ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ನಿನ್ನೆ 16 ಸಾವಿರದಷ್ಟಿದ್ದ ಸೋಂಕು ಪ್ರಕರಣಗಳು ಇಂದು 13 ಸಾವಿರಕ್ಕೆ ಇಳಿಕೆ ಕಂಡಿದೆ.
ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 13,405 ಹೊಸ ಕೊರೊನಾ ಕೇಸ್ಗಳು ದಾಖಲಾಗಿ, 235 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
-
#Unite2FightCorona#LargestVaccineDrive#OmicronVariant
— Ministry of Health (@MoHFW_INDIA) February 22, 2022 " class="align-text-top noRightClick twitterSection" data="
𝗖𝗢𝗩𝗜𝗗 𝗙𝗟𝗔𝗦𝗛https://t.co/0YC8N8yiS0 pic.twitter.com/kZMPnKbYSj
">#Unite2FightCorona#LargestVaccineDrive#OmicronVariant
— Ministry of Health (@MoHFW_INDIA) February 22, 2022
𝗖𝗢𝗩𝗜𝗗 𝗙𝗟𝗔𝗦𝗛https://t.co/0YC8N8yiS0 pic.twitter.com/kZMPnKbYSj#Unite2FightCorona#LargestVaccineDrive#OmicronVariant
— Ministry of Health (@MoHFW_INDIA) February 22, 2022
𝗖𝗢𝗩𝗜𝗗 𝗙𝗟𝗔𝗦𝗛https://t.co/0YC8N8yiS0 pic.twitter.com/kZMPnKbYSj
ಅಲ್ಲದೇ, ಒಂದೇ ದಿನದಲ್ಲಿ 34,226 ಜನರು ಸೋಂಕಿನಿಂದ ಗುಣಮುಖರಾಗುವ ಮೂಲಕ ದೇಶದಲ್ಲಿ ಒಟ್ಟಾರೆ 4,21,58,510 ಮಂದಿ ಪೂರ್ಣ ಚೇತರಿಕೆ ಕಂಡಿದ್ದಾರೆ. ಗುಣಮುಖರಾಗಿರುವವರ ಪ್ರಮಾಣ ಶೇಕಡಾ 98.33 ರಷ್ಟಿದೆ.
ನಿನ್ನೆಯಿಂದ 24 ಗಂಟೆಗಳ ಅವಧಿಯಲ್ಲಿ 235 ಮಂದಿ ಕೊರೊನಾಗೆ ಬಲಿಯಾಗುವ ಮೂಲಕ ಈವರೆಗೆ ದೇಶದಲ್ಲಿ ಸುಮಾರು 5,12,344 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲೀಗ ಶೇ.1.24 ರಷ್ಟು ಮಾತ್ರ ಡೆತ್ರೇಟ್ ಇದೆ. ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 1,81,075 ಮಾತ್ರ ಇದ್ದು, ಪಾಸಿಟಿವಿಟಿ ರೇಟ್ ಶೇ.0.42 ರಷ್ಟು ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ವ್ಯಾಕ್ಸಿನೇಷನ್: ದೇಶದಲ್ಲಿ ಈವರೆಗೆ ಸುಮಾರು 1,75,83,27,441 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ.
ಇದನ್ನೂ ಓದಿ: ಕೊಲಂಬಿಯಾದಲ್ಲಿ 24 ವಾರಗಳವರೆಗೆ ಗರ್ಭಪಾತ ಅಪರಾಧವಲ್ಲ: ಕೋರ್ಟ್ ಐತಿಹಾಸಿಕ ತೀರ್ಪು