ಚಂಡೀಗಢ: ಅತ್ಯಾಚಾರ, ಕೊಲೆ ಆರೋಪ ಹೊತ್ತಿರುವ ಸ್ವಯಂಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ಗೆ ಪೆರೋಲ್ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಇದನ್ನು ಪ್ರಶ್ನಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಕೀಲ ಹರಿಯಾಣ ಸರ್ಕಾರಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ. ಅಲ್ಲದೇ, ತಕ್ಷಣವೇ ರಾಮ್ ರಹೀಮ್ ಅವರ ಪೆರೋಲ್ ಅನ್ನು ತಿರಸ್ಕರಿಸಬೇಕು ಎಂದು ನೋಟಿಸ್ನಲ್ಲಿ ಒತ್ತಾಯಿಸಲಾಗಿದೆ.
ಹರಿಯಾಣ ಸರ್ಕಾರ ರಾಮ್ ರಹೀಮ್ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಹಲವು ಬಾರಿ ಪೆರೋಲ್ ನೀಡಲಾಗಿದೆ. ಈಗ ನೀಡಿರುವ ರಜೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಹೈಕೋರ್ಟ್ ವಕೀಲರು ಕಳುಹಿಸಿರುವ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಅಲ್ಲದೇ, ರಾಮ್ ರಹೀಮ್ ಅವರ ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಇದರಿಂದಾಗಿ ಆತನ ಅನುಯಾಯಿಗಳು ಹೆಚ್ಚಾಗುತ್ತಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಕೊಡುವ ಗೌರವ ಇದಲ್ಲ. ಯೂಟ್ಯೂಬ್‌ನಲ್ಲಿ ಹಾಕಲಾದ ವಿಡಿಯೋವನ್ನು ಕೂಡಲೇ ಅಳಿಸುವಂತೆಯೂ ನೋಟಿಸ್ನಲ್ಲಿ ಒತ್ತಾಯಿಸಲಾಗಿದೆ.
ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ 40 ದಿನಗಳ ಪೆರೋಲ್ ಪಡೆದಿದ್ದಾರೆ. ಸಾಧ್ವಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿ 20 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ.
ಯಾವಾಗೆಲ್ಲಾ ಸಿಕ್ಕಿತ್ತು ಪೆರೋಲ್: ರಾಮ್ ರಹೀಮ್ 2021 ರಲ್ಲಿ 3 ಬಾರಿ ಮತ್ತು 2022 ರಲ್ಲಿ 2 ಬಾರಿ ಜೈಲಿನಿಂದ ಪೆರೋಲ್ ಮೇಲೆ ಹೊರಬಂದಿದ್ದಾರೆ. ಫೆಬ್ರವರಿ 2022 ರಲ್ಲಿ ರಾಮ್ ರಹೀಮ್ 21 ದಿನಗಳ ರಜೆ ತೆಗೆದುಕೊಂಡಿದ್ದರು. ಇದರ ನಂತರ, ಜೂನ್ 2022 ರಲ್ಲಿ ಒಂದು ತಿಂಗಳು ಜೈಲಿನಿಂದ ಹೊರಬಂದಿದ್ದರು.
ನಿಯಮಗಳ ಪ್ರಕಾರ, ರಾಮ್ ರಹೀಮ್ 1 ವರ್ಷದಲ್ಲಿ ಸುಮಾರು 90 ದಿನಗಳ ರಜೆ ಪಡೆಯಬಹುದು. ಇದು 21 ದಿನಗಳ ಪೆರೋಲ್ ಮತ್ತು 70 ದಿನಗಳ ಪೆರೋಲ್ ಅನ್ನು ಒಳಗೊಂಡಿದೆ.
ಓದಿ: ವಧು ಹುಡುಕಲು ಠಾಣೆಗೆ ಕೇಸ್ ನೀಡಿದ್ದ ಕುಬ್ಜನಿಗೆ ಕೂಡಿ ಬಂದ ಕಂಕಣಭಾಗ್ಯ!