ಮುಂಬೈ (ಮಹಾರಾಷ್ಟ್ರ): ಕೋ-ವಿನ್ ಅಪ್ಲಿಕೇಶನ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಎರಡು ದಿನಗಳವರೆಗೆ ವ್ಯಾಕ್ಸಿನೇಷನ್ ಡ್ರೈವ್ ಸ್ಥಗಿತಗೊಂಡಿದೆ ಎಂಬ ವರದಿಗಳ ಮಧ್ಯೆ, ಮಹಾರಾಷ್ಟ್ರ ಆರೋಗ್ಯ ಇಲಾಖೆ ಜನವರಿ 17-18 ರಲ್ಲಿ ಯಾವುದೇ ಕೋವಿಡ್ -19 ವ್ಯಾಕ್ಸಿನೇಷನ್ ಸೆಷನ್‌ಗಳನ್ನು ಯೋಜಿಸಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮುಂದಿನ ವಾರದಿಂದ ಈ ಪ್ರಕ್ರಿಯೆ ಮುಂದುವರಿಯಲಿವೆ ಎಂದು ಹೇಳಿದೆ.
"ಕೋವಿಡ್ ವ್ಯಾಕ್ಸಿನೇಷನ್ ಸೆಷನ್ ಅನ್ನು ಜ.17 ಅಥವಾ 18 ರಂದು ಯೋಜಿಸಲಾಗಿಲ್ಲ. ಆದ್ದರಿಂದ ರದ್ದತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮುಂದಿನ ವಾರದಲ್ಲಿ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಕೋವಿಡ್ ವ್ಯಾಕ್ಸಿನೇಷನ್ ಸೆಷನ್‌ಗಳನ್ನು ಆಯೋಜಿಸಲಾಗುವುದು" ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೋ-ವಿನ್ ಆ್ಯಪ್‌ನ ತಾಂತ್ರಿಕ ಸಮಸ್ಯೆಗಳಿಂದಾಗಿ ಕೋವಿಡ್ -19 ಲಸಿಕೆಯನ್ನು ಜನವರಿ 18 ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಈ ಹಿಂದೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದೆ.
"ಕೋ-ವಿನ್ ಅಪ್ಲಿಕೇಶನ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಲಸಿಕೆಯನ್ನು 2 ದಿನಗಳವರೆಗೆ ನಿಲ್ಲಿಸಲಾಗಿದೆ ಮತ್ತು ದೋಷವನ್ನು ಅನ್ನು ಕೇಂದ್ರ ಸರ್ಕಾರವು ಸರಿಪಡಿಸುತ್ತಿದೆ. ಆದ್ದರಿಂದ, ಜನವರಿ 17-18ರವರೆಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಕೇಂದ್ರ ಸರ್ಕಾರವು ಕೋ-ವಿನ್ ಅಪ್ಲಿಕೇಷನ್‌ನಲ್ಲಿ ಆನ್‌ಲೈನ್ ನೋಂದಣಿಯ ಸಮಸ್ಯೆಗಳನ್ನು ಬಗೆಹರಿಸಿದಾಗ ಪುನರಾರಂಭಗೊಳ್ಳುತ್ತದೆ" ಎಂದು ಬಿಎಂಸಿ ಹೇಳಿದೆ.
ಕೋ-ವಿನ್ (ಕೋವಿಡ್ ವ್ಯಾಕ್ಸಿನ್ ಇಂಟಲಿಜೆನ್ಸ್ ವರ್ಕ್) ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಭಿವೃದ್ಧಿಪಡಿಸಿದ ಆನ್‌ಲೈನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ. ಇದು ಲಸಿಕೆ ದಾಸ್ತಾನುಗಳ ನೈಜ-ಸಮಯದ ಮಾಹಿತಿ, ಶೇಖರಣಾ ತಾಪಮಾನ ಮತ್ತು ಕೋವಿಡ್-19 ಲಸಿಕೆಗಾಗಿ ಫಲಾನುಭವಿಗಳ ವೈಯಕ್ತಿಕ ಟ್ರ್ಯಾಕಿಂಗ್ ಅನ್ನು ಸುಗಮಗೊಳಿಸುತ್ತದೆ. ವ್ಯಾಕ್ಸಿನೇಷನ್ ಸೆಷನ್‌ಗಳನ್ನು ನಡೆಸುವಾಗ ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಎಲ್ಲಾ ಹಂತದ ಪ್ರೋಗ್ರಾಂ ವ್ಯವಸ್ಥಾಪಕರಿಗೆ ಸಹಾಯ ಮಾಡುತ್ತದೆ.
ಶನಿವಾರ ಪ್ರಧಾನಿ ಮೋದಿ ವ್ಯಾಕ್ಸಿನೇಷನ್ ಡ್ರೈವ್ಗೆ ಚಾಲನೆ ನೀಡಿದ ನಂತರ, ಮಹಾರಾಷ್ಟ್ರದಲ್ಲಿ ಸಿಎಂ ಉದ್ಧವ್ ಠಾಕ್ರೆ ಅಭಿಯಾನಕ್ಕೆ ಚಾಲನೆ ನೀಡಿದ್ರು. ಸುಮಾರು 18,338 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ರಾಜ್ಯದಾದ್ಯಂತ 285 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗಿದೆ.