ETV Bharat / bharat

India Covid: ದೇಶದಲ್ಲಿ ಹೊಸದಾಗಿ 1.94 ಲಕ್ಷ ಮಂದಿಗೆ ಕೋವಿಡ್​.. 24 ಗಂಟೆಯಲ್ಲಿ 442 ಮಂದಿ ಸಾವು

ದೇಶದಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದ್ದು, ಒಂದೇ ದಿನದಲ್ಲಿ 1 ಲಕ್ಷದ 94 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

Corona updates in india
Corona updates in india
author img

By

Published : Jan 12, 2022, 9:24 AM IST

Updated : Jan 12, 2022, 9:42 AM IST

ನವದೆಹಲಿ: ದೇಶದಲ್ಲಿ ಹೊಸದಾಗಿ 1,94,720 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, 442 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಒಂದೇ ದಿನದಲ್ಲಿ 60,405 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 9,55,319ಕ್ಕೆ ಏರಿಕೆಯಾಗಿದೆ. ದಿನವೊಂದಕ್ಕೆ ಕೋವಿಡ್ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವವರಲ್ಲಿ ಶೇಕಡಾ 11.05ರಷ್ಟು ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹಿಂದಿನ ದಿನಕ್ಕೆ ಹೋಲಿಸಿದರೆ 26,657 ಮಂದಿಯಷ್ಟು ಸೋಂಕಿತರು ಅಥವಾ ಸೋಂಕು ಪ್ರಮಾಣ ಶೇಕಡಾ 15.8ರಷ್ಟು ಹೆಚ್ಚಾಗಿದೆ. ಅಂದ ಹಾಗೆ ಮಂಗಳವಾರ ದೇಶದಲ್ಲಿ 1, 68, 063 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.

ಈವರೆಗೆ ಕೊರೊನಾ ಕಾರಣದಿಂದಾಗಿ 4,84,655 ಮಂದಿ ಸಾವನ್ನಪ್ಪಿದ್ದು, 3,46,30,536 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಮಿಕ್ರಾನ್ ಪೀಡಿತರ ಸಂಖ್ಯೆ 4,868ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ವೈದ್ಯರಿಗೆ ಕೊರೊನಾ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದೆ. ವೈದ್ಯರಲ್ಲೂ ಕೊರೊನಾ ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದ್ದು, ಸುಮಾರು 481 ರೆಸಿಡೆಂಟ್​ ವೈದ್ಯರಲ್ಲಿ ಕೊರೊನಾ ಕಾಣಿಸಿಕೊಂಡಿದೆ ಎಂದು ಮಹಾರಾಷ್ಟ್ರದ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಸಂಘದ ಅಧ್ಯಕ್ಷ ಡಾ.ಅವಿನಾಶ್​ ದಹಿಫಲೆ ಮಾಹಿತಿ ನೀಡಿದ್ದಾರೆ.

Last Updated : Jan 12, 2022, 9:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.