ETV Bharat / bharat

ಏಷ್ಯಾದ ಜನರ ಮೇಲೆ ಕೊರೊನಾ ಪ್ರಭಾವ.. ಅಪೌಷ್ಠಿಕತೆ ಮೇಲೆ ಬೆಳಕು ಚೆಲ್ಲಿದ ವಿಶ್ವಸಂಸ್ಥೆ ವರದಿ..

ವರದಿಯು ಪೋಷಕಾಂಶಯುಕ್ತ ಆಹಾರವನ್ನು ಪಡೆಯುವ ಸಮಗ್ರ ವಿಧಾನಗಳು ಹಾಗೂ ಅಗತ್ಯ ನೀತಿಗಳ ತುರ್ತಿನ ಕುರಿತು ಹೆಚ್ಚು ಒತ್ತು ನೀಡುತ್ತದೆ. ಬಹುಮುಖ್ಯವಾಗಿ ತಾಯಿ ಮತ್ತು ಮಕ್ಕಳಲ್ಲಿನ ಆರೋಗ್ಯ ಹಾಗೂ ಆಹಾರದ ಸಮಸ್ಯೆಗಳನ್ನು ನಿವಾರಿಸಲು ಈ ವರದಿಯು ಗಮನಹರಿಸುತ್ತದೆ..

Corona Impact Report from four Special Agencies of the United Nations
ಏಷ್ಯಾದ ಜನರ ಮೇಲೆ ಕೊರೊನಾ ಪ್ರಭಾವ
author img

By

Published : Jan 31, 2021, 7:38 PM IST

ನವದೆಹಲಿ : ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳ ಮೇಲೆ ಕೊರೊನಾದ ಪ್ರಭಾವ ಹೆಚ್ಚಿರಲಿದೆ. ಸುಮಾರು ಎರಡು ಶತಕೋಟಿ ಜನರ ಆಹಾರ ಮತ್ತು ಪೋಷಣೆಯನ್ನು ಸುಧಾರಿಸುವ ಪ್ರಯತ್ನದಲ್ಲಿರುವ ಏಷ್ಯಾ ಮತ್ತು ಪೆಸಿಫಿಕ್‌ ಭಾಗಗಳಲ್ಲಿ ಇದು ಮತ್ತಷ್ಟು ಅಪಾಯ ತಂದೊಡ್ಡಲಿದೆ ಎಂದು ವಿಶ್ವಸಂಸ್ಥೆಯ ನಾಲ್ಕು ವಿಶೇಷ ಏಜೆನ್ಸಿಗಳು ಇಂದು ಹೊಸ ವರದಿ ಪ್ರಕಟಿಸಿವೆ.

ಏಕಾಏಕಿ ಕೋವಿಡ್-19 ವೈರಸ್​ನ ಪ್ರಭಾವದಿಂದಾಗಿ, ಆರ್ಥಿಕತೆ ಮತ್ತು ವೈಯಕ್ತಿಕ ಜೀವನೋಪಾಯಕ್ಕೆ ಆಗಿರುವ ಹಾನಿಗೂ ಮುಂಚೆಯೇ 1.9 ಶತಕೋಟಿ ಜನರಿಗೆ ಆರೋಗ್ಯಕರ ಆಹಾರ ಪಡೆಯಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹೆಚ್ಚಿದ ಬೆಲೆ : ಹಣ್ಣುಗಳು, ತರಕಾರಿಗಳು ಮತ್ತು ಡೈರಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಇರುವುದರಿಂದ, ಏಷ್ಯಾ ಮತ್ತು ಪೆಸಿಫಿಕ್‌ನ ಬಡ ಜನರಿಗೆ ಆರೋಗ್ಯಕರ ಆಹಾರವನ್ನು ಪಡೆಯುವುದು ಅಸಾಧ್ಯವಾಗಿದೆ. ಮುಖ್ಯವಾಗಿ ಮಕ್ಕಳು ಹಾಗೂ ತಾಯಂದಿರಿಗೆ ಆಹಾರ ಸುರಕ್ಷತೆ ಮತ್ತು ಪೋಷಣೆ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆ : ಜಾಗತಿಕವಾಗಿ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಅಥವಾ ಏಷ್ಯಾ ಮತ್ತು ಪೆಸಿಫಿಕ್​ನಲ್ಲಿ 350 ದಶಲಕ್ಷಕ್ಕೂ ಹೆಚ್ಚು ಜನರು 2019ರಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಪ್ರದೇಶದಾದ್ಯಂತ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 74.5 ಮಿಲಿಯನ್ ಮಕ್ಕಳು ಮತ್ತು 31.5 ಮಿಲಿಯನ್ ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.

ಈ ಮಕ್ಕಳಲ್ಲಿ ಹೆಚ್ಚಿನವರು ದಕ್ಷಿಣ ಏಷ್ಯಾದವರು( ಸುಮಾರು 56 ಮಿಲಿಯನ್ ಮಕ್ಕಳು) ಎಂಬುದು ತಿಳಿದು ಬಂದಿದೆ. ಆಶ್ಚರ್ಯವೆಂಬಂತೆ, ಇದೇ ಸಮಯದಲ್ಲಿ ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್​ನಲ್ಲಿ 5ವರ್ಷಕ್ಕಿಂತ ಕಡಿಮೆ ವಯಸ್ಸಿನ 14.5 ಮಿಲಿಯನ್ ಮಕ್ಕಳು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ ಎಂಬುದು ವರದಿಯಲ್ಲಿ ತಿಳಿಸಲಾಗಿದೆ.

ಕೊಳ್ಳುವ ಸಾಮರ್ಥ್ಯ ಕುಸಿತ : ಕಳಪೆ ಆಹಾರ ಮತ್ತು ಅಸಮರ್ಪಕ ಪೌಷ್ಠಿಕಾಂಶದ ಸೇವನೆಯು ನಿರಂತರ ಸಮಸ್ಯೆಯಾಗಿದೆ. ಆರೋಗ್ಯಕರ ಆಹಾರ ಸಾಕಷ್ಟು ಕ್ಯಾಲೊರಿಗಳನ್ನು ಒದಗಿಸಿದರೂ ಕೂಡ ಪೌಷ್ಠಿಕಾಂಶದ ಕೊರತೆಯಿರುವ ಆಹಾರದ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಪೌಷ್ಠಿಕಾಂಶದ ಆಹಾರವನ್ನು ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ತಲುಪಿಸಲು ಸಾಧ್ಯವಾಗದ ಸ್ಥಿತಿಯನ್ನ ಇದು ತೋರಿಸುತ್ತದೆ.

ಓದಿ: ಕೊರೊನಾ ಮೂಲ ಪತ್ತೆಗೆ ವುಹಾನ್ ಮಾರುಕಟ್ಟೆಗೆ ಡಬ್ಲ್ಯೂಹೆಚ್​ಒ ತಂಡ ಭೇಟಿ..!

ಏಷ್ಯಾ ಮತ್ತು ಪೆಸಿಫಿಕ್​ನಲ್ಲಿ ಆಹಾರ ವ್ಯವಸ್ಥೆಗಳ ರೂಪಾಂತರವನ್ನು ವರದಿಯು ಹೇಳುತ್ತದೆ. ಇದು ಪೌಷ್ಠಿಕ ಆಹಾರದ ಕೈಗೆಟುಕುವಿಕೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಮತ್ತು ಪೌಷ್ಠಿಕ, ಸುರಕ್ಷಿತ ಮತ್ತು ಸುಸ್ಥಿರ ಆಹಾರಕ್ರಮ, ಆರೋಗ್ಯಕರ ಆಹಾರವನ್ನು ಎಲ್ಲರಿಗೂ, ಎಲ್ಲೆಡೆ ಕಲ್ಪಿಸುವ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.

ವರದಿಯು ಪೋಷಕಾಂಶಯುಕ್ತ ಆಹಾರವನ್ನು ಪಡೆಯುವ ಸಮಗ್ರ ವಿಧಾನಗಳು ಹಾಗೂ ಅಗತ್ಯ ನೀತಿಗಳ ತುರ್ತಿನ ಕುರಿತು ಹೆಚ್ಚು ಒತ್ತು ನೀಡುತ್ತದೆ. ಬಹುಮುಖ್ಯವಾಗಿ ತಾಯಿ ಮತ್ತು ಮಕ್ಕಳಲ್ಲಿನ ಆರೋಗ್ಯ ಹಾಗೂ ಆಹಾರದ ಸಮಸ್ಯೆಗಳನ್ನು ನಿವಾರಿಸಲು ಈ ವರದಿಯು ಗಮನಹರಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.