ನವದೆಹಲಿ: ಭಾರತದಲ್ಲಿ ಹೊಸದಾಗಿ 26,041 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 3,36,78,786 ಕ್ಕೇರಿದೆ. ವೈರಸ್ಗೆ ನಿನ್ನೆ 276 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 4,47,194ಕ್ಕೆ ಏರಿಕೆ ಕಂಡಿದೆ.
ಆರು ದಿನಗಳ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳು ಕಡಿಮೆಯಾಗಿದ್ದು, ಸದ್ಯ 2,99,620 ಆ್ಯಕ್ಟಿವ್ ಪ್ರಕರಣಗಳಿವೆ. ಸೆಪ್ಟೆಂಬರ್ 26 ರಂದು 29,621 ಮಂದಿ ಗುಣಮುಖರಾಗಿದ್ದು, ಈವರೆಗೆ 3,29,31,972 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಹೊಸದಾಗಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಪೈಕಿ 15,951 ಕೇಸ್ಗಳು ಕೇರಳವೊಂದರಲ್ಲೇ ಪತ್ತೆಯಾಗಿದ್ದು, 165 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲೀಗ 1,63,280 ಆ್ಯಕ್ಟಿವ್ ಕೇಸ್ಗಳಿವೆ
ಕಳೆದ 24 ಗಂಟೆಗಳಲ್ಲಿ 38,18,362 ಕೋವಿಡ್ ವ್ಯಾಕ್ಸಿನ್ ಡೋಸ್ಗಳನ್ನು ಹಾಕಲಾಗಿದ್ದು, ಈವರೆಗೆ 86,01,59,011 ಲಸಿಕಾ ಡೋಸ್ಗಳನ್ನು ನೀಡಲಾಗಿದೆ.
ನಿನ್ನೆ ಒಂದೇ ದಿನ 11,65,006 ಸ್ವ್ಯಾಬ್ ಟೆಸ್ಟ್ಗಳನ್ನು ಮಾಡಲಾಗಿದ್ದು, ಈವರೆಗೆ 56,44,08,251 ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.