ETV Bharat / bharat

ಭಾರತದಲ್ಲಿ 21,566 ಮಂದಿಗೆ ಕೊರೊನಾ ದೃಢ: ಫ್ರಾನ್ಸ್​ನಲ್ಲಿ 2ನೇ ಬೂಸ್ಟರ್ ಡೋಸ್‌ಗೆ ಸಿದ್ಧತೆ - Narendra Modi has written a letter to all vaccinators l

ಭಾರತದಲ್ಲಿ ಕಳೆದೊಂದು ದಿನದಲ್ಲಿ ಕಂಡುಬಂದ ಕೋವಿಡ್ ಪ್ರಕರಣಗಳು ಹಾಗು ಸಾಂಕ್ರಾಮಿಕ ಕುರಿತ ಇತ್ತೀಚೆಗಿನ ಜಾಗತಿಕ ವಿದ್ಯಮಾನಗಳ ಮಾಹಿತಿ ಇಲ್ಲಿದೆ.

ಕೊರೊನಾ
Corona virus in India
author img

By

Published : Jul 21, 2022, 10:46 AM IST

Updated : Jul 21, 2022, 10:51 AM IST

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 21,566 ಹೊಸ ಕೋವಿಡ್​​-19 ಪ್ರಕರಣಗಳು ದೃಢಪಟ್ಟಿವೆ. ಈ ಅವಧಿಯಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಮೃತರ ಸಂಖ್ಯೆ 5,25,870ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸದ್ಯ ದೇಶದಲ್ಲಿ 1,48,881 ಸಕ್ರಿಯ ಪ್ರಕರಣಗಳಿವೆ. ರಾಷ್ಟ್ರೀಯ ಕೋವಿಡ್​​ ಚೇತರಿಕೆ ದರ ಶೇ.98.47 ರಷ್ಟಿದ್ದರೆ, ಸಾವಿನ ದರ ಶೇ.1.20 ಇದೆ. ಕಳೆದೊಂದು ದಿನದಲ್ಲಿ 18,294 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,31,50,434. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನದಡಿ ಈವರೆಗೆ 200,91,91,969 ಲಸಿಕಾ ಡೋಸ್​ ನೀಡಲಾಗಿದೆ. ನಿನ್ನೆ 29,12,855 ಡೋಸ್ ವ್ಯಾಕ್ಸಿನ್​ ನೀಡಲಾಗಿದೆ.

1. ವ್ಯಾಕ್ಸಿನೇಟರ್‌ಗಳಿಗೆ ಪತ್ರ ಬರೆದ ಮೋದಿ: ಭಾರತವು ತನ್ನ ಪ್ರಜೆಗಳಿಗೆ 200 ಕೋಟಿಗೂ.ಅಧಿಕ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡುವ ಮೂಲಕ ಮಹತ್ವದ ಮೈಲುಗಲ್ಲು ದಾಟಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ವ್ಯಾಕ್ಸಿನೇಟರ್‌ಗಳಿಗೆ (ಲಸಿಕೆ ಹಾಕುವವರು) ಅವರ ಪ್ರಯತ್ನಗಳನ್ನು ಪ್ರಶಂಸಿಸಿ ಪತ್ರವೊಂದನ್ನು ಬರೆದಿದ್ದಾರೆ. ಸಾಂಕ್ರಾಮಿಕವು ಸ್ಫೋಟಗೊಂಡ ಬಳಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ಸಾಧನೆಯ ಬಗ್ಗೆ ಮುಂಬರುವ ಪೀಳಿಗೆಗಳು ಹೆಮ್ಮೆ ಪಡಲಿವೆ ಎಂದು ಮೋದಿ ಒತ್ತಿ ಹೇಳಿದ್ದಾರೆ.

2. ಜಮ್ಮು ಕಾಶ್ಮೀರದಲ್ಲಿ ಮಾಸ್ಕ್ ಕಡ್ಡಾಯ: ಹೆಚ್ಚುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಜಿಲ್ಲಾಡಳಿತವು ಬುಧವಾರ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದೆ. ಎಲ್ಲಾ ಜಿಲ್ಲೆ, ವಲಯ ಅಧಿಕಾರಿಗಳು ಕಚೇರಿಯಲ್ಲಿ ಫೇಸ್ ಮಾಸ್ಕ್ ಬಳಕೆ ಮಾಡುವುದು ಕಡ್ಡಾಯ. ಜೊತೆಗೆ ಶಾಲಾ ಆಡಳಿತಗಳು, ಶಾಪಿಂಗ್ ಮಾಲ್‌ಗಳು, ಸಿನಿಮಾ ಥಿಯೇಟರ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುವಂತೆ ಸೂಚಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ 333 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

3. ಫ್ರಾನ್ಸ್‌ನಲ್ಲಿ 2ನೇ ಬೂಸ್ಟರ್ ಡೋಸ್: ಫ್ರಾನ್ಸ್​ನಲ್ಲಿ ಅರ್ಹ ನಾಗರಿಕರಿಗೆ ಎರಡನೇ ಕೋವಿಡ್ ಬೂಸ್ಟರ್ ಡೋಸ್​ ನೀಡಲು ಸಿದ್ಧತೆ ನಡೆಯುತ್ತಿದೆ ಎಂದು ಫ್ರೆಂಚ್ ಪತ್ರಿಕೆಯೊಂದು ವರದಿ ಮಾಡಿದೆ. 18-59 ವಯಸ್ಸಿನ ವಯಸ್ಕರಿಗೆ, ಗರ್ಭಿಣಿಯರಿಗೆ ಹಾಗೂ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ 2ನೇ ಬೂಸ್ಟರ್ ಡೋಸ್ ನೀಡಲಾಗುವುದು. ಸುಮಾರು ಐದು ಮಿಲಿಯನ್ ಜನರನ್ನು ಗುರಿಯಾಗಿಸಿಕೊಂಡು ಹೊಸದಾಗಿ ಈ ಲಸಿಕಾ ಅಭಿಯಾನ ವಿಸ್ತರಿಸಲಾಗಿದೆ. ಮೊದಲ ಬೂಸ್ಟರ್ ಪಡೆದು ಕನಿಷ್ಠ 3 ತಿಂಗಳಾದವರು ಹಾಗು 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರು ತಿಂಗಳ ನಂತರ ವ್ಯಾಕ್ಸಿನ್​ ನೀಡಲಾಗುತ್ತದೆ.

ಇದನ್ನೂ ಓದಿ: ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಿದೆ: ಸಿಎಂ ಬೊಮ್ಮಾಯಿ

Last Updated : Jul 21, 2022, 10:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.