ETV Bharat / bharat

ದೇಶಕ್ಕೆ 'ಶಾರ್ಟ್​ಕಟ್'​ ರಾಜಕೀಯ ಅಗತ್ಯವಿಲ್ಲ.. ಸುಸ್ಥಿರ ಅಭಿವೃದ್ಧಿ ಬೇಕು: ಪ್ರಧಾನಿ ಮೋದಿ - ಭ್ರಷ್ಟಾಚಾರ

ಶಾರ್ಟ್​ಕಟ್ ರಾಜಕಾರಣ ಮಾಡುವ, ತೆರಿಗೆದಾರರ ಹಣವನ್ನು ಲೂಟಿ ಮಾಡುವ ಮತ್ತು ಸುಳ್ಳು ಭರವಸೆಗಳ ಮೂಲಕ ಅಧಿಕಾರ ಹಿಡಿಯುವ ರಾಜಕಾರಣಿಗಳ ವಿರುದ್ಧ ಜನರು ಜಾಗರೂಕರಾಗಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

country-doesnt-need-shortcut-politics-pm-modi
ದೇಶಕ್ಕೆ 'ಶಾರ್ಟ್​ಕಟ್'​ ರಾಜಕೀಯ ಅಗತ್ಯವಿಲ್ಲ... ಸುಸ್ಥಿರ ಅಭಿವೃದ್ಧಿ ಬೇಕು: ಪ್ರಧಾನಿ ಮೋದಿ
author img

By

Published : Dec 11, 2022, 8:59 PM IST

ನಾಗ್ಪುರ (ಮಹಾರಾಷ್ಟ್ರ): ದೇಶಕ್ಕೆ ಸುಸ್ಥಿರ ಅಭಿವೃದ್ಧಿಯ ಅಗತ್ಯವಿದೆಯೇ ಹೊರತು ಶಾರ್ಟ್​ಕಟ್ (ಅಡ್ಡದಾರಿ) ರಾಜಕೀಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ಇದೇ ವೇಳೆ ಕೆಲವು ರಾಜಕೀಯ ಪಕ್ಷಗಳು ದೇಶದ ಆರ್ಥಿಕತೆಯನ್ನು ನಾಶಮಾಡಲು ಪ್ರಯತ್ನಿಸುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ 75 ಸಾವಿರ ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಉದ್ಘಾಟಿಸಿ ಮಾತನಾಡಿದ ಮೋದಿ, ಈ ಹಿಂದೆ ತೆರಿಗೆದಾರರ ಹಣವು ಭ್ರಷ್ಟಾಚಾರ ಮತ್ತು ಮತಬ್ಯಾಂಕ್ ರಾಜಕಾರಣದಲ್ಲಿ ವ್ಯರ್ಥವಾಗುತ್ತಿತ್ತು. ಆದರೆ, ಕಳೆದ ಎಂಟು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಮಾನವ ಸ್ಪರ್ಶದಿಂದ ಮಾಡಲಾಗಿದೆ ಎಂದು ತಿಳಿಸಿದರು.

ಇಂದು ನಾಗ್ಪುರದಲ್ಲಿ ಪ್ರಾರಂಭಿಸಲಾದ ಮತ್ತು ಉದ್ಘಾಟನೆಗೊಂಡ ಯೋಜನೆಗಳು ಅಭಿವೃದ್ಧಿಯ ಸಮಗ್ರ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತವೆ. ಶಾರ್ಟ್‌ಕಟ್ ರಾಜಕಾರಣ ಮಾಡುವ, ತೆರಿಗೆದಾರರ ಹಣವನ್ನು ಲೂಟಿ ಮಾಡುವ ಮತ್ತು ಸುಳ್ಳು ಭರವಸೆಗಳ ಮೂಲಕ ಅಧಿಕಾರ ಹಿಡಿಯುವ ರಾಜಕಾರಣಿಗಳ ವಿರುದ್ಧ ಜನರು ಜಾಗರೂಕರಾಗಿರಬೇಕು. ಶಾರ್ಟ್​ಕಟ್​ ರಾಜಕೀಯದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು.

ಎಲ್ಲ ರಾಜ್ಯಗಳ ಒಗ್ಗಟ್ಟಿನ ಶಕ್ತಿ, ಪ್ರಗತಿ ಮತ್ತು ಅಭಿವೃದ್ಧಿಯ ಮೂಲಕ ಅಭಿವೃದ್ಧಿ ಹೊಂದಿದ ಭಾರತವು ನಿಜ ಆಗಬಹುದು. ನಾವು ಅಭಿವೃದ್ಧಿಯ ಕಡೆಗೆ ಸಂಕುಚಿತ ಮನೋಭಾವ ಹೊಂದಿದರೆ, ಅವಕಾಶಗಳು ಸಹ ಸೀಮಿತವಾಗಲಿವೆ. ಕಳೆದ ಎಂಟು ವರ್ಷಗಳಲ್ಲಿ ನಾವು 'ಸಬ್​ ಕಾ ಸಾಥ್, ಸಬ್​ ಕಾ ವಿಶ್ವಾಸ್ ಮತ್ತು ಸಬ್​ ಕಾ ಪ್ರಯಾಸ್​ದೊಂದಿಗೆ ಮನಸ್ಥಿತಿ ಮತ್ತು ಮನೋಭಾವವನ್ನು ಬದಲಾಯಿಸಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಗೋವಾದಲ್ಲಿ ಮನೋಹರ್ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.