ETV Bharat / bharat

ಶೀಘ್ರದಲ್ಲೇ WHOನ ತುರ್ತು ಬಳಕೆ ಪಟ್ಟಿಯಲ್ಲಿ ಕೋವ್ಯಾಕ್ಸಿನ್​: ಕೇಂದ್ರ ಸರ್ಕಾರ ವಿಶ್ವಾಸ

ಭಾರತ್ ಬಯೋಟೆಕ್ ಶೀಘ್ರದಲ್ಲೇ ಕೋವಾಕ್ಸಿನ್​​ಗಾಗಿ WHO ನ ತುರ್ತು ಬಳಕೆ ಪಟ್ಟಿ (ಇಯುಎಲ್)ಯನ್ನು ಪಡೆಯಲಿದೆ ಎಂದು ಕೋವಿಡ್ 19 ರಾಷ್ಟ್ರೀಯ ಕಾರ್ಯಪಡೆಯ ಅಧ್ಯಕ್ಷ ಡಾ.ವಿ.ಕೆ.ಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

vaccine
vaccine
author img

By

Published : Jun 4, 2021, 9:05 PM IST

ನವದೆಹಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಶೀಘ್ರದಲ್ಲೇ ಕೋವ್ಯಾಕ್ಸಿನ್​​ಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆ ಪಟ್ಟಿಯನ್ನು (ಇಯುಎಲ್) ಪಡೆಯಲಿದೆ ಎಂಬ ಭರವಸೆಯನ್ನು ಕೇಂದ್ರ ಸರ್ಕಾರ ಹೊಂದಿದೆ.

ನಾವು ನಿರಂತರವಾಗಿ ಭಾರತ್ ಬಯೋಟೆಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಡೇಟಾ ಹಂಚಿಕೆ ಪ್ರಕ್ರಿಯೆಯು ನಡೆಯುತ್ತಿದೆ ಶೀಘ್ರದಲ್ಲಿ ಇಯುಎಲ್ ಪಡೆಯಲಿದೆ ಎಂದು ನಾವು ನಂಬುತ್ತೇವೆ ”ಎಂದು ಕೋವಿಡ್ 19 ರಾಷ್ಟ್ರೀಯ ಕಾರ್ಯಪಡೆಯ ಅಧ್ಯಕ್ಷ ಮತ್ತು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿ (ಇಯುಎಲ್-Emergency Use Listing) ಕೋವಿಡ್ -19 ಲಸಿಕೆಗಳ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸುತ್ತದೆ ಮತ್ತು ಕೋವಿಡ್ -19 ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಮತ್ತು ನಿರ್ವಹಿಸಲು ದೇಶಗಳು ತಮ್ಮದೇ ಆದ ನಿಯಂತ್ರಕ ಅನುಮೋದನೆ ತ್ವರಿತಗೊಳಿಸಲು ಸಹ ಇದು ಅನುಮತಿಸುತ್ತದೆ.

ಕೋವಾಕ್ಸಿನ್ ಈಗಾಗಲೇ 11 ದೇಶಗಳಿಂದ ನಿಯಂತ್ರಕ ಅನುಮೋದನೆ ಪಡೆದಿದೆ, ಆದರೆ, ಇತರ ಏಳು ರಾಷ್ಟ್ರಗಳ 11 ಕಂಪನಿಗಳು ತಂತ್ರಜ್ಞಾನ ವರ್ಗಾವಣೆ ಮತ್ತು ಕೊವ್ಯಾಕ್ಸಿನ್ ಉತ್ಪಾದನೆಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ಹೇಳಿದ್ರು.

ಚಿಕ್ಕ ಮಕ್ಕಳಿಗೆ ಕೋವಿಡ್ -19 ಸೋಂಕು ತಗುಲಿದರೆ ಅವರ ಚಿಕಿತ್ಸೆಗೆ ವೈದ್ಯಕೀಯ - ಮಾರ್ಗಸೂಚಿಗಳನ್ನು ಸರ್ಕಾರ ಅನುಮೋದಿಸಿದೆ ಎಂದು ಇದೇ ವೇಳೆ, ಅವರು ಹೇಳಿದರು. ಚಿಕ್ಕ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ, ಡಾ. ಪಾಲ್ ಪ್ರತಿಕ್ರಿಯಿಸಿ, ಭಾರತದಲ್ಲಿ ಲಸಿಕೆ ತಯಾರಕರು ಈ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. 13-14 ಕೋಟಿ ಚಿಕ್ಕಮಕ್ಕಳನ್ನು ಹೊಂದಿರುವ ಭಾರತಕ್ಕೆ ಸುಮಾರು 26 ಕೋಟಿಗಳಷ್ಟು ದೊಡ್ಡ ಪ್ರಮಾಣದ ಲಸಿಕೆ ಬೇಕು. ನಾವು ಮೊದಲು ಲಭ್ಯತೆ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.