ETV Bharat / bharat

LPG price: ದೇಶದ ಜನತೆಗೆ ರಕ್ಷಾಬಂಧನ್​ ಗಿಫ್ಟ್​​ ನೀಡಿದ ಕೇಂದ್ರ ಸರ್ಕಾರ.. ಎಲ್​ಪಿಜಿ ಸಿಲಿಂಡರ್‌ ಬೆಲೆ 200 ರೂ. ಇಳಿಕೆ - Gas subsidy

LPG Price: ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಇಳಿಕೆ ಮಾಡಲು ಎಂದು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

cooking-gas-lpg-price-cut-by-rs-200-per-cylinder-says-i-and-b-minister-anurag-thakur
ಎಲ್​ಪಿಜಿ ಸಿಲಿಂಡರ್‌ ಬೆಲೆ 200 ರೂ. ಇಳಿಕೆ
author img

By ETV Bharat Karnataka Team

Published : Aug 29, 2023, 4:15 PM IST

Updated : Aug 29, 2023, 6:09 PM IST

ನವದೆಹಲಿ: ರಕ್ಷಾಬಂಧನ್​ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜನರಿಗೆ ಸಿಹಿ ಸುದ್ದಿ ನೀಡಿದೆ. ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಇಳಿಕೆ ಮಾಡಲು ಎಂದು ಕೇಂದ್ರ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ವಿಷಯವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಓಣಂ ಮತ್ತು ರಕ್ಷಾಬಂಧನ್ ಸಂದರ್ಭದಲ್ಲಿ ಲಕ್ಷಾಂತರ ಸಹೋದರಿಯರು ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬಳಕೆದಾರರಿಗೆ ಪ್ರಧಾನಿ ಮೋದಿ ಉಡುಗೊರೆ ನೀಡಿದ್ದಾರೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಲು ಪ್ರಧಾನಿ ನಿರ್ಧರಿಸಿದ್ದಾರೆ ಎಂದು ಹೇಳಿದರು.

  • VIDEO | "On the occasion of Onam and Rakshabandhan, PM Modi has decided that LPG price will be reduced by Rs 200 for all consumers," says Union Minister @ianuragthakur during Cabinet briefing. pic.twitter.com/t4qLmtsWQf

    — Press Trust of India (@PTI_News) August 29, 2023 " class="align-text-top noRightClick twitterSection" data=" ">

ಇದೇ ವೇಳೆ, ಉಜ್ವಲ ಯೋಜನೆಯಡಿ 75 ಲಕ್ಷ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಉಚಿತವಾಗಿ ನೀಡಲಾಗುತ್ತದೆ. ಉಜ್ವಲ ಫಲಾನುಭವಿಗಳಿಗೆ ಸಬ್ಸಿಡಿ ಈಗ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 400 ರೂ. ಆಗಿದೆ. ಈಗಾಗಲೇ ಉಜ್ವಲ ಫಲಾನುಭವಿಗಳು ಪ್ರತಿ ಸಿಲಿಂಡರ್​ಗೆ 200 ಸಬ್ಸಿಡಿ ರೂ. ಸಬ್ಸಿಡಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ನವದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 1,103 ರೂ. ಇದೆ. ಬುಧವಾರದಿಂದ ಈ ಸಿಲಿಂಡರ್​ ಬೆಲೆ 903 ರೂ. ಆಗಲಿದೆ. ಉಜ್ವಲ ಫಲಾನುಭವಿಗಳಿಗೆ 703 ರೂ.ಗೆ ಪ್ರತಿ ಸಿಲಿಂಡರ್​ ಸಿಗಲಿದೆ. ಅಲ್ಲದೇ, ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 75 ಲಕ್ಷ ಉಜ್ವಲ ಸಂಪರ್ಕಗಳನ್ನು ಒದಗಿಸಲು ಮುಂದಾಗಿದೆ. ಇದರಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳ ಸಂಖ್ಯೆ 10.35 ಕೋಟಿಗೆ ಹೆಚ್ಚಳವಾಗಲಿದೆ.

ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಗ್ಗದ ಎಲ್‌ಪಿಜಿ ಸಿಲಿಂಡರ್​ ನೀಡುವ ಬಗ್ಗೆ ಭರವಸೆ ನೀಡುತ್ತಿದೆ. ಇದಕ್ಕೆ ಕೌಂಟರ್​ ಆಗಿ ಕೇಂದ್ರ ಸರ್ಕಾರವು ಅಡುಗೆ ಅನಿಲದ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಕಡಿತದ ಘೋಷಣೆ ಮಾಡಿದೆ.

ಕರ್ನಾಟಕದಲ್ಲಿ ಬೆಲೆ ಎಷ್ಟು?: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ಪ್ರತಿ ಸಿಲಿಂಡರ್​ ಬೆಲೆ 1,105 ರೂ. ಇದೆ. ನಾಳೆಯಿಂದ ಹೊಸ ದರ ಅನ್ವಯವಾಗಲಿದೆ. ಅದೇ ರೀತಿಯಾಗಿ ಶಿವಮೊಗ್ಗದಲ್ಲಿ 1,116 ರೂ., ಹುಬ್ಬಳ್ಳಿಯಲ್ಲಿ 1,122 ರೂ., ಮೈಸೂರಿನಲ್ಲಿ 1,107 ರೂ., ದಾವಣಗೆರೆಯಲ್ಲಿ 1,120 ರೂ. ಹಾಗೂ ಬೆಳಗಾವಿಯಲ್ಲಿ 1,112 ರೂ. ಇದ್ದು, ಬುಧವಾರದಿಂದ ಹೊಸ ಬೆಲೆ ಜಾರಿಗೆ ಬರಲಿದೆ.

ಚಂದ್ರಯಾನ-3 ಯಶಸ್ವಿಯಲ್ಲಿ ಮಹಿಳೆಯರ ಕೊಡುಗೆ: ಮತ್ತೊಂದೆಡೆ, ಮಾಧ್ಯಮಗೋಷ್ಟಿಯಲ್ಲಿ ಸಚಿವ ಸಚಿವ ಅನುರಾಗ್ ಠಾಕೂರ್ ಇಸ್ರೋ ಮಹಿಳಾ ವಿಜ್ಞಾನಿಗಳ ಸಾಧನೆ ಬಗ್ಗೆಯೂ ಉಲ್ಲೇಖಿಸಿ, ಚಂದ್ರಯಾನ-3 ಮಿಷನ್‌ನ ಯಶಸ್ವಿ ಲ್ಯಾಂಡಿಂಗ್‌ನಲ್ಲಿ ನಮ್ಮ ಮಹಿಳಾ ವಿಜ್ಞಾನಿಗಳ ಕೊಡುಗೆ ನೀಡಿ ಎಂದು ಸಚಿವ ಸಂಪುಟವು ಸಂತಸ ವ್ಯಕ್ತಪಡಿಸಿದೆ ಎಂದು ಹೇಳಿದರು.

ಇದು ಮುಂದಿನ ಪೀಳಿಗೆಯ ಮಹಿಳಾ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಕುರಿತು ದೂರದೃಷ್ಟಿ ಮತ್ತು ನಾಯಕತ್ವಕ್ಕಾಗಿ ಸಚಿವ ಸಂಪುಟವು ಪ್ರಧಾನಿ ಮೋದಿ ಅವರಿಗೂ ಧನ್ಯವಾದ ಅರ್ಪಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. (ಪಿಟಿಐ)

ಇದನ್ನೂ ಓದಿ: ’ದೇಶದಲ್ಲೀಗ 50 ಕೋಟಿ ಜನಧನ ಖಾತೆಗಳನ್ನು ತೆರೆಯಲಾಗಿದೆ’’: ನಿರ್ಮಲಾ ಸೀತಾರಾಮನ್

Last Updated : Aug 29, 2023, 6:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.