ETV Bharat / bharat

ಬಡವರ ಹಸಿವು ನೀಗಿಸುವ ದಂಪತಿ..16 ವರ್ಷಗಳಿಂದ ರೂಪಾಯಿಗೊಂದು ಇಡ್ಲಿ ಮಾರಾಟ! - 1 ರೂಪಾಯಿಗೆ ಇಡ್ಲಿ

ಕಳೆದ 16 ವರ್ಷಗಳಿಂದ ದಂಪತಿಗಳು ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡ್ತಿದ್ದು, ಈ ಮೂಲಕ ಪ್ರತಿದಿನ ಸಾವಿರಾರು ಬಡವರ ಪಾಲಿಗೆ ಹೀರೋಗಳಾಗಿದ್ದಾರೆ.

idli for one rupee
idli for one rupee
author img

By

Published : Oct 7, 2021, 9:50 PM IST

ಪೂರ್ವ ಗೋದಾವರಿ(ಆಂಧ್ರಪ್ರದೇಶ): ಸದ್ಯದ ದುಬಾರಿ ದುನಿಯಾದಲ್ಲಿ ಎಲ್ಲವೂ ತುಟ್ಟಿ. ಚೀಲ ತುಂಬ ಹಣವನ್ನು ಒಯ್ದು ಜೇಬು ತುಂಬುವಷ್ಟೇ ಸಾಮಗ್ರಿ ತರುವಂತಾಗಿದೆ. ಆದರೆ ಈ ಎಲ್ಲದರ ಮಧ್ಯೆ ಕಳೆದ 16 ವರ್ಷಗಳಿಂದ ದಂಪತಿಗಳಿಬ್ಬರು ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಬಡವರ ಹಸಿವು ನೀಗಿಸುವ ಕೆಲಸ ಮಾಡ್ತಿದ್ದಾರೆ.

ಹೌದು, ಒಂದು ರೂಪಾಯಿಗೆ ಏನು ಬರುತ್ತೆ ಎಂದು ಕೇಳುವ ಜನರಿದ್ದಾರೆ. ಆದರೆ, ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ದಂಪತಿಗಳು 1 ರೂಪಾಯಿಗೆ ಇಡ್ಲಿ ಸೇರಿದಂತೆ ಇತರ ತಿಂಡಿ ಮಾರಾಟ ಮಾಡ್ತಿದ್ದಾರೆ.

16 ವರ್ಷಗಳಿಂದ ರೂಪಾಯಿಗೊಂದು ಇಡ್ಲಿ ಮಾರಾಟ

ಕಳೆದ 16 ವರ್ಷಗಳಿಂದ ಬೆಲೆಯಲ್ಲಿ ಇವರು ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಕಳೆದ ಒಂದು ದಶಕದ ಹಿಂದೆ ಕೇವಲ 50 ಪೈಸೆಗೆ ಇಡ್ಲಿ ಹಾಗೂ ತಿಂಡಿ ಮಾರಾಟ ಮಾಡ್ತಿದ್ದರು. ಆದರೆ, ಇದೀಗ ಅದರ ಬೆಲೆ 1 ರೂಪಾಯಿ ಆಗಿದೆ. ಬೇರೆ ಹೋಟೆಲ್​ಗಳು 20ರಿಂದ 30 ರೂಪಾಯಿಗೆ ಮಾರಾಟ ಮಾಡುತ್ತಾರೆ.. ಅದು 3,4, ಫೈವ್ ಸ್ಟಾರ್​ ಹೋಟೆಲ್​ಗಳಲ್ಲಿ ನೂರರ ಆಜುಬಾಜು ದರ ಇದೆ. ಆದರೆ ಈ ಬಗ್ಗೆ ಈ ದಂಪತಿಗಳನ್ನ ಪ್ರಶ್ನೆ ಮಾಡಿದರೆ, ನಮ್ಮಲ್ಲಿ ಪ್ರತಿದಿನ ಅನೇಕರು ಸಂತೃಪ್ತಿಯಿಂದ ಇಡ್ಲಿ ಸೇವನೆ ಮಾಡ್ತಾರೆ ಎಂಬ ಸಂತೋಷವಿದೆ ಎನ್ನುತ್ತಾರೆ.

ಈ ದಂಪತಿ ಕೇವಲ ಜೀವನೋಪಾಯಕ್ಕಾಗಿ ಈ ಕೆಲಸ ಮಾಡ್ತಿಲ್ಲ. ಸಾಮಾಜಿಕ ಸೇವೆಯ ಕೆಲಸವಾಗಿ, ಈ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ. ಪೆದ್ದಪುರಂ ಮಂಡಲ್​ ಕೊಟ್ಟೂರಿನಲ್ಲಿ ಇವರ ಅಂಗಡಿ ಇದೆ.

idli for one rupee
ರೂಪಾಯಿಗೊಂದು ಇಡ್ಲಿ ಮಾರಾಟ ಮಾಡುವ ದಂಪತಿ

ಇದನ್ನೂ ಓದಿರಿ: 'IPLನೇ ಬನಾದಿ ಜೋಡಿ'.. ಮೈದಾನದಲ್ಲೇ ಗರ್ಲ್​​ಫ್ರೆಂಡ್​ಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿದ ಚಹರ್​!

ಅತಿ ಅಗ್ಗದ ಬೆಲೆಗೆ ಆಹಾರ ಪೂರೈಕೆ ಮಾಡುವುದನ್ನ ಸವಾಲಾಗಿ ಸ್ವೀಕಾರ ಮಾಡಿರುವ ಈ ದಂಪತಿ, ಜೀವನದಲ್ಲಿ ಅನೇಕ ರೀತಿಯ ಕಠಿಣ ಸಮಸ್ಯೆ ಎದುರಿಸಿದ್ದಾರೆ. ಆದರೆ ಬೆಲೆಯಲ್ಲಿ ಮಾತ್ರ ಯಾವುದೇ ರೀತಿಯ ಏರಿಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಬಡವರು ಹೆಚ್ಚಿನ ಹಣ ನೀಡಿ ಉಪಹಾರ ಸೇವನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾವು ಕಡಿಮೆ ದರದಲ್ಲಿ ಆಹಾರ ನೀಡುವ ಪ್ರವೃತ್ತಿ ಮುಂದುವರೆಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.