ETV Bharat / bharat

ರಸ್ತೆ ಪಕ್ಕ ಮಲಗಿದ್ದ ಬಡ ದಂಪತಿ ಮೇಲೆ ಹರಿದ ಕಾರು; ಪತಿ ಸಾವು, ಪತ್ನಿ,ಮಗು ಗಂಭೀರ - ರಸ್ತೆ ಪಕ್ಕ ಮಲಗಿದ್ದ ದಂಪತಿ ಮೇಲೆ ಹರಿದ ಕಾರು

ರಸ್ತೆ ಬದಿ ಮಲಗಿದ್ದ ಬಡ ಕುಟುಂಬದ ಮೇಲೆ ಕಾರು ಹರಿದಿರುವ ಪರಿಣಾಮ ಗಂಡ ಸ್ಥಳದಲ್ಲೇ ಸಾವನ್ನಪ್ಪಿ ಪತ್ನಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ.

hit and run case in kota
hit and run case in kota
author img

By

Published : Apr 15, 2022, 4:03 PM IST

ಕೋಟಾ(ರಾಜಸ್ಥಾನ): ರಸ್ತೆ ಬದಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ ದಂಪತಿ ರಾತ್ರಿ ವೇಳೆ ತಮ್ಮ ಮಗನೊಂದಿಗೆ ರಸ್ತೆಪಕ್ಕದ ಫುಟ್​ಪಾತ್​ ಮೇಲೆ ಮಲಗಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಕಾರೊಂದು ಅವರ ಮೈಮೇಲೆ ಹರಿದು ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಹೆಂಡತಿ, ಮಗು ಗಂಭೀರವಾಗಿ ಗಾಯಗೊಂಡರು.

ರಾಜಸ್ಥಾನದ ಕೋಟಾದ ನಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಗಾಯಾಳುಗಳನ್ನು ಮಹಾರಾವ್​ ಭೀಮ್ ಸಿಂಗ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆ.ಕೆ ಲೋನ್​​ ಆಸ್ಪತ್ರೆಯ ಮುಂಭಾಗದ ಮಾಂಟೆಸ್ಸರಿ ಶಾಲೆಯ ಪಕ್ಕದಲ್ಲಿ ದಂಪತಿ ವಾಸವಿದ್ದರು. ತಡರಾತ್ರಿ ನಯಾಪುರ ಕಡೆಯಿಂದ ತೆರಳುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಇವರ ಮೇಲೆ ಹರಿದಿದೆ. ದಿನೇಶ್ ಸಾವನ್ನಪ್ಪಿದ್ದು, ಪತ್ನಿ ವೇಣಿ ಹಾಗೂ ಮಗ ರಾಕೇಶ್​ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತದಲ್ಲಿ ಹೊತ್ತಿ ಉರಿದ ಕಾರು; ದಂಪತಿ ಸೇರಿ ಮೂವರು ಸಜೀವ ದಹನ

ದಂಪತಿ ಮೂಲತಃ ಬರನ್​​ನ ನಿವಾಸಿಗಳೆಂದು ಹೇಳಲಾಗ್ತಿದೆ. ಕೋಟಾದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಕಾರಿನಲ್ಲಿದ್ದ ಪತಿ-ಪತ್ನಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈಗಾಗಲೇ ಕಾರನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಿಟ್​ ಅಂಡ್​ ರನ್​ ಪ್ರಕರಣ ನಡೆದ ಸ್ಥಳದಲ್ಲಿ ಸುಮಾರು ಹತ್ತಾರು ಕುಟುಂಬಗಳು ವಾಸ ಮಾಡುತ್ತಿವೆ. ಸಣ್ಣ ಸಣ್ಣ ಗುಡಿಸಲು ನಿರ್ಮಿಸಿಕೊಂಡು ಸುಮಾರು 40 ವರ್ಷಗಳಿಂದ ಇವರೆಲ್ಲಾ ನೆಲೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.