ಪುರಿ (ಒಡಿಶಾ): ಜಗನ್ನಾಥ ದೇವಾಲಯದ ಒಳ ಪ್ರದೇಶಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕಾಗಿ ಹರಿಯಾಣ ಮೂಲದ ಯುವತಿ ವಿರುದ್ಧ ಒಡಿಶಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಗನ್ನಾಥ ದೇವಾಲಯದ ಒಳಗೆ ಫೋಟೋಗಳನ್ನು ತೆಗೆದು ಇನ್‌ಸ್ಟಾಗ್ರಾಂನ ತನ್ನ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಕ್ಕಾಗಿ ಶಾಲಿನಿ ಪಾಸಿ ವಿರುದ್ಧ ಪುರಿಯ ಸಿಂಘದ್ವಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಕಲಾಗಿದೆ.

ಇದನ್ನೂ ಓದಿ: ಪ್ರತಿಭಟನಾ ನಿರತ ರೈತರ ಸ್ಥಳಕ್ಕೆ ಭೇಟಿ ನೀಡಿದ ಮಹಾತ್ಮ ಗಾಂಧಿ ಮೊಮ್ಮಗಳು
ಪುರಿಯ ಜಗನ್ನಾಥ ದೇವಸ್ಥಾನದ ಆವರಣದ ಒಳಗೆ ಮೊಬೈಲ್ ಫೋನ್ ಮತ್ತು ಫೋಟೋ ತೆಗೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪುರಿಯ ಜಗನ್ನಾಥ ದೇವಾಲಯದ ಆವರಣದೊಳಗೆ ಹರಿಯಾಣದ ಶಾಲಿನಿ ಪಾಸಿ ಅಕ್ರಮವಾಗಿ ಹಲವು ಛಾಯಾಚಿತ್ರಗಳನ್ನು ತೆಗೆದುಕೊಂಡು ಅವುಗಳನ್ನು ಸಾಮಾಜಿಕ ಜಲತಾಣದಲ್ಲಿ ವೈರಲ್ ಮಾಡಿದ್ದಾರೆ ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಯುವತಿಯ ಈ ನಡೆಯು ಜಗನ್ನಾಥ ದೇವಾಲಯ ಕಾಯ್ದೆ 1955ರ ಸೆಕ್ಷನ್ 30-ಎ (4) (ಸಿ) ಅಡಿಯಲ್ಲಿ ಅಪರಾಧವಾಗಿದೆ. ಇದಲ್ಲದೆ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವ ಮೂಲಕ, ಆರೋಪಿ ದೇವಾಲಯದ ಭದ್ರತೆಗೆ ಅಪಾಯವನ್ನು ಉಂಟುಮಾಡಿದ್ದಾರೆ. ಇಂತಹ ಚಟುವಟಿಕೆಗಳು ಲಕ್ಷಾಂತರ ಭಕ್ತರ ಮನೋಭಾವಕ್ಕೆ ಧಕ್ಕೆ ತಂದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.
