ಮೂಲಕ 300 ಆಕ್ಸಿಜನ್ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಉಪಕರಣಗಳು ಆಗಮಿಸಿವೆ. ನಾವು ಒಗ್ಗಟ್ಟಾಗಿ ಹೋರಾಡೋಣ" ಎಂದು ಪುರಿ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಐರ್ಲ್ಯಾಂಡ್

ಇದಕ್ಕೂ ಮುನ್ನ ಯುಕೆಯಿಂದ 120 ಆಮ್ಲಜನಕ ಸಾಂದ್ರಕಗಳ ಮತ್ತೊಂದು ಸರಕು ಭಾರತಕ್ಕೆ ಆಗಮಿಸಿದೆ. ಇನ್ನು, ಯುಎಸ್​, ಐರ್ಲ್ಯಾಂಡ್​, ಜಪಾನ್​ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.