ETV Bharat / bharat

ದೇಶದಲ್ಲಿ ಕೊರೊನಾ ನಿಯಮಗಳು ಈ ತಿಂಗಳಾಂತ್ಯಕ್ಕೆ ಕೊನೆ.. ಸಾರ್ವಜನಿಕ ಸ್ಥಳದಲ್ಲಿ 'ಮಾಸ್ಕ್ ಮಾತ್ರ ಕಡ್ಡಾಯ'

ದೇಶದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ವಿಪತ್ತು ನಿರ್ವಹಣಾ ಕಾಯ್ದೆಯಡಿ ವಿಧಿಸಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಈ ತಿಂಗಳ ಕೊನೆಯಿಂದ ತೆರವು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

corona-rules
ಕೊರೊನಾ ನಿಯಮಗಳು
author img

By

Published : Mar 23, 2022, 3:23 PM IST

ನವದೆಹಲಿ: ದೇಶಾದ್ಯಂತ ಇತ್ತೀಚಿನ ದಿನಗಳಲ್ಲಿ ಕೊರೊನಾ ಹಾವಳಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಹಿಂದೆ ಕೋವಿಡ್​ ನಿಯಂತ್ರಣಕ್ಕೆ ವಿಧಿಸಿದ್ದ ನಿಯಮಾವಳಿಗಳು/ಮಾರ್ಗಸೂಚಿಗಳು ಸಹ ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿವೆ. ಕೋವಿಡ್​ ತೀವ್ರತೆ ತಗ್ಗಿದ ಪರಿಣಾಮ ವಿಧಿಸಲಾಗಿದ್ದ ಎಲ್ಲಾ ಕೊರೊನಾ ನಿರ್ಬಂಧಗಳನ್ನು ಮಾರ್ಚ್​ 31 ರಿಂದ ತೆರವು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುವುದು ಮಾತ್ರ ಕಡ್ಡಾಯವಿರಲಿದೆ.

ಈ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಮಾತನಾಡಿ, ದೇಶದಲ್ಲಿ ಕೊರೊನಾ ತೀವ್ರತೆ ಕಡಿಮೆಯಾಗಿದೆ. ಲಸಿಕೆ ನೀಡಿಕೆ ಬಳಿಕ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಎಲ್ಲ ಕೊರೊನಾ ನಿಯಮಗಳನ್ನು ಮಾರ್ಚ್​ 31 ರಿಂದ ತೆರವು ಮಾಡಲು ಸರ್ಕಾರ ಮುಂದಾಗಿದೆ. ಆದಾಗ್ಯೂ ಜನರು ಮಾಸ್ಕ್​​ ಧರಿಸುವುದನ್ನು ಬಿಡುವಂತಿಲ್ಲ ಎಂದು ಹೇಳಿದ್ದಾರೆ. ಕೋವಿಡ್-ಸುರಕ್ಷತಾ ಕ್ರಮಗಳಿಗಾಗಿ ಇದ್ದ ವಿಪತ್ತು ನಿರ್ವಹಣಾ ಕಾಯ್ದೆಯು ಇನ್ಮುಂದೆ ಅನ್ವಯಿಸುವುದಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.

ಚೀನಾ, ದಕ್ಷಿಣ ಕೊರಿಯಾ, ವಿಯೆಟ್ನಾಂ, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ BA.2-ಒಮಿಕ್ರಾನ್‌ನ ಉಪ ರೂಪಾಂತರದ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದು ಗಮನಾರ್ಹವಾಗಿದೆ. ದೇಶದಲ್ಲಿ ಕೊರೊನಾ ಲಸಿಕಾಕರಣವು ವಿಶ್ವದಲ್ಲೇ ಉತ್ತಮ ಸ್ಥಿತಿಯಲ್ಲಿದೆ. ಮಾರ್ಚ್ 23ರ ವೇಳೆಗೆ ದೇಶದ 1,81,89,15,234 ಜನರಿಗೆ ಲಸಿಕೆ ನೀಡಲಾಗಿದೆ. ಅಲ್ಲದೇ, ಈಚೆಗಷ್ಟೇ 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ವಿತರಿಸುವ ಅಭಿಯಾನ ಶುರುವಾಗಿದೆ.

ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಯೋಗಿ ಆದಿತ್ಯನಾಥ್​ಗೆ ನೋಟಿಸ್​ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.