ಪತ್ತನಂತಿಟ್ಟ(ಕೇರಳ): ಫೇಸ್ಬುಕ್ನಲ್ಲಿ ಪರಿಚಯವಾಗಿ ಪ್ರೀತಿ, ಪ್ರೇಮದ ಮೋಸದಾಟಕ್ಕೆ ಅನೇಕರು ಬಲಿಯಾಗಿ, ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಅನೇಕ ನಿದರ್ಶನಗಳಿವೆ. ಇದೀಗ ಕೇರಳದಲ್ಲಿ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕೇರಳದ ಪತ್ತನಂತಿಟ್ಟ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಫೇಸ್ಬುಕ್ ಮೂಲಕ ಪರಿಚಯವಾಗಿರುವ ವಿವಾಹಿತೆ ಗಂಡನ ಸಹಾಯದಿಂದ ಯುವಕನಿಗೆ ಇಷ್ಟೊಂದು ಹಣ ಮೋಸ ಮಾಡಿದ್ದಾಳೆ.
ಇದನ್ನೂ ಓದಿ: ಪತ್ನಿ ನೇಣಿಗೆ ಶರಣಾಗುವುದನ್ನು ತಡೆಯುವ ಬದಲು ವಿಡಿಯೋ ಮಾಡಿ ವಿಕೃತಿ ಮೆರೆದ ಪತಿ
ನರಿಯಪುರಂನಲ್ಲಿ ಆಟೋಮೊಬೈಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಕುಮಾರ್ಗೆ 2020ರ ಏಪ್ರಿಲ್ ತಿಂಗಳಲ್ಲಿ ಫೇಸ್ಬುಕ್ ಮೂಲಕ ಪಾರ್ವತಿ (31) ಪರಿಚಯವಾಗಿದ್ದಾಳೆ. ಈ ವೇಳೆ ತಾನು ಅವಿವಾಹಿತೆ ಎಂದು ಪರಿಚಯ ಮಾಡಿಕೊಂಡಿದ್ದಳು. ಇದ್ರ ಜೊತೆಗೆ, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾಳೆ. ಜೊತೆಗೆ ಸುನೀಲ್ ಲಾಲ್(ಗಂಡ) ಎಂಬುವವರ ಮನೆಯಲ್ಲಿ ಅತಿಥಿಯಾಗಿ(paying guest) ಉಳಿದುಕೊಂಡಿರುವುದಾಗಿ ಹೇಳಿಕೊಂಡಿದ್ದಾಳೆ.
ಕೆಲ ದಿನಗಳವರೆಗೆ ಇಬ್ಬರ ನಡುವೆ ಚಾಟಿಂಗ್ ಮುಂದುವರೆದಿದೆ. ಈ ವೇಳೆ ಆತನ ನಂಬಿಕೆ ಗಳಿಸುವಲ್ಲಿ ಯಶಸ್ವಿಯಾಗಿರುವ ವಂಚಕಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ಇದರ ಮಧ್ಯೆ ತನ್ನೊಂದಿಗೆ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಪಾರ್ವತಿ ಜೊತೆ ಮದುವೆ ಮಾಡಿಕೊಳ್ಳುವಂತೆ ಅಲ್ಲಿ ಮಾತನಾಡಿದ್ದಾರೆ.
ವಿವಿಧ ಸಂದರ್ಭಗಳಲ್ಲಿ ಆತನಿಂದ ಲಕ್ಷಗಟ್ಟಲೆ ಹಣ ಪಡೆದಿರುವ ಪಾರ್ವತಿ, ತದನಂತರ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾಳೆ. ಈ ವೇಳೆ ಆಕೆಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಮದುವೆ ಮಾಡಿಕೊಂಡಿರುವ ವಿಷಯ ಗೊತ್ತಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.