ETV Bharat / bharat

ಆಟೋ ಮೇಲೆ ಉರುಳಿಬಿದ್ದ ಲಾರಿಗಳು.. ಅಪ್ಪ-ಅಮ್ಮನೊಂದಿಗೆ ಮಗು ಸ್ಥಳದಲ್ಲೇ ಸಾವು! - ತೆಲಂಗಾಣ ಸುದ್ದಿ

Telangana accident: ಎರಡು ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಪಕ್ಕದ ಆಟೋ ಮೇಲೆ ಉರುಳಿ ಬಿದ್ದಿರುವ ಘಟನೆ ತೆಲಂಗಾಣದಲ್ಲಿ ಸಂಭವಿಸಿದೆ.

road accident at Telangana, Couple and child died in road accident, Peddapalli road accident, Two lorry collide in Telangana, Telangana news, ತೆಲಂಗಾಣದಲ್ಲಿ ರಸ್ತೆ ಅಪಘಾತ, ರಸ್ತೆ ಅಪಘಾತದಲ್ಲಿ ದಂಪತಿ ಮತ್ತು ಮಗು ಸಾವು, ಪೆದ್ದಪಲ್ಲಿ ರಸ್ತೆ ಅಪಘಾತ, ತೆಲಂಗಾಣದಲ್ಲಿ ಎರಡು ಲಾರಿಗಳ ಮಧ್ಯೆ ಡಿಕ್ಕಿ, ತೆಲಂಗಾಣ ಸುದ್ದಿ,
ಆಟೋ ಮೇಲೆ ಉರುಳಿ ಬಿದ್ದ ಲಾರಿಗಳು
author img

By

Published : Dec 21, 2021, 7:20 AM IST

ಪೆದ್ದಪಲ್ಲಿ(ತೆಲಂಗಾಣ): ಜಿಲ್ಲೆಯ ಗೋದಾವರಿಖನಿಯ ಗಂಗಾನಗರದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಆಟೋದ ಮೇಲೆ ಲಾರಿಯೊಂದು ಉರುಳಿ ಬಿದ್ದಿದ್ದು, ದಂಪತಿ ಜೊತೆ ಮಗು ಸಹ ಸಾವನ್ನಪ್ಪಿರುವ ದುರ್ಘಟನೆ ಬೆಳಕಿಗೆ ಬಂದಿದೆ.

ಘಟನೆ ವಿವರ: ರಾಮಗುಂಡ ನಿವಾಸಿ ಶೇಖ್​ ಶೇಕಿಲ್, ಪತ್ನಿ ರೇಷ್ಮಾ ಹಾಗೂ ಇಬ್ಬರು ಮಕ್ಕಳ ಜೊತೆ ಆಟೋದಲ್ಲಿ ಆರು ಜನರು ಮಂಚಿರ್ಯಾಲ ಜಿಲ್ಲೆಯ ಇಂದಾರಂ ಗ್ರಾಮಕ್ಕೆ ತೆರಳುತ್ತಿದ್ದರು. ಗೋದಾವರಿಖನಿ ಗಂಗಾನಗರ್​ ಫ್ಲೈಓವರ್​ ಯೂಟರ್ನ್​ ಬಳಿ ಕಲ್ಲಿದ್ದಲು ತುಂಬಿಕೊಂಡು ಬರುತ್ತಿದ್ದ ಲಾರಿ ಮತ್ತು ಮಣ್ಣು ತೆಗೆದುಕೊಂಡು ಹೋಗುತ್ತಿದ್ದ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಓದಿ: ಚಂಡಮಾರುತಕ್ಕೆ ತತ್ತರಿಸಿದ ಫಿಲಿಪ್ಪಿನ್ಸ್​... ಸಾವಿನ ಸಂಖ್ಯೆ 375ಕ್ಕೇರಿಕೆ!

ಅಪಘಾತ ಸಂಭವಿಸುತ್ತಿರುವಾಗ ಲಾರಿ ಪಕ್ಕದಲ್ಲೇ ಆಟೋ ಪ್ರಯಾಣಿಸುತ್ತಿದ್ದು, ಲಾರಿಯೊಂದು ಆಟೋದ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಶೇಖ್​ ಶಕೀಲ್​, ರೇಷ್ಮಾ ಸೇರಿ ಮಗುವೊಂದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎರಡು ತಿಂಗಳ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.