ETV Bharat / bharat

ವಿಶೇಷ ಪ್ರದರ್ಶನದಲ್ಲಿ ಗೆದ್ದ ಕತ್ತೆಗೆ 69 ಲಕ್ಷ ರೂಪಾಯಿ ಬಹುಮಾನ!

ಕತ್ತೆಗಳ ತಳಿ ಅಭಿವೃದ್ಧಿಯ ನಿಟ್ಟಿನಲ್ಲಿ ಕೊಲ್ಲಾಪುರದ ಪಂಚಮಹಾಭೂತ ಲೋಕೋತ್ಸವದಲ್ಲಿ ಕತ್ತೆಗಳಿಗಾಗಿಯೇ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

Countrys first donkey show in Kolhapur
ಕೊಲ್ಹಾಪುರದಲ್ಲಿ ದೇಶದ ಮೊದಲ ಕತ್ತೆ ಪ್ರದರ್ಶನ
author img

By

Published : Feb 24, 2023, 4:00 PM IST

ಕೊಲ್ಲಾಪುರ (ಮಹಾರಾಷ್ಟ್ರ): ಸಾಕುಪ್ರಾಣಿಗಳಾದ ನಾಯಿ, ಬೆಕ್ಕು, ಕುದುರೆಗಳ ಶೋ ಅಥವಾ ಪ್ರದರ್ಶನ ನೋಡಿದ್ದೇವೆ. ಆದರೆ ಅಚ್ಚರಿ ಎಂಬಂತೆ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕತ್ತೆ ಪ್ರದರ್ಶನ ನಡೆದಿದೆ. ಇದು ದೇಶದಲ್ಲೇ ಮೊದಲು!. ಇಲ್ಲಿನ ಕನೇರಿ ಮಠದಲ್ಲಿ ನಡೆಯುತ್ತಿರುವ ಸುಮಂಗಲಂ ಪಂಚಮಹಾಭೂತ ಲೋಕೋತ್ಸವದಲ್ಲಿ ಈ ವಿಶಿಷ್ಟ ಪ್ರದರ್ಶನ ನಡೆದಿದೆ. ಇನ್ನೂ ವಿಶೇಷ ಎಂದರೆ, ಸ್ಪರ್ಧೆಯಲ್ಲಿ ಗೆದ್ದ ಕತ್ತೆಗೆ 69 ಲಕ್ಷ ಬಹುಮಾನ ಇಡಲಾಗಿತ್ತು.

ಒಂದು ವೇಳೆ ಯಾರನ್ನಾದರೂ ಕತ್ತೆ ಎಂದು ಕರೆದರೆ ತಕ್ಷಣ ಆ ವ್ಯಕ್ತಿಗೆ ಸಿಟ್ಟು ಬರುತ್ತದೆ. ಏಕೆಂದರೆ, ದಡ್ಡ ಎಂಬರ್ಥ ನೀಡುತ್ತದೆ. ಆದರೆ ಇದೇ ಕತ್ತೆ ಮನುಷ್ಯನಿಗೆ ಹೆಚ್ಚು ಉಪಯುಕ್ತ ಪ್ರಾಣಿಯೂ ಹೌದು. ಕತ್ತೆಯ ಹಾಲು ಇತರ ಪ್ರಾಣಿಗಳ ಹಾಲಿಗಿಂತಲೂ ದುಬಾರಿ ಮತ್ತು ಅಪರೂಪ. ಕತ್ತೆಯ ಹಾಲನ್ನು ಸೌಂದರ್ಯವರ್ಧಕಗಳಲ್ಲಿಯೂ ಬಳಸುತ್ತಾರೆ. ಕತ್ತೆಯಲ್ಲಿರುವ ಬಹುಪಯೋಗಿ ಗುಣಗಳು, ಮಹತ್ವವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಪಂಚಮಹಾಭೂತ ಲೋಕೋತ್ಸವದಲ್ಲಿ ಕತ್ತೆ ಪ್ರದರ್ಶನ ಏರ್ಪಡಿಸಲಾಗಿದೆ. ಸಿದ್ದಗಿರಿ ಕೃಷಿ ಮತ್ತು ಪಶುಸಂಗೋಪನಾ ಇಲಾಖೆ ವತಿಯಿಂದ ಪ್ರಾಣಿ ಪ್ರದರ್ಶನ ಆಯೋಜಿಸಲಾಗಿತ್ತು.

ಫೆಬ್ರವರಿ 21 ರಿಂದ 23 ರ ನಡುವೆ ನಡೆದ ಮೂರು ದಿನಗಳ ಈ ಪ್ರದರ್ಶನದಲ್ಲಿ ಹಸು, ಎಮ್ಮೆ, ಮೇಕೆ, ಕುದುರೆ, ಕತ್ತೆ, ನಾಯಿ ಮತ್ತು ಸ್ಥಳೀಯ ಜಾತಿಯ ಬೆಕ್ಕುಗಳು ಭಾಗವಹಿಸಿದ್ದವು. ಪ್ರದರ್ಶನ ನೋಡಲು ರೈತರು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿದ್ದರು. ಪ್ರಾಣಿಗಳ ಪ್ರದರ್ಶನ ಮಾತ್ರವಲ್ಲ, ಅವುಗಳ ಬಗ್ಗೆ ಮಾಹಿತಿ ಹಾಗೂ ಪ್ರಾಣಿ ಸೌಂದರ್ಯ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.

ಕತ್ತೆ ತಳಿ ಅಭಿವೃದ್ಧಿಗೆ ಪ್ರಯತ್ನ: ಕನೇರಿ ಮಠದಲ್ಲಿ ಸ್ಥಳೀಯ ಪ್ರಾಣಿಗಳ ಆರೈಕೆ ಮಾಡುವುದರೊಂದಿಗೆ ಸ್ಥಳೀಯ ತಳಿಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಠದಲ್ಲಿ ಸ್ಥಳೀಯ ಹಸುಗಳಿಗೆ ಗೋಶಾಲೆ ನಿರ್ಮಾಣ ಮಾಡಲಾಗಿದೆ. ಬೀದಿ ನಾಯಿಗಳಿಗೆ ಶಾಲೆಯನ್ನು ಮಠ ಹೊಂದಿದ್ದು, ಇಲ್ಲಿ ಸಾವಿರಾರು ಬೀದಿ ನಾಯಿಗಳನ್ನು ಸಾಕಲಾಗುತ್ತಿದೆ. ಇದಲ್ಲದೇ ಎರಡು ಹೊತ್ತಿನ ಊಟ ನೀಡಲಾಗುತ್ತದೆ. ಆದರೆ ಹಸು, ಎಮ್ಮೆ, ನಾಯಿಗಳ ಜೊತೆಗೆ ಕತ್ತೆಗಳ ತಳಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕತ್ತೆಗಳಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

ಪ್ರದರ್ಶನಕ್ಕಾಗಿ ಮಠದ ಮೈದಾನದಲ್ಲಿ ಭವ್ಯ ಮಂಟಪ ನಿರ್ಮಿಸಲಾಗಿತ್ತು. ಉತ್ತಮವಾದ ಹಸು, ಗೂಳಿಗೆ 1 ಲಕ್ಷ, ಎಮ್ಮೆಗೆ 51 ಸಾವಿರ, ದೇಸಿ ಘೋಡ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುದುರೆಗೆ 1 ಲಕ್ಷ ರೂ ಬಹುಮಾನ ನೀಡಲಾಯಿತು. ಈ ಬಾರಿ ಪ್ರದರ್ಶನದಲ್ಲಿ ಕತ್ತೆಗಳೂ ಭಾಗವಹಿಸಿದ್ದರಿಂದ ಅವುಗಳಿಗೂ ಸೌಂದರ್ಯ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಗಿದೆ. ಆದ್ರೆ, ಈ ಪ್ರದರ್ಶನದ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ.

ಒಂದು ಕತ್ತೆ ದಿನಕ್ಕೆ 1 ಲೀಟರ್ ಹಾಲು ನೀಡುತ್ತದೆ. ಲೀಟರ್‌ಗೆ 7 ರಿಂದ 10 ಸಾವಿರ ರೂ. ಬೆಲೆ ಇದೆ. ಕತ್ತೆ ಹಾಲನ್ನು ಸೌಂದರ್ಯವರ್ಧಕಗಳ ತಯಾರಿಕೆ ಬಳಸಲಾಗುತ್ತದೆ. ಲ್ಯಾಕ್ಟೋಸ್‌ ಅಲರ್ಜಿ ಇರುವವರಿಗೆ ಈ ಹಾಲು ಉಪಯುಕ್ತ. ಕತ್ತೆ ಹಾಲಿನಲ್ಲಿರುವ ಪ್ರೋಟೀನ್​ಗಳು ಆ್ಯಂಟಿಬಯೋಟಿಕ್​ಗಳ ರೂಪದಲ್ಲಿರುತ್ತವೆ. ಹಾಗಾಗಿ ಇದು ವೈರಸ್​ ಮತ್ತು ಬ್ಯಾಕ್ಟೀರಿಯಾದಿಂದಾಗುವ ಹೊಟ್ಟೆನೋವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ರಕ್ತ ಪರಿಚಲನೆ ಉತ್ತಮಗೊಳಿಸುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಮನ ಸೆಳೆದ ಸೇನೆಯ ಶ್ವಾನಗಳ ಸಾಹಸ ಪ್ರದರ್ಶನ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.