ನವೆದೆಹಲಿ: ಭಾರತದಲ್ಲಿ 46,254 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 83,13,877ಕ್ಕೆ ಏರಿದೆ.
514 ಜನ ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1,23,611ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 53,357 ಜನ ಕೋವಿಡ್-19 ನಿಂದ ಗುಣಮುಖರಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 76,56,478ಕ್ಕೆ ಏರಿದೆ.
ನಿನ್ನೆ 12,09,609 ಮಾದರಿಗಳನ್ನು ಪರೀಕ್ಷಿಸಿದ್ದು, ನವೆಂಬರ್ 3ರವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳು 11,29,98,959 ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ.