ETV Bharat / bharat

Vaccination: ಹಿರಿಯ ವಕೀಲ ಪ್ರಶಾಂತ್​ ಭೂಷಣ್​ ವಿವಾದಾತ್ಮಕ ಟ್ವೀಟ್.. ಆರೋಪ ತಳ್ಳಿ ಹಾಕಿದ ತಜ್ಞರು! - ಹಿರಿಯ ವಕೀಲ ಪ್ರಶಾಂತ್​ ಭೂಷಣ್​ ವಿವಾದಾತ್ಮಕ ಟ್ವೀಟ್

ನಾನು ಲಸಿಕೆ ವಿರೋಧಿಯಲ್ಲ. ಆದರೆ, ಪ್ರಾಯೋಗಿಕವಾಗಿ ಪರೀಕ್ಷಿಸದ ಲಸಿಕೆಗಳನ್ನು ಸಾರ್ವತ್ರಿಕವಾಗಿ ಉತ್ತೇಜಿಸುವುದು ಬೇಜವಾಬ್ದಾರಿತನ ಎಂದಿದ್ದಾರೆ..

ವಕೀಲ ಪ್ರಶಾಂತ್​ ಭೂಷಣ್​
ವಕೀಲ ಪ್ರಶಾಂತ್​ ಭೂಷಣ್​
author img

By

Published : Jun 28, 2021, 7:46 PM IST

Updated : Jun 28, 2021, 8:06 PM IST

ನವದೆಹಲಿ: ಕೋವಿಡ್ 3ನೇ ಅಲೆ ಬಾರದಂತೆ ತಡೆಯಲು ಸರ್ಕಾರವು ವ್ಯಾಕ್ಸಿನೇಷನ್​ಗೆ ಒತ್ತು ನೀಡುತ್ತಿದೆ. ಈವರೆಗೆ ಕೋಟ್ಯಂತರ ಜನ ಲಸಿಕೆಯನ್ನೂ ಪಡೆದಿದ್ದಾರೆ. ಆದರೂ, ವ್ಯಾಕ್ಸಿನ್​ ಬಗೆಗಿನ ವಿವಾದ ಮಾತ್ರ ನಿಂತಿಲ್ಲ. ಹಿರಿಯ ವಕೀಲ ಪ್ರಶಾಂತ್ ಭೂಷಣ್​ ವ್ಯಾಕ್ಸಿನ್ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ನನಗೆ ಕೋವಿಡ್​ ಲಸಿಕೆ ಸಿಕ್ಕಿಲ್ಲ, ವ್ಯಾಕ್ಸಿನ್ ಪಡೆಯುವ ಉದ್ದೇಶ ನನಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

  • The healthy young have hardly any chance of serious effects or dying due to covid. They have a higher chance of dying due to vaccines. The covid recovered have much better natural immunity, than the vaccine gives them. Vaccines may even compromise their acquired natural immunity.

    — Prashant Bhushan (@pbhushan1) June 28, 2021 " class="align-text-top noRightClick twitterSection" data=" ">

ಸರಣಿ ಟ್ವೀಟ್‌ ಮಾಡಿರುವ ಪ್ರಶಾಂತ್ ಭೂಷಣ್, ಕೊರೊನಾದಿಂದ ಆರೋಗ್ಯವಂತ ಯುವಕರು ಗಂಭೀರ ಪರಿಣಾಮ ಎದುರಿಸುವ ಅಥವಾ ಸಾಯುವುದು ತೀರಾ ಕಡಿಮೆ. ಆದರೆ, ಲಸಿಕೆ ಪಡೆದ ನಂತರ ಅವರು ಸಾಯುವ ಸಾಧ್ಯತೆ ಹೆಚ್ಚು. ಕೊರೊನಾದಿಂದ ಚೇತರಿಸಿಕೊಳ್ಳುವವರಲ್ಲಿ ಲಸಿಕೆಗಿಂತಲೂ ಇಮ್ಯುನಿಟಿ ಪವರ್ ಜಾಸ್ತಿ ಇರುತ್ತದೆ ಎಂದಿದ್ದಾರೆ.

  • For the record, I have not taken, nor do I intend to take any Covid Vaccine

ಮಕ್ಕಳಿಗೆ ಈವರೆಗೆ ಕೋವಿಡ್ ಲಸಿಕೆ ಯಾಕೆ ಕಂಡು ಹಿಡಿಯಲಾಗಿಲ್ಲ. ಮಕ್ಕಳಿಗೆ ಲಸಿಕೆ ನೀಡದಿರಲು ಹಲವು ಕಾರಣಗಳನ್ನು ನೀಡಲಾಗ್ತಿದೆ. ವಿಜ್ಞಾನವನ್ನು ಕಡೆಗಣಿಸಿ, ಮೌಢ್ಯವನ್ನು ಬಿತ್ತಲಾಗುತ್ತಿದೆ ಎಂದೂ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೋವಿಡ್‌ ಔಷಧಿ 2ಡಿಜಿ ಮಾರುಕಟ್ಟೆಗೆ ಬಿಡುಗಡೆ - ಡಾ.ರೆಡ್ಡೀಸ್

ನಾನು ಲಸಿಕೆ ವಿರೋಧಿಯಲ್ಲ. ಆದರೆ, ಪ್ರಾಯೋಗಿಕವಾಗಿ ಪರೀಕ್ಷಿಸದ ಲಸಿಕೆಗಳನ್ನು ಸಾರ್ವತ್ರಿಕವಾಗಿ ಉತ್ತೇಜಿಸುವುದು ಬೇಜವಾಬ್ದಾರಿತನ ಎಂದಿದ್ದಾರೆ.

ಆರೋಪ ತಳ್ಳಿ ಹಾಕಿದ ತಜ್ಞರು

ಲಸಿಕೆ ಯುವಕರಿಗೆ ಸುರಕ್ಷಿತವಲ್ಲ ಮತ್ತು ಅವೈಜ್ಞಾನಿಕ ಎಂಬ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಹೇಳಿಕೆಯನ್ನು ಆರೋಗ್ಯ ತಜ್ಞರು ತಳ್ಳಿ ಹಾಕಿದ್ದಾರೆ. ಎರಡನೇ ಅಲೆಯನ್ನು ನಿಯಂತ್ರಿಸಲು ಲಸಿಕೆ ಸಂಪೂರ್ಣ ಸಹಕಾರಿಯಾಗಿದೆ. ಯಾವುದೇ ಲಸಿಕೆಯನ್ನು ಜನರಿಗೆ ನೀಡುವ ಮೊದಲು ಹಲವು ಬಾರಿ ಪರೀಕ್ಷಿಸಲಾಗುತ್ತದೆ ಎಂದು ಡಾ.ಕೋಲ್ ಹೇಳಿದ್ದಾರೆ.

Last Updated : Jun 28, 2021, 8:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.