ನಾಂದೇಡ್: ಗಂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಮನನೊಂದ ಪತ್ನಿ ತನ್ನ 3 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಲೋಹಾ ಪಟ್ಟಣದಲ್ಲಿ ನಡೆದಿದೆ.
ದಂಪತಿ ಚಾಪೆಗಳನ್ನು ಮಾರುವ ಕೆಲಸ ಮಾಡುತ್ತಿದ್ದರು. ಮಹಾರಾಷ್ಟ್ರ ಸರ್ಕಾರ ಘೋಷಿಸಿದ ಮಿನಿ ಲಾಕ್ಡೌನ್ನಿಂದ ವ್ಯಾಪಾರ ಕುಂಠಿತಗೊಂಡಿದೆ. ಹೀಗಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಇದರಿಂದ ಬೇಸತ್ತು ಮಹಿಳೆ ಸಾವಿನ ದಾರಿ ತುಳಿದಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಕೊರೊನಾಗೆ ತುತ್ತಾಗಿದ್ದ ಗಂಡನನ್ನು ಚಿಕಿತ್ಸೆಗಾಗಿ ಲೋಹಾದ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಮೂರೇ ದಿನಕ್ಕೆ ಪತಿ ಸಾವನ್ನಪ್ಪಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಮಹಿಳೆ ಇನ್ನು ಜೀವನ ನಡೆಸುವುದು ಕಷ್ಟ ಎಂದು ಭಾವಿಸಿ ತನ್ನ ಪುತ್ರನೊಂದಿಗೆ ಸಾವಿಗೆ ಶರಣಾಗಿದ್ದಾರೆ.
ಇದನ್ನೂ ಓದಿ : ಸುರ್ಜೇವಾಲಾ, ದಿಗ್ವಿಜಯ್ ಸಿಂಗ್, ಹರ್‌ಸಿಮ್ರತ್ ಕೌರ್‌ಗೆ ಕೊರೊನಾ ಸೋಂಕು