ETV Bharat / bharat

ನಿರಂತರವಾಗಿ ಪತ್ತೆಯಾಗುತ್ತಿವೆ ಜಿಂಕೆಗಳ ಕಳೇಬರ: ಈವರೆಗೆ 13 ಸಾವು - ನಿರಂತರವಾಗಿ ಪತ್ತೆಯಾಗುತ್ತಿವೆ ಜಿಂಕೆಗಳ ಕಳೇಬರ

ಸಂಘಟನೆಯ ಜೈಸಲ್ಮೇರ್ ಜಿಲ್ಲಾಧ್ಯಕ್ಷ ಸದಾರಾಮ್ ಖಿಲೇರಿ ಅವರು ಈ ಸೋಲಾರ್​ ಕಂಪನಿಯ ಒಳಗೆ ಶೋಧ ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಿದ್ದಾರೆ. ಸೋಲಾರ್ ಪ್ಲಾಂಟ್‌ನ ವ್ಯಾಪ್ತಿಯಲ್ಲಿ ಮಂಗಳವಾರ ಸಹ 6 ಸತ್ತ ಚಿಂಕಾರ ಜಿಂಕೆಗಳು ಪತ್ತೆಯಾಗಿದ್ದವು. ಇದಕ್ಕೂ ಮೊದಲು 2 ಜಿಂಕೆಗಳು ಸಾವಿಗೀಡಾಗಿದ್ದವು ಎಂದು ಸದಾರಾಮ್​ ಮಾಹಿತಿ ನೀಡಿದ್ದಾರೆ.

ನಿರಂತರವಾಗಿ ಪತ್ತೆಯಾಗುತ್ತಿವೆ ಜಿಂಕೆಗಳ ಕಳೇಬರ

author img

By

Published : Jun 23, 2022, 7:41 PM IST

ಜೈಸಲ್ಮೇರ್ (ರಾಜಸ್ಥಾನ) : ಜಿಲ್ಲೆಯ ಲಖಾಸರ್ ಗ್ರಾಮದ ಈಡನ್ ಸೋಲಾರ್ ಪ್ಲಾಂಟ್ ಬಳಿ ಚಿಂಕಾರ ಜಿಂಕೆಗಳ ಕಳೇಬರಗಳು ಪತ್ತೆಯಾಗುತ್ತಲೇ ಇವೆ. ಎರಡು ದಿನಗಳಲ್ಲಿ 13 ಅಪರೂಪದ ಚಿಂಕಾರ ಜಿಂಕೆಗಳ ಮೃತದೇಹಗಳು ಪತ್ತೆಯಾಗಿದ್ದು, ಸೋಲಾರ್ ಕಂಪನಿಯವರೇ ಕೊಂದಿದ್ದಾರೆ ಎಂದು ವನ್ಯಜೀವಿ ಪ್ರೇಮಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕಳೇಬರಗಳು ನಿರಂತರವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಈಡನ್ ಸೋಲಾರ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೋಕರನ್ ಶ್ರೀ ಜಂಭೇಶ್ವರ ಪರಿಸರ ಮತ್ತು ಲೈಫ್ ಡಿಫೆನ್ಸ್ ಸ್ಟೇಟ್ ಸಂಸ್ಥೆಯ ರಾಜಸ್ಥಾನದ ತಂಡವು ಎರಡನೇ ದಿನವೂ ಈಡನ್ ಸೋಲಾರ್ ಪ್ಲಾಂಟ್ ಲಖಾಸರ್​ನಲ್ಲಿ ತಪಾಸಣೆ ನಡೆಸಿದ್ದು, 5 ಮೃತ ಜಿಂಕೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಸಂಘಟನೆಯ ಜೈಸಲ್ಮೇರ್ ಜಿಲ್ಲಾಧ್ಯಕ್ಷ ಸದಾರಾಮ್ ಖಿಲೇರಿ ಅವರು ಈ ಸೋಲಾರ್​ ಕಂಪನಿಯ ಒಳಗೆ ಶೋಧ ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಿದ್ದಾರೆ. ಸೋಲಾರ್ ಪ್ಲಾಂಟ್‌ನ ವ್ಯಾಪ್ತಿಯಲ್ಲಿ ಮಂಗಳವಾರ ಸಹ 6 ಮೃತ ಚಿಂಕಾರ ಜಿಂಕೆಗಳು ಪತ್ತೆಯಾಗಿದ್ದವು. ಇದಕ್ಕೂ ಮೊದಲು 2 ಜಿಂಕೆಗಳು ಸಾವಿಗೀಡಾಗಿದ್ದವು ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.

ಕಂಪನಿಯ ನೌಕರರು ಅರಣ್ಯ ಸಿಬ್ಬಂದಿಯನ್ನು ಒಳಗೆ ಹೋಗಲು ಬಿಡುತ್ತಿಲ್ಲವಂತೆ. ಅಷ್ಟೇ ಅಲ್ಲ, ಅವರು ಸುತ್ತಮುತ್ತಲಿನ ಚಿತ್ರಗಳನ್ನು ತೆಗೆದುಕೊಳ್ಳಲು ಸಹ ಅನುಮತಿಸಲಿಲ್ಲ ಎಂದು ಆರೋಪಿಸಿದ್ದಾರೆ. ಇದಾದ ಬಳಿಕ ಅನುಮಾನದ ಆಧಾರದಲ್ಲಿ ಗಡಿಭಾಗದ ಬಯಲು ಪ್ರದೇಶವನ್ನು ತಂಡ ಪರಿಶೀಲನೆ ನಡೆಸಿದ್ದು, ಇಲ್ಲೂ ಸಹ ಸಿಬ್ಬಂದಿ ಬಂದು ಬೆದರಿಕೆ ಹಾಕಿದ್ದಾರಂತೆ.

ಇದನ್ನೂ ಓದಿ: 4ನೇ ಮದುವೆ ಬಗ್ಗೆ ಕುತೂಹಲಕಾರಿ ಮಾತುಗಳನ್ನಾಡಿದ ಟಾಲಿವುಡ್‌ ಹಿರಿಯ ನಟ ನರೇಶ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.