ETV Bharat / bharat

ಕೂಚ್ ಬೆಹಾರ್ ಫೈರಿಂಗ್ ಪ್ರಕರಣ​: ಸಿಐಎಸ್​ಎಫ್​ ಸಿಬ್ಬಂದಿಗೆ ಕ್ಲೀನ್​ ಚಿಟ್​ ನೀಡಿದ ಚುನಾವಣಾ ಆಯೋಗ

author img

By

Published : Apr 11, 2021, 12:43 PM IST

ಕೂಚ್ ಬೆಹಾರ್ ಗುಂಡಿನ ದಾಳಿ ಸಂಬಂಧಿಸಿದಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ಸಿಬ್ಬಂದಿಗೆ ಚುನಾವಣಾ ಆಯೋಗ ಕ್ಲೀನ್​ ಚಿಟ್​ ನೀಡಿದೆ.

EC
ಚುನಾವಣಾ ಆಯೋಗ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೂಚ್ ಬೆಹಾರ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿ ಸಂಬಂಧ ಸಿಐಎಸ್​ಎಫ್​ ಸಿಬ್ಬಂದಿಯನ್ನ ಭಾರತದ ಚುನಾವಣಾ ಆಯೋಗ (ಇಸಿಐ) ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.

'ಮತದಾರರ ಪ್ರಾಣ ಉಳಿಸಲು' ಹಾಗೂ 'ಆತ್ಮರಕ್ಷಣೆ'ಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್)ಸಿಬ್ಬಂದಿಗೆ ಗುಂಡು ಹಾರಿಸುವುದು ಅನಿವಾರ್ಯವಾಗಿತ್ತು ಎಂದು ಹೇಳಿ ಚುನಾವಣಾ ಆಯೋಗ ಸಿಐಎಸ್​ಎಫ್​ಗೆ ಕ್ಲೀನ್​ ಚಿಟ್​ ನೀಡಿದೆ.

ಹೆಚ್ಚಿನ ಓದಿಗೆ: ಬಂಗಾಳದ ಕೂಚ್​ ಬೆಹಾರ್​ ಹಿಂಸಾಚಾರ... ಮುಂದಿನ 3 ದಿನ ರ‍್ಯಾಲಿ ನಡೆಸದಂತೆ ನಿರ್ಬಂಧ!

ಶನಿವಾರ ಮತದಾನದ ವೇಳೆ ಕೂಚ್ ಬೆಹಾರ್ ಜಿಲ್ಲೆಯ ಮಾತಾಭಂಗ ಹಾಗೂ ಶೀತಲ್​​ಕೂಚಿ ಪ್ರದೇಶದಲ್ಲಿ ಗಲಾಟೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಸಿಐಎಸ್​ಎಫ್​ ಸಿಬ್ಬಂದಿ ಗುಂಡು ಹಾರಿಸಿದ್ದರು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಇದನ್ನು ವಿರೋಧಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಪಕ್ಷವು, ಇದು ಕೇಂದ್ರದ ಪಡೆಗಳು ನಡೆಸಿರುವ ಘೋರ ಹತ್ಯೆ ಇದು ಎಂದು ಆರೋಪಿಸಿತ್ತು.

ಮುಂದಿನ ಮೂರು ದಿನಗಳ ಕಾಲ ಕೂಚ್​ ಬೆಹಾರದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಸಭೆ ಹಾಗೂ ರ‍್ಯಾಲಿ ನಡೆಸದಂತೆ, ಯಾವುದೇ ರಾಜಕೀಯ ಮುಖಂಡರು ಜಿಲ್ಲೆಯ ಗಡಿ ಪ್ರವೇಶಿಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.