ನವದೆಹಲಿ: ಹೆಚ್ಚುತ್ತಿರುವ ಇಂಧನ ಬೆಲೆ ಏರಿಕೆ ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಿ ಕೆಲಸ ಮಾಡಬೇಕಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತವೆ ಎಂಬ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂಬಂಧ ಮಾತನಾಡಿರುವ ಕೇಂದ್ರ ಬ್ಯಾಂಕ್ನ ಗವರ್ನರ್, ಕೋವಿಡ್ ನಿಂದ ಆದ ಒತ್ತಡವನ್ನು ಕಡಿಮೆಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರೋಕ್ಷ ತೆರಿಗೆ ಹೆಚ್ಚಳ ಮಾಡಿವೆ. ಹೀಗಾಗಿ ಇಂಧನ ಬೆಲೆಯಲ್ಲಿ ನಿರಂತರ ಹೆಚ್ಚಳವಾಗುತ್ತಿದೆ. ಇದನ್ನು ಇಳಿಕೆ ಮಾಡಿ ಜನರ ಮೇಲಿನ ಬಾರ ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಕ್ರಮ ಕೈಗೊಳ್ಳಬೇಕು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ವೆಚ್ಚದ ಮೇಲೆ ಪರಿಣಾಮ ಬೀರುತ್ತವೆ. ಎಲ್ಲ ಚಟುವಟಿಕೆಗಳ ಮೇಲೆ ಈ ದರ ಹೆಚ್ಚಳ ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆಗೆ ಇಂಧನ ದರ ಹೆಚ್ಚಳ ಕಾರಣವಾಗುತ್ತಿದೆ. ಕಾರು ಮತ್ತು ಬೈಕುಗಳನ್ನು ಬಳಸುವ ಪ್ರಯಾಣಿಕರು ಮಾತ್ರವಲ್ಲ ಇದು ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚಿನ ಇಂಧನ ಬೆಲೆಗಳು ಉತ್ಪಾದನಾ ವೆಚ್ಚ, ಸಾರಿಗೆ ಮತ್ತು ಇತರ ಅಂಶಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಆರ್ಬಿಐ ಗವರ್ನರ್ ಕಳವಳ ವ್ಯಕ್ತಪಡಿಸಿದ್ದಾರೆ.
ಓದಿ: ಕ್ರಿಪ್ಟೋಕರೆನ್ಸಿಗೆ RBI ಕಳವಳ: 'ಪ್ರತ್ಯೇಕ ಡಿಜಿಟಲ್ ಕರೆನ್ಸಿ ರೂಪಿಸುತ್ತಿರುವ ಕೇಂದ್ರ ಬ್ಯಾಂಕ್'- ದಾಸ್
ಇದೇ ವೇಳೆ ಮಾತನಾಡಿರುವ ಅವರು ಡಿಜಿಟಲ್ ಕರೆನ್ಸಿ ಸಾಧ್ಯತೆಗಳ ಬಗ್ಗೆ ಈಗಾಗಲೇ ಕೇಂದ್ರ ಬ್ಯಾಂಕ್ ಈ ಬಗ್ಗೆ ಕಾರ್ಯಪ್ರವೃತ್ತವಾಗಿದೆ. ಇದು ಕ್ರಿಪ್ಟೋ ಕರೆನ್ಸಿಗಿಂತ ವಿಭಿನ್ನವಾಗಿರಲಿದೆ. ನಾವು ತಂತ್ರಜ್ಞಾನ ಬೆಳವಣಿಗೆಯಲ್ಲಿ ಹಿಂದೆ ಬೀಳುವುದಿಲ್ಲ. ಬ್ಲಾಕ್ ಚೈನ್ ತಂತ್ರಜ್ಞಾನದ ಎಲ್ಲ ಅವಶ್ಯಕತೆಗಳನ್ನ ಹಾಗೂ ಅನುಕೂಲತೆಗಳನ್ನು ನಾವು ಬಳಕೆ ಮಾಡಿಕೊಳ್ಳುತ್ತೇವೆ. ಆದರೆ ಕ್ರಿಪ್ಟೋಕರೆನ್ಸಿ ಬಗ್ಗೆ ಕಾಳಜಿ ಹೊಂದಿದ್ದೇವೆ ಎಂದು ಕೇಂದ್ರ ಬ್ಯಾಂಕ್ ಗವರ್ನರ್ ಹೇಳಿದ್ದಾರೆ.